ಸಿದ್ದಾಪುರ, ಅ. 6: ಜೀವನದಲ್ಲಿ ಜಿಗುಪ್ಸೆಗೊಂಡು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ. ಪಾಲಿಬೆಟ್ಟದ ಶಾಸ್ತ್ರೀಯಹಳ್ಳಿ ನಿವಾಸಿಯಾಗಿರುವ ಸುರೇಂದ್ರ ಎಂಬವರ ಪುತ್ರಿ ಅಜೀತ (21) ಎಂಬಾಕೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಒಳಗಿನ ಕೋಣೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾಳೆ. ಮೃತಳ ಎರಡು ಪುಟ್ಟ ಮಕ್ಕಳು ಸಮೀಪದ ಅಂಗನವಾಡಿಗೆ ತೆರಳಿದ್ದವು. ಈ ಸಂದರ್ಭ ಅಜೀತ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮೃತದೇಹವನ್ನು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.