ವೀರಾಜಪೇಟೆ, ಅ. 1: ಕಣ್ಣಂಗಾಲ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಕ್ಕೆ ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮ್ಮತ್ತಿಯ ಸೆಸ್ಕಾಂನ ಉಪ ಕಚೇರಿಯ ಲೈನ್ಮನ್ ಹಸನ್ ಎಂಬಾತನನ್ನು ಗ್ರಾಮಾಂತರ ಪೊಲೀಸರು ಇಂದು ಬಂಧಿಸಿ ಜಾಮೀನಿನ ಮೇರೆ ಬಿಡುಗಡೆ ಗೊಳಿಸಿರುವದಾಗಿ ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಅಮ್ಮತ್ತಿಯ ಸೆಸ್ಕಾಂ ಉಪ ಕಚೇರಿಯ ಜೂನಿಯರ್ ಇಂಜಿನಿಯರ್ ರಮೇಶ್ ಪೊಲೀಸ್ ಠಾಣೆಯಲ್ಲಿ ಜಾಮೀನು ನೀಡಲಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಕುಮಾರ್ ಆರಾಧ್ಯ ತಿಳಿಸಿದ್ದಾರೆ.