ವೀರಾಜಪೇಟೆ, ಸೆ. 30: ಇಲ್ಲಿನ ಅಮ್ಮತ್ತಿ ಒಂಟಿಯಂಗಡಿ ಬಳಿಯ ಕಣ್ಣಂಗಾಲ ಗ್ರಾಮದಲ್ಲಿ ನಿನ್ನೆ ದಿನ ಬೆಳಿಗ್ಗೆ ನಡೆದ ವಿದ್ಯುತ್ ಸ್ಪರ್ಶದಿಂದ ಬಾಲಕ ಕಾಶಿಯಪ್ಪ (6) ಎಂಬಾತ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮ್ಮತ್ತಿಯ ಸೆಸ್ಕಾಂ ಉಪ ಕಚೇರಿಯ ಜೂನಿಯರ್ ಇಂಜಿನಿಯರ್ ರಮೇಶ್ ಎಂಬವರನ್ನು ಗ್ರಾಮಾಂತರ ಪೊಲೀಸರು ಇಂದು ಸಂಜೆ ಬಂಧಿಸಿದ್ದಾರೆ. ಬಾಲಕನ ಸಾವಿಗೆ ಸೆಸ್ಕಾಂನ ಅಧಿಕಾರಿಗಳ ನಿರ್ಲಕ್ಷ್ಯವೆ ಕಾರಣ ಎಂದು ಗ್ರಾಮಾಂತರ ಪೊಲೀಸರು ಅಮ್ಮತ್ತಿ ಕಚೇರಿಯ ಜೆ.ಇ.ರಮೇಶ್ ಹಾಗೂ ಲೈನ್ಮನ್ ಹಸನ್ ವಿರುದ್ಧ ಐ.ಪಿ.ಸಿ 304.ಎ ಪ್ರಕಾರ ಪ್ರಕರಣ ದಾಖಲಿಸಿದ್ದರು. ಲೈನ್ಮನ್ ಹಸನ್ ತಲೆ ಮರೆಸಿಕೊಂಡಿರುವದಾಗಿ ಪೊಲೀಸರು ತಿಳಿಸಿದ್ದಾರೆ.