ಮಡಿಕೇರಿ, ಸೆ. 30: ಗ್ರೀನ್ ಸಿಟಿ ಫೋರಂ ಹಮ್ಮಿಕೊಂಡಿರುವ ಮಡಿಕೇರಿ ಸ್ವಚ್ಛತಾ ಅಭಿಯಾನದ 10ನೇ ದಿನವಾದ ಭಾನುವಾರ ಬೃಹತ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕೋಟೆ ಆವರಣ ಪೂರ್ಣ ಪ್ರಮಾಣದಲ್ಲಿ ಸ್ವಚ್ಛಗೊಳಿಸುವದರ ಮೂಲಕ ಅಭಿಯಾನ ಸಫಲಗೊಂಡಿದೆ.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ 85 ಎನ್‍ಸಿಸಿ ಕೆಡೆಟ್‍ಗಳು, ಕೂಡಿಗೆ ಸೈನಿಕ ಶಾಲೆಯ 45 ವಿದ್ಯಾರ್ಥಿಗಳು, ನೆಲ್ಲಿಹುದಿಕೇರಿಯ ಮುತ್ತಪ್ಪ ಯುವಕಲಾ ಸಂಘದ 15 ಜನ, ಮಡಿಕೇರಿ ಲಯನ್ಸ್ ಕ್ಲಬ್, ಮೂರ್ನಾಡಿನ ಕ್ಲೀನ್ ಇನ್ಸೆಟಿವ್ ಪದಾಧಿಕಾರಿಗಳು ಸೇರಿದ್ದಂತೆ ಸಾರ್ವಜನಿಕರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕೋಟೆ ಆವರಣಕ್ಕೆ ಆಗಮಿಸುವದರ ಮೂಲಕ ಸಾಂಕೇತಿಕವಾಗಿ ಸ್ವಚ್ಛತಾ 45 ವಿದ್ಯಾರ್ಥಿಗಳು, ನೆಲ್ಲಿಹುದಿಕೇರಿಯ ಮುತ್ತಪ್ಪ ಯುವಕಲಾ ಸಂಘದ 15 ಜನ, ಮಡಿಕೇರಿ ಲಯನ್ಸ್ ಕ್ಲಬ್, ಮೂರ್ನಾಡಿನ ಕ್ಲೀನ್ ಇನ್ಸೆಟಿವ್ ಪದಾಧಿಕಾರಿಗಳು ಸೇರಿದ್ದಂತೆ ಸಾರ್ವಜನಿಕರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕೋಟೆ ಆವರಣಕ್ಕೆ ಆಗಮಿಸುವದರ ಮೂಲಕ ಸಾಂಕೇತಿಕವಾಗಿ ಸ್ವಚ್ಛತಾ ಪಡಿಸಲಾಗುವದೆಂದು ಕೆ.ಜಿ. ಬೋಪಯ್ಯ ಹೇಳಿದರು.

ಪ್ರಕಾಶ್ (ಅಧ್ಯಕ್ಷ), ಪ್ರಮೋದ್ (ಕಾರ್ಯದರ್ಶಿ) ನೇತೃತ್ವದಲ್ಲಿ ನೆಲ್ಲಿಹುದಿಕೇರಿಯಿಂದ ಮುತ್ತಪ್ಪ ಯುವ ಕಲಾ ಸಂಘದ ಒಟ್ಟು 15 ಸದಸ್ಯರು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಕಾಡು ಕಡಿಯುವದರ ಮೂಲಕ ಗಮನ ಸೆಳೆದರು.

ಕಾವೇರಿ ಸ್ವಚ್ಛತಾ ಆಂದೋಲನಾ ಸಮಿತಿ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮೂರ್ನಾಡಿನ ಕ್ಲೀನ್ ಇನ್ಸೆಟಿವ್ ಸಂಸ್ಥೆ ಪ್ರಮುಖರಾದ ಬಡುವಂಡ ಅರುಣ್ ಅಪ್ಪಚ್ಚು ಭಾನುವಾರ ಶ್ರಮದಾನದಲ್ಲಿ ಪಾಲ್ಗೊಳ್ಳುವದರ ಮೂಲಕ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಕೆಡೆಟ್‍ಗಳು ಮೇಜರ್ ರಾಘವ ಮಾರ್ಗದರ್ಶನದಲ್ಲಿ ಸತತ ಎರಡು ಭಾನುವಾರದಿಂದ ಶ್ರಮದಾನದಲ್ಲಿ ಪಾಲ್ಗೊಂಡಿದ್ದಾರೆ. ಕಳೆದ ವರ್ಷ ಹೊಸದಿಲ್ಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಎನ್‍ಸಿಸಿ ಮಹಿಳಾ ಕೆಡೆಟ್‍ಗಳ ತಂಡವನ್ನು ಮುನ್ನಡೆಸಿದ್ದ ಐಶ್ವರ್ಯ ಗ್ರೀನ್ ಸಿಟಿ ಫೋರಂ ನಿರ್ದೇಶಕಿಯಾಗಿರುವ ತಾಯಿ ಮೋಂತಿ ಗಣೇಶ್ ಅವರೊಂದಿಗೆ ತೊಡಗಿಸಿಕೊಂಡಿದ್ದರು.

ಮಡಿಕೇರಿ ಲಯನ್ಸ್ ಸಂಸ್ಥೆ ಅಧ್ಯಕ್ಷ ವ್ಯಾಂಡಮ್ ದಾಮೋದರ್ ನೇತೃತ್ವದಲ್ಲಿ ಸಂಸ್ಥೆ ಪದಾಧಿಕಾರಿಗಳು, ಮದೆನಾಡು ಪದವಿ ಪೂರ್ವ ಕಾಲೇಜು ಉಪನ್ಯಾಸಕ ಸಿದ್ದರಾಜು, ಕೊಡಗು ಏಕೀಕರಣ ರಂಗದ ಮುಖ್ಯಸ್ಥ ತಮ್ಮು ಪೂವಯ್ಯ ಸ್ವಚ್ಛತಾ ಅಭಿಯಾನಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದ ನಗರಸಭೆ ಸದಸ್ಯ ಬಿ.ಎಂ. ರಾಜೇಶ್, ನಿವೃತ್ತ ಹವಾಲ್ದಾರ್ ತಂಬುಕುತ್ತೀರ ಗಪ್ಪು ಸೋಮಯ್ಯ ತಮ್ಮ ಪತ್ನಿ, ಇಬ್ಬರು ಮಕ್ಕಳೊಂದಿಗೆ ಭಾನುವಾರ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

10ನೇ ದಿನದ ಶ್ರಮದಾನದಲ್ಲಿ ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಅಂಬೆಕಲ್ ನವೀನ್‍ಕುಶಾಲಪ್ಪ, ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ, ಪ್ರಧಾನ ಕಾರ್ಯದರ್ಶಿ ಪಿ.ಕೃಷ್ಣಮೂರ್ತಿ, ನಿರ್ದೇಶಕರಾದ ಮೋಂತಿ ಗಣೇಶ್, ಅಜ್ಜಮಾಡ ರಮೇಶ್ ಕುಟ್ಟಪ್ಪ, ಕುಕ್ಕೇರ ಜಯ ಚಿಣ್ಣಪ್ಪ, ಕಿರಿಯಮಾಡ ರತನ್ ತಮ್ಮಯ್ಯ, ಪೂಳಕಂಡ ರಾಜೇಶ್ ಸಕ್ರಿಯವಾಗಿ ಪಾಲ್ಗೊಂಡಿದ್ದರು.