ಗೋಣಿಕೊಪ್ಪಲು, ಅ. 6: ಪಟ್ಟಣದ ರಸ್ತೆಯ ಎರಡು ಬದಿಯಲ್ಲಿಯೂ ವಾಹನದಲ್ಲಿ ವ್ಯಾಪಾರ ನಡೆಸುತ್ತಿರುವದರಿಂದ ‘ಟ್ರಾಫಿಕ್’ ಸಮಸ್ಯೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಈ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಂಡು ಅಂತಹ ವಾಹನಗಳ ಮೇಲೆ ಮೊಕದ್ದಮೆ ದಾಖಲಿಸುವಂತೆ ಪೊಲೀಸರಿಗೆ ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಕಾಡ್ಯಮಾಡ ಸುನೀಲ್ ಮಾದಪ್ಪ ಮನವಿ ಮಾಡಿದರು.

ಗೋಣಿಕೊಪ್ಪ ಠಾಣೆಗೆ ನೂತನವಾಗಿ ಆಗಮಿಸಿ ಅಧಿಕಾರ ಸ್ವೀಕರಿಸಿರುವ ಠಾಣಾಧಿಕಾರಿ ಶ್ರೀಧರ್ ಅವರೊಂದಿಗೆ ಚೇಂಬರ್‍ನ ಗೋಣಿಕೊಪ್ಪಲು, ಅ. 6: ಪಟ್ಟಣದ ರಸ್ತೆಯ ಎರಡು ಬದಿಯಲ್ಲಿಯೂ ವಾಹನದಲ್ಲಿ ವ್ಯಾಪಾರ ನಡೆಸುತ್ತಿರುವದರಿಂದ ‘ಟ್ರಾಫಿಕ್’ ಸಮಸ್ಯೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಈ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಂಡು ಅಂತಹ ವಾಹನಗಳ ಮೇಲೆ ಮೊಕದ್ದಮೆ ದಾಖಲಿಸುವಂತೆ ಪೊಲೀಸರಿಗೆ ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಕಾಡ್ಯಮಾಡ ಸುನೀಲ್ ಮಾದಪ್ಪ ಮನವಿ ಮಾಡಿದರು.

ಗೋಣಿಕೊಪ್ಪ ಠಾಣೆಗೆ ನೂತನವಾಗಿ ಆಗಮಿಸಿ ಅಧಿಕಾರ ಸ್ವೀಕರಿಸಿರುವ ಠಾಣಾಧಿಕಾರಿ ಶ್ರೀಧರ್ ಅವರೊಂದಿಗೆ ಚೇಂಬರ್‍ನ ಅನವಶ್ಯಕವಾಗಿ ರಸ್ತೆಯಲ್ಲಿ ಸಂಚಾರ ನಡೆಸುವದು, ರಸ್ತೆ ಬದಿಯಲ್ಲಿ ವಾಹನವನ್ನು ನಿಲ್ಲಿಸಿಕೊಂಡು ಹಣ್ಣು ತರಕಾರಿ, ಹೂವಿನ ಗಿಡ, ಬಟ್ಟೆ, ಇತ್ಯಾದಿ ವ್ಯಾಪಾರ ನಡೆಸುತ್ತಿರುವದು ಹೆಚ್ಚಾಗಿದೆ. ಬಸ್ ನಿಲ್ದಾಣದಲ್ಲಿ ಸಮಯಕ್ಕೆ ಮೊದಲೇ ಖಾಸಗಿ ಬಸ್ ನಿಲುಗಡೆ, ಆಯಕಟ್ಟಿನ ಪ್ರದೇಶದಲ್ಲಿ ಗಾಂಜಾ ಮಾರಾಟ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಈ ಸಂದರ್ಭ ಸಮಸ್ಯೆಗಳಿಗೆ ಉತ್ತರಿಸಿದ ಠಾಣಾಧಿಕಾರಿ ಶ್ರೀಧರ್, ವಾಹನ ದಟ್ಟಣೆ ನಿವಾರಣೆಗೆ ಅಂಗಡಿ ಮಾಲೀಕರ ಸಹಾಯ ಬೇಕಾಗಿದೆ. ‘ಟ್ರಾಫಿಕ್’ ಸಮಸ್ಯೆ ನಿವಾರಿಸಲು 50 ಮೀ.ಗೆ ಒಬ್ಬರಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಖಾಸಗಿ ಹಾಗೂ ಸರ್ಕಾರಿ ಬಸ್ ಚಾಲಕರಿಗೆ ‘ಟ್ರಾಫಿಕ್’ ಸಮಸ್ಯೆ ಮಾಡದಂತೆ ಎಚ್ಚರ ನೀಡಲಾಗಿದೆ. ಆಯ ಕಟ್ಟಿನಲ್ಲಿ ಗಾಂಜಾ ಮಾರಾಟದ ಬಗ್ಗೆ ನಿಗಾ ವಹಿಸಲಾಗಿದೆ. ‘ಒನ್‍ವೆ’ ಮಾರ್ಗದ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಯಾವದೇ ಕಾರಣಕ್ಕೂ ಅಹಿತಕರ ಘಟನೆಗೆ ಆಸ್ಪದ ನೀಡುವದಿಲ್ಲ ಎಂದರು.

ಚೇಂಬರ್ ಆಫ್ ಕಾಮರ್ಸ್‍ನ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್, ಗೋಣಿಕೊಪ್ಪಲು ಚೇಂಬರ್‍ನ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ನಿರ್ದೆಶಕರಾದ ಸುಮಿ ಸುಬ್ಬಯ್ಯ, ಪ್ರಭಾಕರ್ ನೆಲ್ಲಿತ್ತಾಯ, ಚೇಂಬರ್‍ನ ಪ್ರಮುಖರಾದ ಗಿರೀಶ್ ಗಣಪತಿ, ಕೇಶವ್ ಕಾಮತ್, ರಾಜಶೇಖರ್, ಕೃಷ್ಣಪ್ಪ, ಅರವಿಂದ್ ಕುಟ್ಟಪ್ಪ, ಅರುಣ್ ಪೂಣಚ್ಚ, ಅಜಿತ್ ಅಯ್ಯಪ್ಪ ಮುಂತಾದವರು ‘ಟ್ರಾಫಿಕ್’ ವ್ಯವಸ್ಥೆಯ ಬಗ್ಗೆ ಚರ್ಚಿಸಿದರು. ಚೇಂಬರ್‍ನ ಕಾರ್ಯದರ್ಶಿ ತೆಕ್ಕಡ ಕಾಶಿ ಸ್ವಾಗತಿಸಿದರು. ಪ್ರಭಾಕರ್ ನೆಲ್ಲಿತ್ತಾಯ ವಂದಿಸಿದರು. -ಹೆಚ್.ಕೆ. ಜಗದೀಶ್