ವೀರಾಜಪೇಟೆ, ಸೆ. 30: ವೀಡಿಯೋಗ್ರಫಿ ಮತ್ತು ಫೋಟೋಗ್ರಫಿ ಕ್ಷೇತ್ರದ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಕರ್ನಾಟಕ ವೀಡಿಯೋಗ್ರಫಿ ಮತ್ತು ಫೋಟೋಗ್ರಫಿ ಸಂಸ್ಥೆಯವರು ಪ್ರತಿ ವರ್ಷ ನೀಡುತ್ತಿರುವ ‘ಕರ್ನಾಟಕ ಛಾಯಾರತ್ನ ಪ್ರಶಸ್ತಿ’ಗೆ ವೀರಾಜಪೇಟೆಯ ಹಿರಿಯ ಛಾಯಾಗ್ರಾಹಕ ಒಪೇರಾ ಸ್ಟುಡಿಯೋ ಮಾಲೀಕ ಪಿ.ಎಸ್. ಅಬ್ದುಲ್ ಸತ್ತಾರ್ ಭಾಜನರಾಗಿದ್ದಾರೆ.
ಮೈಸೂರು ಜಿಲ್ಲಾ ಫೋಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಅಂತರ್ರಾಷ್ಟ್ರೀಯ ‘ಡಿಜಿ ಫೋಟೋ ಎಕ್ಸ್‍ಪೋ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡುವದರ ಮೂಲಕ ಸತ್ತಾರ್ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ರಾಜ್ಯಾಧ್ಯಕ್ಷ ಬೆಂಜಮಿನ್ ಭಾಸ್ಕರ್ ಮತ್ತು ಮೈಸೂರಿನ ಎಂ.ಎನ್. ಮಂಜುನಾಥ್ ಹಾಜರಿದ್ದರು.