ಮಡಿಕೇರಿ, ಸೆ. 30: ಪ್ರಸ್ತುತ ತಾನು ನ್ಯಾಯಾಧೀಶನಾಗಿ ಆಯ್ಕೆ ಆಗಿರುವದೇ ತನ್ನ ಸಾಧನೆ ಎಂದು ಹೇಳಿಕೊಳ್ಳುವದಿಲ್ಲ; ಬದಲಿಗೆ ತಾನು ಪ್ರಕಟಿಸುವ ಪ್ರತಿಯೊಂದು ತೀರ್ಪಿನಲ್ಲೂ ಪರಿಪೂರ್ಣತೆ ಇರಬೇಕು ಎಂಬದೇ ತನ್ನ ಬಯಕೆ ಎಂದು ನೂತನ ನ್ಯಾಯಾಧೀಶರಾಗಿ ಆಯ್ಕೆ ಆಗಿರುವ ಹೊಸೋಕ್ಲು ಸಚಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ. ನ್ಯಾಯಾಲಯವನ್ನು (ಮೊದಲ ಪುಟದಿಂದ) ಜನತೆ ದೇವಾಲಯದಂತೆ ಕಾಣುತ್ತಾರೆ. ಅಂತಹ ನ್ಯಾಯ ದೇಗುಲದಲ್ಲಿ ಜನರಿಗೆ ಉತ್ತಮ ಸೇವೆ ನೀಡುವದೆ ತನ್ನ ಗುರಿ ಎಂದು ಸಚಿನ್ ಹೇಳಿದ್ದಾರೆ. ಸಚಿತ್ ಮೂಲತಃ ಹೆರವನಾಡು ಗ್ರಾಮದ ದಿ. ರಮೇಶ್ ಹಾಗೂ ನಿವೃತ್ತಿ ಶಿಕ್ಷಕಿ ಅಮ್ಮವ್ವ ಅವರ ಪುತ್ರರಾಗಿದ್ದು, ಮಡಿಕೇರಿಯ ಪುಟಾಣಿ ನಗರದಲ್ಲಿ ನೆಲೆಸಿದ್ದಾರೆ.