ಗೋಣಿಕೊಪ್ಪ ವರದಿ, ಸೆ. 30: ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ ಕಿಂಡರ್ ಗಾರ್ಟನ್ ಮಕ್ಕಳಿಗೆ ಬ್ಲೂಡೇ ಹಾಗೂ ರೆಡ್ ಡೇ ಕಾರ್ಯಕ್ರಮ ನಡೆಯಿತು.

ಶಿಕ್ಷಣದ ಜತೆ ಏಕತಾನತೆಯನ್ನು ಹೋಗಲಾಡಿಸುವ ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳನ್ನು ಪಾಲ್ಗೊಳ್ಳಲು ಕಾರ್ಯಕ್ರಮ ನಡೆಸಲಾಯಿತು. ಮಕ್ಕಳು ನೀಲಿ ಹಾಗೂ ಕೆಂಪು ಬಣ್ಣದ ಬಟ್ಟೆ ತೊಟ್ಟು ಸಂಭ್ರಮಿಸಿದರು. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಕಿಯರುಗಳಾದ ಮೀನಾ ಮೊಣ್ಣಪ್ಪ, ಪ್ರಿಯಾ ಹಾಗೂ ಕೃತಿ ಗೌರಮ್ಮ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ ಸಂಸ್ಥಾಪಕಿ ಶಾಂತಿ ಅಚ್ಚಪ್ಪ, ಮುಖ್ಯ ಶಿಕ್ಷಕ ಅರುಣ್ ಕುಮಾರ್ ಉಪಸ್ಥಿತರಿದ್ದರು.