ಮಡಿಕೇರಿ, ಅ. 11: ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನೆಯ 18 ಅಂಗನವಾಡಿ ಕಾರ್ಯಕರ್ತೆ ಹಾಗೂ 36 ಅಂಗನವಾಡಿ ಸಹಾಯಕಿಯರ ಹುದ್ದೆ ಭರ್ತಿ ಮಾಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಗೌರವಧನ ಆಧಾರದ ಮೇಲೆ ಕಾರ್ಯಕರ್ತೆಯರಿಗೆ ರೂ.8 ಸಾವಿರ ಮತ್ತು ಸಹಾಯಕಿಯರಿಗೆ ರೂ.4 ಸಾವಿರವನ್ನು ಪಾವತಿಸಲಾಗುವದು.
ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇರುವ ಕೇಂದ್ರದ ಹೆಸರು: ದೇವನೂರು 2, ಕೈನಾಟಿ, ಕೊಟ್ಟಗೇರಿ 2, ಹೊಸಲ್ಲಿಹೋಪು, ಬೇಗೂರು 2, ಹುದೂರು, ಕಾನೂರು ಚೈನ್ ಗೇಟ್, ತೂಚಮಕೇರಿ, ಬಲ್ಯಮಂಡೂರು(ಮಿನಿ), ರುದ್ರಗುಪ್ಪೆ, ಮಾಕುಟ್ಟ, ಪಳ್ಳಕೆರೆ, ಸಿದ್ದಾಪುರ ಹೈಸ್ಕೂಲ್ ಪೈಸಾರಿ, ಕಾಯಿಮನಿ, ನಾಯಿಮನೆ ಕಾಲೋನಿ, ಐಮಂಗಲ, ಗಾಂಧಿನಗರ, ಪಾಲಂಗಾಲ.
ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿ ಇರುವ ಕೇಂದ್ರದ ಹೆಸರು: ಕೊಂಡಂಗೇರಿ, ಮಂಚಳ್ಳಿ 2, ಬೆಳ್ಳುಮಾಡು 1, ವಡೆಬೈಲು, ವಿ.ಬಾಡಗ, ಹೊಸನಲ್ಲಿಕೋಟೆ, ಕೊಟ್ಟಗೇರಿ 2, ಬಂಡಡೆ, ಕಾಟಿಗುಂಡಿ ಪೈಸಾರಿ, ತಾವಳಗೇರಿ 1, ಆಂಗೋಡು, ತೆರಾಲು 2, ಚೂರಿಕಾಡು, ಕಾವಾಡಿ 2, ಕುಂದೂರು, ಕಾಕೋಟುಪರಂಬು, ಗುಂಡಿಗೆರೆ, ತೂಚಮಕೇರಿ, ಎಡತೊರೆ, ನಾಯಿಮನೆ ಕಾಲೋನಿ, ಮರಪಾಲ, ಕೆ.ಇ.ಬಿ.ಕಾಲೋನಿ, ಅರುವತ್ತೋಕ್ಕಲು 2, ಕಳಕೂರು, ನಲ್ವತ್ತೋಕ್ಕಲು 2,, ಶ್ರೀಮಂಗಲ 2, ಚಾಮಿಯಾಲ, ಕಡಂಗಮರೂರು, ಪರಕಟಗೇರಿ, ಪೆರುಂಬಾಡಿ 1, ಪಾಲಿಬೆಟ್ಟ ತೋಟ, ಆನಂದಪುರ, ಪೂಜೆಕಲ್ಲು, ತೋಮರ, ಪಾಲಂಗಾಲ, ಕಡಂಗ.
ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅಕ್ಟೋಬರ್, 30 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಕಾರ್ಯಕರ್ತೆ ಹುದ್ದೆಗೆ 10ನೇ ತರಗತಿ ತೇರ್ಗಡೆ ಹಾಗೂ ಸಹಾಯಕಿ ಹುದ್ದೆಗೆ 4 ರಿಂದ 9ನೇ ತರಗತಿಯೊಳಗೆ ವ್ಯಾಸಂಗ ಮಾಡಿರಬೇಕು. 18 ರಿಂದ 35 ವರ್ಷ ವಯೋಮಿತಿಯೊಳಗಿರುವ ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವೆಬ್‍ಸೈಟ್ ತಿತಿತಿ.ಚಿಟಿgಚಿಟಿತಿಚಿಜi ಡಿeಛಿಡಿuiಣ.ಞಚಿಡಿ.ಟಿiಛಿ.iಟಿ ನಲ್ಲಿ ಅರ್ಜಿಯನ್ನು ಭರ್ತಿ ಮಾಡಬಹುದಾಗಿರುತ್ತದೆ. ಆನ್‍ಲೈನ್‍ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗಿದ್ದು, ಇತರೆ ಯಾವದೇ ರೂಪದ ಅರ್ಜಿಗಳನ್ನು ಯಾವದೇ ಕಾರಣಕ್ಕೂ ಪರಿಗಣಿಸುವದಿಲ್ಲ.
ಹೆಚ್ಚಿನ ಮಾಹಿತಿಗೆ ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ-08274-249010, 249788 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪೊನ್ನಂಪೇಟೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇಮಕಾತಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ತಿಳಿಸಿದ್ದಾರೆ.