ಸೋಮವಾರಪೇಟೆ, ಸೆ. 30: ಇಲ್ಲಿನ ಲಯನ್ಸ್ ಸಂಸ್ಥೆಯ ವತಿಯಿಂದ ಗುರುವಂದನಾ ಕಾರ್ಯಕ್ರಮ ಅಂಗವಾಗಿ ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಲಯನ್ಸ್ ಮಾಜಿ ಅಧ್ಯಕ್ಷ ಜೆ.ಸಿ. ಶೇಖರ್, ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಸಮಾಜದ ಎಲ್ಲರಿಂದಲೂ ಗೌರವ ಪಡೆಯುವ ವೃತ್ತಿಯಾಗಿದೆ ಎಂದರು.
ದೇಶಕ್ಕೆ ಒಬ್ಬ ಉತ್ತಮ ಪ್ರಜೆಯನ್ನು ನೀಡುವ ಕಾರ್ಯ ಮಾಡುವ ಶಿಕ್ಷಕರು ಮೊದಲು ತಮ್ಮ ವೃತ್ತಿಯನ್ನು ಗೌರವಿಸಬೇಕಿದೆ. ವಿದ್ಯಾರ್ಥಿಗಳನ್ನು ಸಮಾಜದ ಆಸ್ತಿಯನ್ನಾಗಿ ಮಾಡಿದರೆ ಮಾತ್ರ ಕೆಲಸದಲ್ಲಿ ತೃಪ್ತಿ ಇರುತ್ತದೆ ಎಂದರು.
ಇದೇ ಸಂದರ್ಭ ರಾಜ್ಯ ಪ್ರಶಸ್ತಿ ಪುರಸ್ಕøತ ಮುಳ್ಳೂರು ಶಾಲೆಯ ಶಿಕ್ಷಕ ಸಿ.ಎಸ್. ಸತೀಶ್, ಶಾಂತಳ್ಳಿಕಟ್ಟೆ ಕುಮಾರಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕಿ ಉಷಾಕುಮಾರಿ ಹಾಗೂ ಸೋಮವಾರಪೇಟೆ ಬಿಆರ್ಸಿ ಸಿ.ಆರ್. ಶಶಿಧರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಯೋಗೇಶ್ ವಹಿಸಿದ್ದರು. ವೇದಿಕೆಯಲ್ಲಿ ವಲಯಾಧ್ಯಕ್ಷ ಎ.ಎಸ್. ಮಹೇಶ್, ಸೋಮವಾರಪೇಟೆ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್ ಚೌಟ ಹಾಗೂ ಖಜಾಂಚಿ ಹೆಚ್.ಎಂ. ಬಸಪ್ಪ ಉಪಸ್ಥಿತರಿದ್ದರು.