ಮಡಿಕೇರಿ, ಅ.5: ಮಡಿಕೇರಿ ತಾಲೂಕು ಆಡಳಿತ ಕಚೇರಿಯ ನಿರ್ಮಾಣದ ಕನಸಿನೊಂದಿಗೆ ಎರಡು ವರ್ಷಗಳ ಹಿಂದೆ ಭೂಮಿ ಪೂಜೆ ಸಲ್ಲಿಸಿ ಕಾಮಗಾರಿ ಆರಂಭಿಸಿದ ನಗರದ ವಿಜಯವಿನಾಯಕ ಬಡಾವಣೆಯ ಸರಕಾರಿ ಕಟ್ಟಡ ನಿರ್ಮಾಣದ ಹಂತದಲ್ಲೇ ನೂರೆಂಟು ವಿಘ್ನಗಳ ನಡುವೆ ಮುಳುಗಡೆಗೊಳ್ಳುವಂತಾಗಿದೆ. ಈ ಮಿನಿ ವಿಧಾನಸೌಧದ ಕಟ್ಟಡಕ್ಕೆ ನಿವೇಶನ ಸಮರ್ಪಕವಾಗಿ ಇಲ್ಲ ಎಂಬ ಅಪಸ್ವರ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಬೇರೆ ಬೇರೆ ಕಡೆಗಳಲ್ಲಿ ಈ ನಿವೇಶನದ ಮಣ್ಣಿನ ಪರೀಕ್ಷೆಯನ್ನು ಮಾಡಿಸಿ ವರದಿಯನ್ನು ಪಡೆಯಲಾಯಿತು. ಈ ವೇಳೆಗೆ ಸಂಬಂಧಿಸಿದ ನಿವೇಶನದ ಜಾಗವು ಗೊಸರು ಮಣ್ಣಿನ ತೇವಾಂಶ ದಿಂದ ಕೂಡಿದ ಕಾರಣದಿಂದ ಕಟ್ಟಡ ನಿರ್ಮಾಣದ ಕೆಲಸ ಮಾಡಲು ತೊಂದರೆ ಆಗಲಿದ್ದು ಸರ್ಕಾರದ ವತಿಯಿಂದ ಹೆಚ್ಚಿನ ಅನುದಾನ ಅಗತ್ಯವೆಂಬ ನಿಲುವಿನೊಂದಿಗೆ ಗುತ್ತಿಗೆಯನ್ನು ಪಡೆದಿದ್ದ ಬೆಂಗಳೂರು ಕೆ.ಬಿ.ಆರ್. ಉದ್ಯಮ ಸಂಸ್ಥೆ ಕೆಲಸ ಮುಂದುವರೆಸಲು ಹಿಂದೇಟು ಹಾಕಿತು.

ಅಲ್ಲದೆ 2016ರ ಆರಂಭಿಕ ಹಂತದಲ್ಲಿ ಮಳೆಯ ಕಾರಣ ದಿಂದ ಈ ಕಾಮಗಾರಿ ಕೇವಲ ನಿವೇಶನ ಸಮತಟ್ಟು ಗೊಳಿಸಲು ಸೀಮಿತ ವಾಯಿತು. ಪರಿಣಾಮ ಕಾಲ ಮಿತಿಯೊಳಗೆ ಕೆಲಸ ಮಾಡಲು ಆಗದೆ ಒಂದು ಹಂತದಲ್ಲಿ ಕೆಲಸವೂ ನಿಂತೇ ಹೋಗುವ ಪರಿಸ್ಥಿತಿ ಎದುರಾಗಿತ್ತು.ಅಷ್ಟರಲ್ಲಿ ಅಂದಿನ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಆರ್. ಸೀತಾರಾಮ್ ಅವರು ಇಲ್ಲಿ ನ ನೂತನ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ವೀಕ್ಷಿಸಲು ಬಂದಿದ್ದರು. ಅದೇ ವೇಳೆಗೆ ಈ ಮಿನಿ ವಿಧಾನಸೌಧದ ಕೆಲಸ ಕುಂಠಿತವಾಗುತ್ತದೆ ಎಂಬ ಅಂಶಗಳನ್ನು ಸಚಿವರ ಗಮನ ಸೆಳೆಯುವ ಪ್ರಯತ್ನ ಮಾಡಲಾಯಿತು. ಕೂಡಲೇ ಸ್ಪಂದಿಸುವದರೊಂದಿಗೆ ಸಚಿವರು ಖುದ್ದಾಗಿ ಮಿನಿ ವಿಧಾನ ಸೌಧದ ಕಾಮಗಾರಿ ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿದರು.

ಅಲ್ಲದೆ ಆಗಷ್ಟೇ ಇಲ್ಲಿಗೆ ಆಗಮಿಸಿದ್ದ ಈಗಿನ ಜಿಲ್ಲಾಧಿಕಾರಿ ಪಿ.ಐ.ಶ್ರೀ ವಿದ್ಯಾ ಹಾಗೂ ಕರ್ನಾಟಕ ಗೃಹನಿರ್ಮಾಣ ಮಂಡಳಿ ಯ ಅಧಿಕಾರಿಗಳೊಂದಿಗೆ ಚರ್ಚಿಸಿ ದರು. ಅಲ್ಲದೆ ಮತ್ತೊಂದು ಸಲ ಈ ನಿವೇಶನದ ಮಣ್ಣಿನ ಪರೀಕ್ಷೆಯ ನ್ನು ನಿಟ್ಟೆಯ ತಾಂತ್ರಿಕ ಸಂಸ್ಥೆಯ ವತಿಯಿಂದ ಪರೀಕ್ಷೆ ಮಾಡಿ ವರದಿಯನ್ನು ಸಲ್ಲಿಸಲು ಸೂಚಿಸಿದರು. ಅಂತೆಯೇ ಮಣ್ಣಿನ ಪರೀಕ್ಷೆಯನ್ನು ಮಾಡಿಸಿ ವರದಿ ತರಿಸಲಾಯಿತು. ಈ ವೇಳೆ ಈಗಿರುವ ನಿವೇಶನದಲ್ಲಿ ಸರಿ ಸುಮಾರು ಆರುವರೆ ಮೀಟರ್ ಆಳಕ್ಕೆ ಮಣ್ಣು ತೆಗೆಸಿ ಆ ಹಂತದಿಂದ ಕಾಮಗಾರಿ ಆರಂಭ ಮಾಡಲು ಸ್ವತಃ ಸಚಿವರು ಸೂಚಿಸಿದರು.

ಅಂತೆಯೇ ಕೆ.ಬಿ.ಆರ್ ಗುತ್ತಿಗೆ ಸಂಸ್ಥೆ ಆರೂವರೆ ಮೀಟರ್ ಆಳಕ್ಕೆ ನಿವೇಶನದ ಮಣ್ಣು ತೆಗೆಸಿ ಅಷ್ಟೇ ಆಳದಿಂದ ಕೆಲಸಮಾಡಿ ಸಲಾಗುತಿತ್ತು. ಈ ಹಂತದಲ್ಲಿ ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಇಡೀ ನಿವೇಶನ ದಲ್ಲಿನ ಪ್ರದೇಶದ ಅಡಿಪಾಯದ ಹಂತದಲ್ಲಿ ಮುಳುಗಿ ಹೋದವು. ಗುತ್ತಿಗೆ ದಾರರು ತಿಂಗಳುಗಟ್ಟಲೆ ಯಂತ್ರದ ಸಹಾಯದಿಂದ ಮೋಟಾರು ಅಳವಡಿಸಿ ನಿವೇಶನದ ನೀರು ಹೊರಗೆ ಹಾಕುವ ಪ್ರಯತ್ನ ಮಾಡಿದರೂ ಪ್ರಯೋಜನ ಕಂಡಿಲ್ಲ. ಅಲ್ಲದೆ, ಈ ಕಾಮಗಾರಿ ಸಲುವಾಗಿ ಅಂದಾಜು ರೂ.2.50 ಕೋಟಿ ಹಣ ವ್ಯಯ ಮಾಡಿದ ಕುರಿತು ಹೇಳಲಾಗಿದೆ. ಪರಿಣಾಮ ಪ್ರಾರಂಭದಲ್ಲಿ ಯೇ ಮುಳುಗಿ ಹೋಗಿ ರುವ ಮಿನಿ ವಿಧಾನ ಸೌಧದ ಕಟ್ಟಡ ಮೇಲೇಳಲಾರದ ಪರಿಸ್ಥಿತಿಯಲ್ಲಿ ಗುತ್ತಿಗೆದಾರರು ಯಾರಿಗೂ ಹೇಳದೆ ಊರು ಬಿಟ್ಟು ಹೋಗಿರುವರೆಂಬ ಅಸಮಾಧಾನ ಕೇಳಿಬರತೊಡಗಿದೆ.

ಈ ಬಗ್ಗೆ ಕರ್ನಾಟಕ ಗೃಹನಿರ್ಮಾಣ ಮಂಡಳಿ ಅಧಿಕಾರಿಗಳನ್ನು ಸಂಪರ್ಕ ಮಾಡಿದರೆ ಮಳೆಯ ಕಾರಣ ಕೆಲಸ ನಿಧಾನವಾಗಿದೆ. ಸರ್ಕಾರದ ಯಾವದೇ ಹಣ ಇದುವರೆಗಿನ ಕಾಮಗಾರಿ ಬಾಪ್ತು ಸಂಬಂಧಪಟ್ಟ ಗುತ್ತಿಗೆ ಸಂಸ್ಥೆಯ ಖಾತೆಗೆ ಕಂದಾಯ ಇಲಾಖೆಯ ವತಿಯಿಂದ ಬಂದಿಲ್ಲವೆಂದು ಸುಳಿವು ನೀಡಲಾಗಿದೆ. ಅಲ್ಲದೆ ಮಡಿಕೇರಿ ತಾಲೂಕಿನ ಕಚೇರಿ ಹಾಗೂ ಜಿಲ್ಲೆಯ ಅಧಿಕಾರಿಗಳನ್ನು ಸಂಪರ್ಕ ಮಾಡಿದ ಸಂದರ್ಭದಲ್ಲಿ

(ಮೊದಲ ಪುಟದಿಂದ) ಮಳೆಯ ಕಾರಣವಷ್ಟೆ ಕೆಲಸ ಹಿನ್ನಡೆ ಯಾಗಿದೆ ಎಂದು ಹೇಳುತ್ತಾರೆ. ಬದಲಾಗಿ ಸ್ಥಳೀಯ ಕೆಲವರ ಪ್ರಕಾರ ಇದುವರೆಗೆ ಮಾಡಿರುವ ಕೆಲಸಕ್ಕೆ ಯಾವದೇ ಹಣ ಲಭಿಸದ ಕಾರಣ ಗುತ್ತಿಗೆದಾರರು ಕೆಲಸಗಾರರಿಗೂ ಸಂಬಳ ನೀಡದೆ ಜಾಗ ಖಾಲಿ ಮಾಡಿರುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಮಡಿಕೇರಿಯ ಕೆಲವರು ‘ಶಕ್ತಿ’ ಯ ಮೂಲಕ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯ ಗುತ್ತಿಗೆದಾರ ಜಗದೀಶ್ ರೈ ಹೇಳಿಕೆ ಪ್ರಕಾರ ಇವರು ಮಿನಿ ವಿಧಾನ ಸೌಧದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸುಮಾರು ಆರೂವರೆ ಮೀಟರ್ ಆಳ ಮಣ್ಣು ತೆಗೆಸಿದಲ್ಲದೆ ನಿವೇಶನ ಸಮತಟ್ಟುಗೊಳಿಸಿದ ಹಿಟಾಚಿ ಯಂತ್ರದ ಕೆಲಸದ ಬಾಡಿಗೆ ಹಣ ಲಕ್ಷಗಟ್ಟಲೇ ಬರಬೇಕಿದೆ. ಇನ್ನೊಂದು ಕಡೆ ಸಿಮೆಂಟ್ ಕಬ್ಬಿಣ ಇತ್ಯಾದಿ ಸರಬರಾಜು ಮಾಡಲು ಒಪ್ಪಿಕೊಂಡ ತಪ್ಪಿಗೆ ವ್ಯಾಪಾರಿಯೊಬ್ಬರು ಬಿಲ್ ಪಾವತಿಯಾಗದೆ ಪರದಾಡುತ್ತಿದ್ದಾರೆ. ಅಲ್ಲದೆ ಮಿನಿ ವಿಧಾನ ಸೌಧ ಕಾಮಗಾರಿಯ ಗುತ್ತಿಗೆದಾರರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಸಂಬಂಧಪಟ್ಟವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ಆರೋಪಕ್ಕೆ ಪುಷ್ಟಿಯೆಂಬತೆ ಮಿನಿ ವಿಧಾನಸೌಧದ ಕಾಮಗಾರಿ ನಿವೇಶನದ ಗುತ್ತಿಗೆದಾರರ ಕಚೇರಿಯತ್ತ ಕಣ್ಣು ಹಾಯಿಸಿದರೆ ಅಲ್ಲಿ ಎಲ್ಲಾ ಖಾಲಿ ಮಾಡಿರುವ. ಸುಳಿವು ಕಾಣುವಂತಾಗಿದೆ. ಒಟ್ಟಿನಲ್ಲಿ ಬಹುದಿನಗಳ ಕನಸಿನ ಮಿನಿ ವಿಧಾನ ಸೌಧದ ಕಟ್ಟಡ ನಿರ್ಮಾಣದ ಹಂತದಲ್ಲಿಯೇ ಮುಳುಗಿ ಹೋಗಿದೆ ಎಂದರೆ ಅತಿಶಯ ಮಾತಲ್ಲ..!?

-ಶ್ರೀ ಸುತ