ಮಡಿಕೇರಿ, ಅ. 6: ಪತ್ನಿ ಹಾಗೂ ಮಾವನನ್ನು ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ ಆರೋಪಿ ಪತಿಗೆ ಇಲ್ಲಿನ ನ್ಯಾಯಾಲಯ ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಕ್ಕಂದೂರು ಗ್ರಾಮದ ತಂತಿಪಾಲ ನಿವಾಸಿ ಮಡ್ಲಂಡ ನಾಣಯ್ಯ (ಸುಬ್ರಮಣಿ) ಎಂಬಾತ ಅನಿತಾ ಎಂಬಾಕೆಯನ್ನು 2009ರಲ್ಲಿ ವಿವಾಹವಾಗಿದ್ದು, ಪತ್ನಿ ಮೇಲೆ ಹಲ್ಲೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ 2015-16ರಂದು ಅನಿತಾ, ಆಕೆಯ ತಂದೆ ಸುಬ್ಬಯ್ಯ, ಸಿರಿಲ್ ಕ್ರಾಸ್ತ, ಮನೋಜ್ ಕ್ರಾಸ್ತ ಅವರೊಂದಿಗೆ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ತೆರಳಿದ್ದರು. ಈ ಸಂದರ್ಭ ನಾಣಯ್ಯ ಅನಿತಾಳೊಂದಿಗೆ ಮಾತನಾಡಿ, ‘ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಹಾಕೋಣ, ಮನೆಯಲ್ಲಿರುವ ನಿನಗೆ ಸಂಬಂಧಿಸಿದ ವಸ್ತುಗಳನ್ನು ತೆಗೆದುಕೊಂಡು ಹೋಗು’ ಎಂದು ಮನೆಗೆ ಆಹ್ವಾನಿಸಿದ್ದಾನೆ. ನಾಲ್ವರು ತಂತಿಪಾಲದ ನಾಣಯ್ಯನ ಮನೆಗೆ ತೆರಳಿ ಅಂಗಳದಲ್ಲಿ ನಿಂತಿದ್ದ ವೇಳೆ ಮನೆಯ ಒಳನುಗ್ಗಿದ ನಾಣಯ್ಯ, ಹಿಂಬದಿಯಿಂದಾಗಿ ತೋಟದೊಳಗಿ ನಿಂದ ಬಂದು ಇಬ್ಬರನ್ನೂ ಕೊಲೆ ಮಾಡುವದಾಗಿ ಹೇಳಿ ಗುಂಡು ಹಾರಿಸಿದ್ದಾನೆ. ಗುಂಡು ಸುಬ್ಬಯ್ಯ ಅವರ ಬಲಭುಜ ಹಾಗೂ ಎಡಗೈಗೆ ತಾಗಿ ಗಾಯವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ಗ್ರಾಮಾಂತರ ಪೊಲೀಸರು ನಾಣಯ್ಯನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಹೇಳಲು ನ್ಯಾಯಾಲಯಕ್ಕೆ ತೆರಳಿದ್ದರು. ಈ ಸಂದರ್ಭ ನಾಣಯ್ಯ ಅನಿತಾಳೊಂದಿಗೆ ಮಾತನಾಡಿ, ‘ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಹಾಕೋಣ, ಮನೆಯಲ್ಲಿರುವ ನಿನಗೆ ಸಂಬಂಧಿಸಿದ ವಸ್ತುಗಳನ್ನು ತೆಗೆದುಕೊಂಡು ಹೋಗು’ ಎಂದು ಮನೆಗೆ ಆಹ್ವಾನಿಸಿದ್ದಾನೆ. ನಾಲ್ವರು ತಂತಿಪಾಲದ ನಾಣಯ್ಯನ ಮನೆಗೆ ತೆರಳಿ ಅಂಗಳದಲ್ಲಿ ನಿಂತಿದ್ದ ವೇಳೆ ಮನೆಯ ಒಳನುಗ್ಗಿದ ನಾಣಯ್ಯ, ಹಿಂಬದಿಯಿಂದಾಗಿ ತೋಟದೊಳಗಿ ನಿಂದ ಬಂದು ಇಬ್ಬರನ್ನೂ ಕೊಲೆ ಮಾಡುವದಾಗಿ ಹೇಳಿ ಗುಂಡು ಹಾರಿಸಿದ್ದಾನೆ. ಗುಂಡು ಸುಬ್ಬಯ್ಯ ಅವರ ಬಲಭುಜ ಹಾಗೂ ಎಡಗೈಗೆ ತಾಗಿ ಗಾಯವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ಗ್ರಾಮಾಂತರ ಪೊಲೀಸರು ನಾಣಯ್ಯನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.