ಚೆಟ್ಟಳ್ಳಿ, ಸೆ. 30: ಸಿದ್ದಾಪುರ ಸಮೀಪದ ಬಾಡಗ-ಬಾಣಂಗಾಲ ಮಟ್ಟಂ ಸುನ್ನಿ ಮುಸ್ಲಿಂ ಜಮಾಅತ್ ಸಮಿತಿ ವತಿಯಿಂದ ಕೊಡಗು ಜಿಲ್ಲಾ ಜಂಈಯ್ಯತುಲ್ ಮುಅಲ್ಲಿಮೀನ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮುಸ್ತಫ ಸಖಾಫಿ ಹಾಗೂ ಕೊಡಗು ಜಿಲ್ಲಾ ಜಂಈಯ್ಯತುಲ್ ಮುಅಲ್ಲಿಮೀನ್ ವೆಲ್ಫೇರ್ ವಿಭಾಗದ ಕಾರ್ಯದರ್ಶಿಯಾಗಿ ಆಯ್ಕೆಯಾದ ಹಸೈನಾರ್ ಮಹ್ಳರಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಹಲ್ ಖತೀಬರಾದ ಬಶೀರ್ ಅಝ್ಹರಿ, ಮಟ್ಟಂ ಸುನ್ನಿ ಮುಸ್ಲಿಂ ಜಮಾಅತ್ ಸಮಿತಿ ಅಧ್ಯಕ್ಷÀ ಎಂ ಹುಸೈನ್, ಕಾರ್ಯದರ್ಶಿ ಕೆ. ಉಮ್ಮರ್, ಮಾಜಿ ಅಧ್ಯಕ್ಷ ಎಂ ಮಾಹಿನ್, ಅಧ್ಯಾಪಕ ಅಶ್ರಫ್ ಝೈನಿ ಸೂಫಿ ಉಸ್ತಾದ್, ಪಿ. ಇಬ್ರಾಹಿಂ. ನಸೀರ್, ಜಹಂಗೀರ್ ಹಾಗೂ ಎಸ್‍ವೈಎಸ್ ಎಸ್‍ಎಸ್‍ಎಫ್ ಕಾರ್ಯಕರ್ತರು ಹಾಜರಿದ್ದರು.