ಮಡಿಕೇರಿ, ಸೆ. 30: ಕುಟುಂಬ ನಿರ್ವಹಣೆಯೊಂದಿಗೆ ವೃತ್ತಿಯನ್ನೂ ಯಶಸ್ವಿಗೊಳಿಸಿಕೊಳ್ಳಲು ನ್ಯಾಯಾಂಗ ಕ್ಷೇತ್ರ ಮಹಿಳೆಯರಿಗೆ ಅತ್ಯಂತ ಸೂಕ್ತ ಎಂದು ನೂತನವಾಗಿ ರಾಜ್ಯ ನ್ಯಾಯಮೂರ್ತಿಗಳಾಗಿ ಆಯ್ಕೆಗೊಂಡಿರುವ ವೀರಾಜಪೇಟೆ ಅಂಬಟ್ಟಿಯ ಕುಮಾರಿ ಸಲ್ಮಾ ಅಭಿಪ್ರಾಯಪಟ್ಟರು.ನೂತನ ಆಯ್ಕೆ ಬಗ್ಗೆ ಶ್ರೀಯುತರ ಅಭಿಪ್ರಾಯ ಬಯಸಿದಾಗ ಮೇಲಿನಂತೆ (ಮೊದಲ ಪುಟದಿಂದ) ಪ್ರತಿಕ್ರಿಯಿಸಿದ ಸಲ್ಮಾ, ನ್ಯಾಯಮೂರ್ತಿ ಹುದ್ದೆ ಬಯಸುವವರು ಅದಕ್ಕೂ ಮೊದಲು ವಕೀಲ ವೃತ್ತಿಯಲ್ಲಿ ಒಳ್ಳೆಯ ಹಿರಿಯ ವಕೀಲರ ಗರಡಿಯಲ್ಲಿ ಪಳಗುವದು ಅವಶ್ಯಕ ಎಂದರು. ವಕೀಲ ವೃತ್ತಿ ಸಂದರ್ಭ ಕೇವಲ ಪುಸ್ತಕದ ಜ್ಞಾನವಲ್ಲದೆ ಪ್ರಾಯೋಗಿಕವಾಗಿಯೂ ಈ ಕ್ಷೇತ್ರದ ಬಗ್ಗೆ ಅರಿವು ಮೂಡುತ್ತದೆ ಎಂದರು. ಇಂತಹ ಅನುಭವ ಮುಂದೆ ನ್ಯಾಯಾಧೀಶರ ಪರೀಕ್ಷೆಗೆ ನೆರವಾಗುವದು ಎಂದು ವಿವರಿಸಿದರು.
ಕುಮಾರಿ ಸಲ್ಮಾ ಅಂಬಟ್ಟಿ ಗ್ರಾಮದ ಮಾಮಣಿ ಮತ್ತು ದಿವಂಗತ ಸುಲೇಖಾ ಅವರ ಪುತ್ರಿಯಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ವೀರಾಜಪೇಟೆಯ ಸೈಂಟ್ ಆನ್ಸ್ ಶಾಲೆ, ಪಿಯುಸಿಯನ್ನು ಮೂರ್ನಾಡಿನ ಮಾರುತಿ ವಿದ್ಯಾಸಂಸ್ಥೆ ಹಾಗೂ 5 ವರ್ಷದ ಬಿಬಿಎಎಲ್‍ಎಲ್‍ಬಿಯನ್ನು ಮೈಸೂರಿನ ಜೆಎಸ್‍ಎಸ್ ವಿದ್ಯಾಸಂಸ್ಥೆಯಲ್ಲಿ ಪಡೆದಿದ್ದಾರೆ.