ಶಬರಿಮಲೆಗೆ ಬರುವದಿಲ್ಲ-ಪಂದಳ ರಾಜರು ಶಬರಿಮಲೈ, ಅ. 5: ಶಬರಿಮಲೆ ದೇವಸ್ಥಾನದ ಹದಿನೆಂಟು ಮೆಟ್ಟಿಲುಗಳನ್ನು ದಾಟಿ ಒಂದೇ ಒಂದು ಹೆಣ್ಣು ಒಳನಡೆದರೂ ಪಂದಳ ರಾಜರ ಅರಮನೆಯಲ್ಲಿರುವ ಆಭರಣದ ಪೆಟ್ಟಿಗೆ ಮುಂದೆಂದೂ ಶಬರಿ ಮಲೆಯ ಸನ್ನಿಧಾನಕ್ಕೆ ಬರುವದಿಲ್ಲ ಎಂದು ಪಂದಳ ರಾಜ ಮನೆತನದವರು ಹೇಳಿದ್ದಾರೆ. ದೇವಸ್ಥಾನವು ಸರಕಾರದ ಸೊತ್ತಾಗಿರಬಹುದು. ಆದರೆ ಅಯ್ಯಪ್ಪನಿಗೆ ಸಂಬಂಧಪಟ್ಟ ಆಭರಣಗಳು ನಮ್ಮ ಕುಟುಂಬದ ಸ್ವತ್ತಾಗಿರುತ್ತದೆ. ಅದನ್ನು ಬಲವಂತವಾಗಿ ಯಾರೂ ತರಿಸಿಕೊಳ್ಳಲಾಗುವದಿಲ್ಲ. ಹೆಂಗಸರು ಪ್ರವೇಶಿಸುವ ಶಬರಿಮಲೆಗೆ ಇನ್ನು ಮುಂದೆ ಪಂದಳ ರಾಜ ಮನೆತನದವರು ಕಾಲಿಡುವದಿಲ್ಲ ಎಂಬ ಪ್ರಕಟಣೆಯ ಮೂಲಕ ಕರಾರಾಗಿ ಪ್ರಕಟಿಸುತ್ತೇವೆ ಎಂದು ಸರಕಾರಕ್ಕೂ ದೇವಸ್ಥಾನದ ಆಡಳಿತ ಮಂಡಳಿಗೂ ಸುತ್ತೋಲೆಯನ್ನು ಕಳುಹಿಸಿದ್ದಾರೆ. ಇಷ್ಟಾಗಿಯೂ ತೀರ್ಪನ್ನು ಕಡ್ಡಾಯಗೊಳಿಸಿದರೆ ಶಬರುಮಲೆಯ ತಂತ್ರಿಗಳೂ ಸಾಮೂಹಿಕವಾಗಿ ಪದತ್ಯಾಗ ಮಾಡುವದರೊಂದಿಗೆ ಇನ್ನು ಮುಂದೆ ಶಬರಿಮಲೆಗೂ ಬರುವದಿಲ್ಲ ಎಂದು ತೀರ್ಮಾನಿಸಿದ್ದಾರೆ. ಮಳೆ ಹಾನಿ : ಕೇಂದ್ರಕ್ಕೆ ಮತ್ತೆ ಸಿಎಂ ಮನವಿನವದೆಹಲಿ, ಅ. 5: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ರಸ್ತೆ ಸಾರಿಗೆ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ಕೊಡಗಿನ ಪ್ರವಾಹ ಪರಿಸ್ಥಿತಿ ಕುರಿತು ಮತ್ತು ಮೇಕೆದಾಟು ಯೋಚನೆ ಕುರಿತು ಚರ್ಚೆ ನಡೆಸಿದರು. ಮಳೆಯಿಂದಾಗಿ ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮನೆ, ರಸ್ತೆಗಳಿಗೆ ಹೆಚ್ಚು ಹಾನಿಯಾಗಿದ್ದು, ಪರಿಹಾರ ಕಾರ್ಯಕ್ಕೆ ಹಣ ನೀಡುವಂತೆ ರಾಜನಾಥ್ ಸಿಂಗ್ ಅವರಿಗೆ ಸಿಎಂ ಮನವಿ ಮಾಡಿದರು. ಬಳಿಕ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಅವರು, ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ನೀಡುವಂತೆ ಕೇಳಿಕೊಂಡರು. ಕೇಂದ್ರ ಸಚಿವರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಋಣ ಮುಕ್ತ ಕಾಯ್ದೆ ವಿಚಾರವಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಜೊತೆ ಚರ್ಚಿಸಿದ್ದು, ಕಾನೂನು ಇಲಾಖೆ ಸ್ಪಷ್ಟೀಕರಣ ಕೇಳಿತ್ತು, ಅದನ್ನು ಈಗ ನೀಡಲಾಗಿದೆ. ಹಿಂದೆ ರಾಷ್ಟ್ರಪತಿಗಳ ಜೊತೆಗೂ ಈ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಸಮಸ್ಯೆ ಎದುರಾಗಿದೆ. ನೆರೆ-ಬರದ ಹಿನ್ನೆಲೆ ಪ್ರಧಾನಿ ಭೇಟಿಗೆ ಅವಕಾಶ ಕೇಳಲಾಗಿತ್ತು.

ಉಗ್ರರ ಗುಂಡಿಗೆ ಇಬ್ಬರು ಬಲಿ

ಶ್ರೀನಗರ, ಅ. 5: ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಉಗ್ರರು ದಾಳಿ ನಡೆಸಿದ್ದು, ಉಗ್ರರ ಗುಂಡಿಗೆ ಇಬ್ಬರು ನಾಗರೀಕರು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ಶ್ರೀನಗರದ ಕರ್ಫಾಲಿ ಮೊಹಲ್ಲಾದಲ್ಲಿ ನಾಗರಿಕರ ಮೇಲೆ ಉಗ್ರರು ಗುಂಡಿನ ಧಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ಕರ್ಫಾನಿ ಮೊಹಲ್ಲಾ ಬಳಿ ಬಂದಿರುವ ಉಗ್ರರು ನಾಗರಿಕರ ಮೇಲೆ ಏಕಾಏಕಿ ಗುಂಡಿನ ಧಾಳಿ ನಡೆಸಿದ್ದಾರೆ. ಈ ವೇಳೆ ಮೂವರು ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಇಬ್ಬರು ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಶ್ಮೀರದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮೊದಲ ಹಂತದ ನಗರ ಸ್ಥಳೀಯ ಚುನಾವಣೆ ನಡೆಯಲಿದ್ದು, ಈ ನಡುವಲ್ಲೇ ಉಗ್ರರು ಧಾಳಿ ನಡೆಸಿದ್ದಾರೆ. ಪ್ರಸ್ತುತ ಸಾವನ್ನಪ್ಪಿರುವ ಇಬ್ಬರು ನಾಗರಿಕರು ರಾಜಕೀಯ ಹಿನ್ನೆಲೆಯುಳ್ಳವರಾಗಿದ್ದು, ಈ ಕುರಿತಂತೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹಿರಿಯ ಪೆÇಲೀಸ್ ಅಧಿಕಾರಿ ಇಸ್ಮಾಯಿಲ್ ಪರ್ರೇ ಅವರು ಹೇಳಿದ್ದಾರೆ.

ಶಬರಿಮಲೆಗೆ 500 ಮಹಿಳಾ ಪೊಲೀಸರು

ತಿರುವನಂತಪುರಂ, ಅ. 5: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಮುಕ್ತ ಪ್ರವೇಶ ಕಲ್ಪಿಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲು ಕೇರಳ ಸರ್ಕಾರ ಮುಂದಾಗಿದ್ದು, ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಲು 500 ಮಹಿಳಾ ಪೆÇಲೀಸರನ್ನು ನಿಯೋಜಿಸಲು ನಿರ್ಧರಿಸಿದೆ. ಪ್ರತಿಪಕ್ಷ ಸದಸ್ಯರು ಶಬರಿಮಲೆಯಲ್ಲಿ ಪೆÇಲೀಸ್ ಸಿಬ್ಬಂದಿ ಸೇರಿದಂತೆ ಮಹಿಳೆಯರನ್ನು ತಡೆಯಲು ಮುಂದಾದ ಹಿನ್ನೆಲೆ ಕೇರಳ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಈ ಮಧ್ಯೆ, ಗುಪ್ತಚರ ಮಾಹಿತಿಯ ಪ್ರಕಾರ, ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕೆಲಸಕ್ಕೆ ಹಾಜರಾಗಲು ಹಲವು ಮಹಿಳಾ ಪೆÇಲೀಸರು ನಿರಾಕರಿಸಿದ್ದಾರೆ. ಆದರೆ ಧರ್ಮ ಮತ್ತು ರಾಜಕೀಯದ ಹೊರತಾಗಿಯೂ ಎಲ್ಲರೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಕೇರಳ ಪೆÇಲೀಸ್ ಮಹಾ ನಿರ್ದೇಶಕ ಲೋಕನಾಥ್ ಬೆಹ್ರಾ ಅವರು ಹೇಳಿದ್ದಾರೆ. ಮಹಿಳಾ ಭಕ್ತರಿಗೆ ಸೂಕ್ತ ಭದ್ರತೆ ಒದಗಿಸಲು ಈ ತಿಂಗಳಲ್ಲಿ ಶಬರಿಮಲೆಯಲ್ಲಿ ಮಹಿಳಾ ಪೆÇಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವದು. ನಮ್ಮದು ಕಾನೂನು ಜಾರಿಗೊಳಿಸುವ ಸಂಸ್ಥೆ. ಹೀಗಾಗಿ ಇಲ್ಲಿ ಲಿಂಗ, ಧರ್ಮ, ರಾಜಕೀಯದ ಪ್ರಶ್ನೆ ಬರುವದಿಲ್ಲ. ಎಲ್ಲರೂ ಅವರವರ ಕರ್ತವ್ಯ ನಿರ್ವಹಿಸಬೇಕು ಎಂದು ಬೆಹ್ರಾ ತಿಳಿಸಿದ್ದಾರೆ.

ಆರ್‍ಎಸ್‍ಎಸ್ ವಿರುದ್ಧ ಖರ್ಗೆ ವಿವಾದಾತ್ಮಕ ಹೇಳಿಕೆ

ನವದೆಹಲಿ, ಅ. 5: ದೇಶದ ಸ್ವಾತಂತ್ರ್ಯಕ್ಕಾಗಿ ಆರ್‍ಎಸ್‍ಎಸ್ ಮತ್ತು ಬಿಜೆಪಿ ನಾಯಕರ ಮನೆಯಲ್ಲಿನ ನಾಯಿಗಳು ಕೂಡಾ ಪ್ರಾಣತ್ಯಾಗ ಮಾಡಿಲ್ಲ ಎಂದು ವರ್ಷದ ಹಿಂದೆ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಎಐಸಿಸಿ ಕಾರ್ಯದರ್ಶಿ ಮಲ್ಲಿಕಾರ್ಜನ ಖರ್ಗೆ ಮತ್ತೆ ಅದೇ ರೀತಿಯ ಮಾತುಗಳನ್ನಾಡಿದ್ದಾರೆ. ಮಹಾರಾಷ್ಟ್ರದ ಜಲ್ಗಾನ್ ಜಿಲ್ಲೆಯ ಫೈಜಾಪುರದಲ್ಲಿಂದು ಕಾಂಗ್ರೆಸ್ ಪಕ್ಷ ಆಯೋಜಿಸಿರುವ ಎರಡನೇ ಹಂತದ ಜನಸಂಘರ್ಷ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ದೇಶದ ಏಕತೆಗಾಗಿ ಇಂದಿರಾಗಾಂಧಿ ತಮ್ಮ ಜೀವವನ್ನೇ ತ್ಯಾಗ ಮಾಡಿದರು. ರಾಜೀವ್ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿ ಹಾಗೂ ಆರ್‍ಎಸ್‍ಎಸ್ ನಾಯಕರ ಮನೆಯಲ್ಲಿನ ನಾಯಿಗಳು ಪ್ರಾಣ ಕಳೆದುಕೊಂಡಿದ್ದೇವೆಯಾ? ಹೇಳಿ ಎಂದು ಪ್ರಶ್ನಿಸಿದರು. ಸ್ವಾತಂತ್ರ್ಯಕ್ಕಾಗಿ ಬಿಜೆಪಿಯ ಯಾವ ನಾಯಕರು ಜೈಲಿಗೆ ಹೋಗಿದ್ದರು ಎಂಬದನ್ನು ಹೇಳಿ ಎಂದು ಮಲ್ಲಿಕಾರ್ಜುನ ಖರ್ಗೆ ಕೇಳಿದರು. ಲೋಕಸಭೆಯಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಖರ್ಗೆ ಇದೇ ರೀತಿಯ ಹೇಳಿಕೆ ನೀಡಿದ್ದರು. ದೇಶದ ಏಕತೆಗಾಗಿ ಇಂದಿರಾ ಗಾಂಧಿ ಪ್ರಾಣ ತ್ಯಾಗ ಮಾಡಿದ್ದಾರೆ. ಬಿಜೆಪಿಯವರು ಯಾರಾದರೂ ಪ್ರಾಣ ತ್ಯಾಗ ಮಾಡಿದ್ದಾರಾ? ನಾಯಿ ಕೂಡಾ ಇಲ್ಲ ಎಂದು ಖರ್ಗೆ ಕೆಳಮನೆಯಲ್ಲಿ ನೀಡಿದ ಹೇಳಿಕೆ ಭಾರೀ ಟೀಕೆಗೆ ಗುರಿಯಾಗಿತ್ತು.

ಎಸಿಬಿ ಧಾಳಿ : 4 ಕೆ.ಜಿ. ಚಿನ್ನ ವಶ

ಬೆಂಗಳೂರು, ಅ. 5: ಆಕ್ರಮ ಆಸ್ತಿ ಗಳಿಸಿದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಶುಕ್ರವಾರ ಕರ್ನಾಟಕ ಕೈಗಾರಿಕಾ ಪ್ರಾದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಮುಖ್ಯ ಅಭಿವೃದ್ಧಿ ಟಿ.ಆರ್. ಸ್ವಾಮಿ ಮತ್ತು ಬಿಡಿಎ ಇಂಜಿನಿಯರ್ ಗೌಡಯ್ಯ ಅವರ ಮನೆ ಹಾಗೂ ಕಚೇರಿಗಳ ಮೇಲೆ ಧಾಳಿ ನಡೆಸಿದ್ದಾರೆ. ಟಿ.ಆರ್. ಸ್ವಾಮಿ ಮತ್ತು ಗೌಡಯ್ಯ ಅವರು ಆದಾಯಕ್ಕೂ ಮೀರಿ ಅಪಾರ ಪ್ರಮಾಣದ ಆಸ್ತಿ ಗಳಿಸಿದ ಬಗ್ಗೆ ದೂರು ಹಾಗೂ ಮಾಹಿತಿಯನ್ನು ಆಧರಿಸಿ ಎಸಿಬಿ ಅಧಿಕಾರಿಗಳ ತಂಡ ಇಂದು ಇಬ್ಬರ ಕಚೇರಿ ಮನೆ ಸೇರಿದಂತೆ 8 ಕಡೆ ದಾಳಿ ನಡಸಿದ್ದು, 4 ಕೆ.ಜಿ. ಚಿನ್ನ ಹಾಗೂ ಸುಮಾರು 10 ಕೋಟಿ ರೂಪಾಯಿ ನಗದು ಪತ್ತೆ ಮಾಡಿದ್ದಾರೆ. ಎಬಿಸಿ ಅಧಿಕಾರಿಗಳು ಕೌಂಟಿಂಗ್ ಮೆಷಿನ್‍ನಲ್ಲಿ ಹಣ ಲೆಕ್ಕ ಹಾಕುತ್ತಿದ್ದಾರೆ. ಬೆಂಗಳೂರಿನ ಬಸವೇಶ್ವರನಗರದಲ್ಲಿರುವ ಗೌಡಯ್ಯ ನಿವಾಸದ ಮೇಲೆ ಧಾಳಿ ನಡೆಸಿದ ಅಧಿಕಾರಿಗಳು ಸುಮಾರು 4 ಕೆ.ಜಿ. ಚಿನ್ನ ಹಾಗೂ 70 ಲಕ್ಷ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. ಅಲ್ಲದೆ ತುಮಕೂರಿನಲ್ಲಿರುವ ಗೌಡಯ್ಯ ಅವರ ಸಹೋದರನ ಮನೆ ಮೇಲೂ ಅಧಿಕಾರಿಗಳು ಧಾಳಿ ನಡೆಸಿದ್ದು, ತೀವ್ರ ಶೋಧ ನಡೆಸುತ್ತಿದ್ದಾರೆ.