ಕುಶಾಲನಗರ, ಅ. 6: ರಾಷ್ತ್ರೀಯ ಮೌಲ್ಯಮಾಪನ ಅಂಗೀಕೃತ ಪರಿಷತ್ನ ಅಧಿಕಾರಿಗಳ ತಂಡ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಶೈಕ್ಷಣಿಕ ಬೆಳವಣಿಗೆ ಕುರಿತು ಮಾಹಿತಿ ಕಲೆ ಹಾಕಿದರು.
ರಾಷ್ತ್ರೀಯ ಮೌಲ್ಯಮಾಪನ ಅಂಗೀಕೃತ ಪರಿಷತ್ನ ಚೇರ್ಮನ್ ಲಕ್ನೋ ವಿವಿಯ ಕುಲಪತಿ ಡಾ. ಮಿಥಲ್ ಮತ್ತು ನ್ಯಾಕ್ ತಂಡದ ಸದಸ್ಯರ ತಂಡ ಕಾಲೇಜಿಗೆ ಭೇಟಿ ನೀಡಿ ಐದು ವರ್ಷಗಳ ಅವಧಿಯಲ್ಲಿ ಉಂಟಾದ ಶೈಕ್ಷಣಿಕ ಬೆಳವಣಿಗೆಯನ್ನು ಕುರಿತು ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕ ವರ್ಗ, ಉಪನ್ಯಾಸಕರು, ಆಡಳಿತ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಕಾಲೇಜು ಅಭಿವೃದ್ಧಿ ಸಮಿತಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಪ್ರಮುಖರೊಂದಿಗೆ ಚರ್ಚಿಸಿದರು.
ಕಾಲೇಜಿನಲ್ಲಿ ಕೆಲವು ಸ್ನಾತಕೋತ್ತರ ವಿಭಾಗಗಳನ್ನು ಪ್ರಾರಂಭಿಸುವದು, ಪ್ರಾಧ್ಯಾಪಕ ವರ್ಗದವರು ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಕಂಪ್ಯೂಟರ್ ಜ್ಞಾನ ದೊರೆಯುವಂತೆ ಮಾಡುವದು, ಗ್ರಂಥಾಲಯವನ್ನು ವಿಸ್ತರಿಸುವದು, ವಿಭಾಗವಾರು ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣಗಳನ್ನು ಆಯೋಜಿಸಲು ಕ್ರಮಕೈಗೊಳ್ಳುವದು ಇನ್ನು ಮುಂತಾದ ಸಲಹೆಗಳನ್ನು ನೀಡಿದರು.