ಮಡಿಕೇರಿ, ಅ. 6: ಸೆಪ್ಟೆಂಬರ್‍ನಲ್ಲಿ ಡೆಲ್ಲಿಯಲ್ಲಿ ನಡೆದ ಎನ್‍ಸಿಸಿ ತಲ್‍ಸೈನಿಕ್ ಕ್ಯಾಂಪ್‍ನಲ್ಲಿ ಕರ್ನಾಟಕ ಪರ ಪ್ರತಿನಿಧಿಸಲ್ಪಟ್ಟ ನಲವತ್ತು ಮಕ್ಕಳಲ್ಲಿ ಕೊಡಗಿನವರಾದ ಮುತ್ತಮ್ಮ ಎಂ.ಯು. ಒಬ್ಬಳಾಗಿ ಆಯ್ಕೆಯಾಗಿದ್ದರು.
ಮಂಗಳೂರು, ಮಣಿಪಾಲ, ಶಿವಮೊಗ್ಗ, ತುಮಕೂರು ಹೀಗೆ ಬೇರೆ ಬೇರೆ ಜಾಗದಲ್ಲಿ ನಡೆದ ಶಿಬಿರದಲ್ಲಿ ಒಟ್ಟು 600 ಮಕ್ಕಳು ಪಾಲ್ಗೊಂಡಿದ್ದರು. ಇವರಲ್ಲಿ ನಲವತ್ತು ಮಕ್ಕಳನ್ನು ಮಾತ್ರ ಆಯ್ಕೆ ಮಾಡಲಾಗಿತ್ತು. ಕರ್ನಾಟಕಕ್ಕೆ 2ನೇ ಸ್ಥಾನ ಬಂದಿದೆ.
ಮುತ್ತಮ್ಮ ಕೆದಮುಳ್ಳೂರುವಿನ ಮಾಳೇಟಿರ ಜಫ್ರಿ ಹಾಗೂ ಗೀತಾ ದಂಪತಿಯ ಪುತ್ರಿ. ಮೂಡಬಿದರೆ ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ಬಿಬಿಎ ಓದುತ್ತಿದ್ದಾಳೆ.