ವೀರಾಜಪೇಟೆ, ಅ.5: ಒಂಟಿ ಮಹಿಳೆ ಮನೆಯಲ್ಲಿರುವದನ್ನು ಗಮನಿಸಿ ಮನೆಯಲ್ಲಿದ್ದ ಚಿನ್ನಾಭರಣ ಗಳನ್ನು ಹಾಡಹಗಲೇ ದೋಚಿ ಪರಾರಿಯಾಗಿರುವ ಘಟನೆ ನಗರದ ಹೃದಯಭಾಗದಲ್ಲಿ ನಡೆದಿದೆ.ಗಣಪತಿ ದೇವಾಲಯದ ಸಮೀಪದ ಸರ್ಕಾರಿ ಅಸ್ಪತ್ರೆಯ ತಡೆಗೋಡೆಗೆ ಹೊಂದಿ ಕೊಂಡಿರುವಂತೆ ಮನೆಯಲ್ಲಿ ವಾಸವಿರುವ ಪುಟ್ಟರಾಜು ಅವರ ಪತ್ನಿ ಎ.ಅರ್ ಕುಸುಮ ಚಿನ್ನಾ ಭರಣಗಳನ್ನು ಕಳೆದುಕೊಂಡಿರುವ ನತದೃಷ್ಟೆ.