ಮಡಿಕೇರಿ, ಅ. 1: ಪುಣೆಯಲ್ಲಿ ನಡೆಯುತ್ತಿರುವ ಬಾಲಕರ ಆಲ್ ಇಂಡಿಯಾ ಎಸ್.ಎನ್.ಬಿ.ಪಿ. 16 ವರ್ಷದೊಳಗಿನ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಹಾಕಿ ಕೂರ್ಗ್ ತಂಡ ಭರ್ಜರಿ ಗೆಲುವಿನೊಂದಿಗೆ ಮುನ್ನಡೆ ಸಾಧಿಸಿದೆ.
ಇಂದು ನಡೆದ ಪಂದ್ಯಾವಳಿಯಲ್ಲಿ ಪಶ್ಚಿಮ ಬಂಗಾಳದ ತಂಡವನ್ನು 7-0 ಗೋಲುಗಳ ಅಂತರದಿಂದ ಸೋಲಿಸಿ ಮುನ್ನಡೆ ಸಾಧಿಸಿದೆ. ತಂಡದ ಪರ ಗೌತಂ 5, ಗೌರವ್ ಹಾಗೂ ಧ್ರುವಿನ್ ತಲಾ 1 ಗೋಲು ಬಾರಿಸಿದರು. ತಾ. 7ರ ವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ತಂಡದ ತರಬೇತುದಾರರಾಗಿ ಕೆ.ಎಂ. ಸುಬ್ಬಯ್ಯ ಕಾರ್ಯನಿರ್ವಹಿಸಲಿದ್ದಾರೆ.