ಕುಶಾಲನಗರ, ಸೆ. 30: ಗುಮ್ಮನಕೊಲ್ಲಿಯ ಕ್ರೈಸ್ಟ್ ಶಾಲೆಯಲ್ಲಿ ಅಜ್ಜ, ಅಜ್ಜಿಯರ ದಿನ ಆಯೋಜಿಸಲಾಯಿತು. ಮುಖ್ಯ ಅತಿಥಿಗಳಾಗಿ ಜಾದೂಗಾರ ವಿ.ಕೆ. ನಾರಾಯಣ ಮತ್ತು ಮಂಜುಳಾ ನಾರಾಯಣ ಪಾಲ್ಗೊಂಡಿದ್ದರು. ಹಿಂದಿನ ಮತ್ತು ಇಂದಿನ ತಲೆಮಾರಿನ ಕೊಂಡಿಯಾಗಿರುವ ಅಜ್ಜ, ಅಜ್ಜಿಯರು ಸಂಸ್ಕøತಿ, ಸಂಪ್ರದಾಯವನ್ನು ಯುವಪೀಳಿಗೆ ಮೂಲಕ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವಿ.ಕೆ. ನಾರಾಯಣ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯೋಪಾಧ್ಯಾಯ ಹೆಚ್.ಆರ್. ಉದಯಪ್ರಕಾಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ, ಮಕ್ಕಳು ಹಾಗೂ ಅಜ್ಜ, ಅಜ್ಜಿಯರು ಪಾಲ್ಗೊಂಡಿದ್ದರು. ಇದೇ ಸಂದರ್ಭ ಜಾದೂಗಾರ ವಿ.ಕೆ. ನಾರಾಯಣ ಜಾದೂ ಕಾರ್ಯಕ್ರಮ ನಡೆಸಿಕೊಟ್ಟರು.