ಮಡಿಕೇರಿ, ಸೆ. 30: ಪ್ರಾಕೃತಿಕ ವಿಕೋಪದಿಂದ ತೊಂದರೆಗೆ ಸಿಲುಕಿರುವ ಸಂತ್ರಸ್ತರ ಕುಟುಂಬಗಳಿಗೆ ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಸಂಚರಿಸಲು ಉಚಿತ ಬಸ್ ಪಾಸ್‍ಗಳನ್ನು ಈ ತನಕ 129 ಕುಟುಂಬಗಳಿಗೆ ಒದಗಿಸಲಾಗಿದೆ ಎಂದು ಮಡಿಕೇರಿ ಘಟಕದ ರಾಜ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕಿ ಗೀತಾ ಮಡಿಕೇರಿ, ಸೆ. 30: ಪ್ರಾಕೃತಿಕ ವಿಕೋಪದಿಂದ ತೊಂದರೆಗೆ ಸಿಲುಕಿರುವ ಸಂತ್ರಸ್ತರ ಕುಟುಂಬಗಳಿಗೆ ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಸಂಚರಿಸಲು ಉಚಿತ ಬಸ್ ಪಾಸ್‍ಗಳನ್ನು ಈ ತನಕ 129 ಕುಟುಂಬಗಳಿಗೆ ಒದಗಿಸಲಾಗಿದೆ ಎಂದು ಮಡಿಕೇರಿ ಘಟಕದ ರಾಜ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕಿ ಗೀತಾ ಪಾಸ್ ನೀಡಿದ್ದು, ಇದುವರೆಗೆ ಪ್ರತಿ ಕುಟುಂಬದ ತಲಾ ಒಬ್ಬರಂತೆ 129 ಮಂದಿಗೆ ಈ ಸೌಲಭ್ಯ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು. ಪ್ರಸಕ್ತ ಸಂಪಾಜೆಯಲ್ಲಿ ನೆಲೆಸಿರುವ 2ನೇ ಮೊಣ್ಣಂಗೇರಿ ಹಾಗೂ ಇತರೆಡೆಯ ಎಲ್ಲಾ ಕುಟುಂಬ ಸದಸ್ಯರು ಬಸ್‍ಪಾಸ್‍ಗೆ ಬೇಡಿಕೆ

(ಮೊದಲ ಪುಟದಿಂದ) ಸಲ್ಲಿಸಿರುವ ಬಗ್ಗೆ ಪ್ರಶ್ನಿಸಿದಾಗ, ಜಿಲ್ಲಾಧಿಕಾರಿಗಳ ಸೂಚನೆಯಂತೆ ಕ್ರಮ ವಹಿಸಲಾಗುವದು ಎಂದು ಅವರು ವಿವರಿಸಿದರು.

ಸಂತ್ರಸ್ತರಿಗೆ ಕಲ್ಪಿಸುವ ಉಚಿತ ಬಸ್‍ಪಾಸ್‍ಗಳ ವೆಚ್ಚವನ್ನು ನಿಯಮಾನುಸಾರ ಜಿಲ್ಲಾಡಳಿತ ಅಥವಾ ಸರಕಾರವು ಸಾರಿಗೆ ಸಂಸ್ಥೆಗೆ ಭರಿಸಲಿರುವದಾಗಿಯೂ ಅವರು ಸ್ಪಷ್ಟಪಡಿಸಿದರು.