ಮಡಿಕೇರಿ, ಅ. 6: ಹುಚ್ಚುನಾಯಿ ರೋಗವು ಮಾರಣಾಂತಿಕ ಕಾಯಿಲೆಯಾಗಿದ್ದು, ರೇಬೀಸ್ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುವದು ಅತ್ಯಗತ್ಯ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಹೇಳಿದರು.
ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ರೇಬೀಸ್ ರೋಗ ಕುರಿತು ನಡೆದ ಜಾಗೃತಿ ಶಿಬಿರದಲ್ಲಿ ಮಾತನಾಡಿದರು. ರೇಬೀಸ್ ರೋಗದ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಅಗತ್ಯ ಎಂದು ಸಲಹೆ ಮಾಡಿದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಎ.ಬಿ. ತಮ್ಮಯ್ಯ ಮಾತನಾಡಿ, ಹುಚ್ಚುನಾಯಿ ರೋಗ (ರೇಬಿಸ್)ದ ವಿರುದ್ಧ ಸಾಕು ನಾಯಿಗಳಿಗೆ ತಾ. 6 ರಿಂದ 8ರ ವರೆಗೆ ಬೆಳಿಗ್ಗೆ 9 ರಿಂದ 12 ಗಂಟೆಯವರೆಗೆ ನಗರದ ಜಿಲ್ಲಾ ಪಶು ಆಸ್ಪತ್ರೆ (ಪಾಲಿಕ್ಲಿನಿಕ್) ಆವರಣದಲ್ಲಿ ಉಚಿತ ಲಸಿಕೆ ಹಾಕಲಾಗುವದು ಎಂದು ತಿಳಿಸಿದರು.
ರೇಬೀಸ್ ಸೋಂಕು ತಗುಲಿದರೆ ಚಿಕಿತ್ಸೆ ಇರುವದಿಲ್ಲ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು.
ಅರಂತೋಡು ಪಶು ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಮಾತನಾಡಿ, ರೇಬೀಸ್ ರೋಗವು ರ್ಯಾಬ್ಡೋ ಜಾತಿಗೆ ಸೇರಿದ ವೈರಾಣು ಆಗಿದ್ದು, ರೋಗ ಗ್ರಾಹಕ ಪ್ರಾಣಿಗಳಿಂದ ರೇಬೀಸ್ ಹರಡುತ್ತದೆ ಎಂದು ತಿಳಿಸಿದರು.
ರೋಗಗ್ರಸ್ಥ ಪ್ರಾಣಿಯ ಕಚ್ಚುವಿಕೆಯಿಂದ ಮತ್ತು ಜೊಲ್ಲು ಸಂಪರ್ಕದಿಂದ ರೋಗ ಹರಡುತ್ತದೆ. ನಾಯಿಗಳಲ್ಲಿ ರೋಗ ಲಕ್ಷಣಗಳ ಸ್ವರೂಪ ಹಾಗೂ ಆಧಾರದ ಮೇಲೆ ಉಗ್ರ ಹಾಗೂ ಮೌನ ಸ್ವರೂಪದ ರೇಬೀಸ್ ಎಂದು ತಿಳಿಸಿದರು.
ರೋಗಗ್ರಸ್ಥ ಪ್ರಾಣಿಗಳಲ್ಲಿ ಜ್ವರ, ಸ್ವಭಾವದಲ್ಲಿ ವ್ಯತ್ಯಾಸ, ಪ್ರಚೋದನೆ ಇಲ್ಲದೆ ಕೆರಳುವದು, ಬೊಗಳುವದು, ಗೊತ್ತು ಗುರಿ ಇಲ್ಲದೆ ಸಿಕ್ಕವನ್ನು ಕಚ್ಚುವದು, ವಿಪರೀತ ಜೊಲ್ಲು ಸುರಿಸುವದು ರೋಗದ ಲಕ್ಷಣವಾಗಿದೆ ಎಂದು ಮಾಹಿತಿ ನೀಡಿದರು.
ಗಂಟಲು ಹಾಗೂ ಕೆಳದವಡೆಯ ಪಾಶ್ರ್ವ ವಾಯುವಿನಿಂದ ನೀರು, ಆಹಾರ ಸೇವಿಸಲಾಗದೆ ಯಾತನೆ ಅನುಭವಿಸುವದು. ಅಸಹಜ ನಡಿಗೆ, ಬಾಯಿಯ ಕೆಳಭಾಗ ಜೋತಾಡುವಿಕೆ ಮತ್ತಿತರ ಲಕ್ಷಣವಾಗಿದೆ ಎಂದು ಹೇಳಿದರು.
ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಲು ಮುಂಜಾಗೃತಾ ಕ್ರಮವಾಗಿ ಪಶು ವೈದ್ಯರ ಸಲಹೆಯಂತೆ ಸಾಕು ನಾಯಿಗಳಿಗೆ ಲಸಿಕೆ ಹಾಕಿಸುವದು ಅತ್ಯಗತ್ಯ ಎಂದು ಸಲಹೆ ಮಾಡಿದರು.
ನಾಯಿ ಕಚ್ಚಿದ ತಕ್ಷಣ ಕಾರ್ಬೋಲಿಕ್ ಆಮ್ಲ ಸಾಬೂನಿನಿಂದ ನಾಲ್ಕು ಐದು ಬಾರಿ ಚೆನ್ನಾಗಿ ತಿಕ್ಕಿ ತೊಳೆಯುವದು, ಡೆಟಾಲ್, ಸ್ಯಾವ್ಲಾನ್, ಟಿಂಚರ್ ಅಯೋಡಿನ್, ಸರ್ಜಿಕಲ್ ಸ್ವಿರಿಟ್ ಅಥವಾ ಯಾವದೇ ಆಂಟಿ ಸಪ್ಟಿಕ್ ಔಷಧಗಳನ್ನು ಗಾಯಕ್ಕೆ ಲೇಪಿಸಬೇಕು ಎಂದು ತಿಳಿಸಿದರು.
ಬಾಯಿಯ ಕೆಳಭಾಗ ಜೋತಾಡುವಿಕೆ ಮತ್ತಿತರ ಲಕ್ಷಣವಾಗಿದೆ ಎಂದು ಹೇಳಿದರು.