ಕುಶಾಲನಗರ, ಸೆ. 30: ತೊರೆನೂರು ಗ್ರಾಮದ ಟಿ.ಆರ್.ದೀಪಕ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಆಂಗ್ಲಭಾಷೆಯಲ್ಲಿ ಪಿಎಚ್.ಡಿ.ಪದವಿ ನೀಡಲಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂಗ್ಲಭಾಷೆಯ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ದೀಪಕ್ ಡಾ.ಕೆ.ಟಿ.ಸುನಿತ ಮಾರ್ಗದರ್ಶನದಲ್ಲಿ ಆಂಗ್ಲ ಸಾಹಿತ್ಯ ಮತ್ತು ಭಾಷೆಯಲ್ಲಿ ಮಂಡಿಸಿದ ಎಥ್‍ನಿಕ್ ಸ್ಪೇಸ್ ಇನ್ ಆರ್ಲ್ ಲವ್‍ಲೇಸ್ ಫಿಕ್ಷನ್ ಎ ಪೋಸ್ಟ್ ಕಲೋನಿಯಲ್ ಸ್ಟಡಿ' ಎಂಬ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿ ನೀಡಿದೆ. ಟಿ.ಆರ್.ದೀಪಕ್ ಅವರು ತೊರೆನೂರು ಗ್ರಾಮದ ನಿವೃತ್ತ ಉಪನ್ಯಾಸಕ ಟಿ.ಎ.ರಂಗಸ್ವಾಮಿ ಅವರ ಪುತ್ರ.