ಮಡಿಕೇರಿ, ಅ. 11: ಸರಕಾರ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದರೂ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ರದ್ದುಪಡಿಸಿರು ವದನ್ನು ಆಕ್ಷೇಪಿಸಿ ತಾ. 16 ರಂದು ``ಸಂತ್ರಸ್ತರಿಗೆ ಸಾಂತ್ವಾನ-ಬಂದವರಿಗೆ ತಣ್ಣೀರು’’ ಎಂಬ ಘೋಷವಾಕ್ಯ ದೊಂದಿಗೆ ಪರ್ಯಾಯ ಗೋಷ್ಠಿ ನಡೆಸಲು ನಿರ್ಧರಿಸಲಾಗಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ, ಸರಕಾರದ ಅನುದಾನದ ನಡುವೆಯೂ ಪ್ರಧಾನ ಸಮಿತಿ ಕವಿಗೋಷ್ಠಿಯನ್ನು ರದ್ದು ಮಾಡಿರುವದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಇದು ಸಾಹಿತ್ಯ ಕ್ಷೇತ್ರಕ್ಕೆ ಮಾಡುವ ಅವಮಾನ ಎಂದು ಖಂಡಿಸಿದರು.ಪ್ರತಿ ವರ್ಷ ವಿಶೇಷವಾಗಿ ಯುವ ಕವಿಗಳಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ನಡೆಯುತ್ತಿದೆ. ಕಳೆದ ವರ್ಷ ದಸರಾ ಪ್ರಧಾನ ಸಮಿತಿಯಿಂದ 60 ಸಾವಿರ ರೂ. ಗಳನ್ನು ನೀಡಲಾಗಿತ್ತು. (ಮೊದಲ ಪುಟದಿಂದ) ಈ ಬಾರಿ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ದಸರಾ ಕಾರ್ಯಕ್ರಮಗಳೆಲ್ಲವೂ ರದ್ದಾಗಬಹುದು ಎಂದು ಹೇಳಲಾಗಿತ್ತು. ಅನುದಾನ ಬಿಡುಗಡೆಯಾಗಿದ್ದರೆ ಈ ನಿರ್ಧಾರಕ್ಕೆ ಕವಿಗೋಷ್ಠಿ ಸಮಿತಿ ಕೂಡ ಬದ್ಧವಾಗಿತ್ತು. ಆದರೆ, ಇತ್ತೀಚೆಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರು ದಸರಾಕ್ಕೆ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಅದ್ಧೂರಿ ಇಲ್ಲದೆ ಸಾಂಪ್ರದಾಯಿಕ ದಸರಾ ಆಚರಣೆ ಮಾಡಿ ಎಂದು ಹೇಳಿದ್ದರು. ಸರಕಾರ 50 ಲಕ್ಷ ರೂ. ಮಡಿಕೇರಿಗೆ ಹಾಗೂ 25 ಲಕ್ಷ ರೂ. ಗೋಣಿಕೊಪ್ಪಲುವಿಗೆ ಬಿಡುಗಡೆ ಮಾಡಿರುವದನ್ನು ಕವಿಗೋಷ್ಠಿ ಸಮಿತಿ ಸ್ವಾಗತಿಸುತ್ತದೆ ಎಂದು ಹೇಳಿದರು.

ಆದರೆ, ಪ್ರಧಾನ ಸಮಿತಿ ಕವಿಗೋಷ್ಠಿಯನ್ನು ರದ್ದುಪಡಿಸಿ ರುವದಾಗಿ ಹೇಳಿದೆ. ಅಲ್ಲದೆ, ಕವಿಗೋಷ್ಠಿ ನಡೆಸಿದರೆ ಕಪ್ಪುಚುಕ್ಕಿ ಯಾಗಬಹುದು ಎಂಬ ಅಭಿಪ್ರಾಯ ವನ್ನು ವ್ಯಕ್ತಪಡಿಸಿದೆÉ. ಇದನ್ನು ಕವಿಗೋಷ್ಠಿ ಸಮಿತಿ ಖಂಡಿಸುತ್ತದೆ. ಕವಿಗೋಷ್ಠಿಯ ಮೂಲಕ ಸಂತ್ರಸ್ತರಿಗೆ ಧೈರ್ಯ ತುಂಬುವ ಕಾರ್ಯ ಆಗಬೇಕಿತ್ತು. ಇದೇ ವಿಷಯದಲ್ಲಿ ಈ ವರ್ಷ ಕವಿಗೋಷ್ಠಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಏಕಾಏಕಿಯಾಗಿ ರದ್ದುಪಡಿಸಿರುವದು ಸರಿಯಲ್ಲ ಎಂದು ಹೇಳಿದರು.

50 ಲಕ್ಷ ರೂ. ಗಳಲ್ಲಿ ದಶಮಂಟಪಗಳಿಗೆ ತಲಾ 2 ಲಕ್ಷ ರೂ. ಹಾಗೂ ಕರಗಗಳಿಗೆ ತಲಾ 1.5 ಲಕ್ಷ ರೂ. ನೀಡಲು ನಿರ್ಧರಿಸಿರುವದನ್ನು ಸ್ವಾಗತಿಸುತ್ತೇವೆ. ಆದರೆ, ಉಳಿದ ಹಣದಲ್ಲಿ ಕವಿಗೋಷ್ಠಿಗೆ ಪುಟ್ಟ ಅನುದಾನ ನೀಡಬಹುದಿತ್ತು. ಕೊನೆಯ ಎರಡು ದಿನಗಳ ಕಾಲ ಸಾಂಸ್ಕøತಿಕ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದಾರೆ. ಅಲ್ಲದೆ ಎರಡು ದಿನದ ವೇದಿಕೆಗೆ ಹಾಗೂ ಲೈಟಿಂಗ್ಸ್‍ಗೆ 8 ಲಕ್ಷ ರೂ. ವೆಚ್ಚ ಮಾಡುತ್ತಾರೆ. ಆದರೆ, ಕವಿಗೋಷ್ಠಿಗೆ ನೀಡಲು ಅನುದಾನ ಇಲ್ಲದಿರುವದು ಖಂಡನೀಯ ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕ ದಸರಾಕ್ಕೆ ಹಣ ಬಿಡುಗಡೆಯಾಗುತ್ತಿದೆ. ಅದರ ಉದ್ದೇಶ ಕೂಡ ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಉಳಿಸುವಂತಹದ್ದು. ಆದರೆ ಕವಿಗೋಷ್ಠಿಯನ್ನು ಇದರಿಂದ ಯಾವ ಕಾರಣಕ್ಕೆ ಹೊರಗಿಟ್ಟಿದ್ದಾರೆ ಎನ್ನುವದು ತಿಳಿಯುತ್ತಿಲ್ಲ. ಕವಿಗೋಷ್ಠಿಯಿಂದಾಗಿ ಸಾಕಷ್ಟು ಯುವ ಕವಿಗಳಿಗೆ ಪೆÇ್ರೀತ್ಸಾಹ ಲಭ್ಯವಾಗಿದೆ. ಇದರ ಮಹತ್ವ ಕೆಲವರಿಗೆ ತಿಳಿದಿಲ್ಲ ಎಂದು ವಿಷಾದಿಸಿದರು.

ಈ ಹಿನ್ನೆಲೆಯಲ್ಲಿ ತಾ. 16 ರಂದು ಪರ್ಯಾಯ ಕವಿಗೋಷ್ಠಿ ನಡೆಯಲಿದೆ. ಅಂದು ಬೆಳಿಗ್ಗೆ 10.30ಕ್ಕೆ ಬಾಲಭವನದಲ್ಲಿ ನಡೆಯುವ ಈ ಕಾರ್ಯಕ್ರದಲ್ಲಿ ``ದಸರಾ ಸಮಿತಿ ಅನುದಾನ ರಹಿತ’’ ಎಂಬ ಟ್ಯಾಗ್‍ಲೈನ್ ಬಳಸಲಾಗುತ್ತದೆ. ಸಂತ್ರಸ್ತರಿಗೆ ಸಾಂತ್ವನ ಎಂಬ ವಿಷಯವನ್ನು ಇಡಲಾಗಿದೆ. ಸುಮಾರು 25 ಕವಿಗಳು ಅಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕವನ ವಾಚಿಸುತ್ತಾರೆ. ಸಾಹಿತಿ ಹಾಗೂ ಸಂತ್ರಸ್ತರೂ ಆಗಿರುವ ನಾಗೇಶ್ ಕಾಲೂರು ಅಧ್ಯಕ್ಷತೆ ವಹಿಸಲಿದ್ದಾರೆ. ಕವಿ ಹಾಗೂ ಸಂತ್ರಸ್ತ ಕುಡೆಕಲ್ ಸಂತೋಷ್ ಉದ್ಘಾಟನೆ ಮಾಡಲಿದ್ದಾರೆ. ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮುಖ್ಯ ಅತಿಥಿ ಗಳಾಗಿ ಆಗಮಿಸುತ್ತಾರೆ. ಜಿಲ್ಲಾಧಿಕಾರಿ ಗಳನ್ನು ಆಹ್ವಾನಿಸ ಲಾಗುತ್ತಿದೆ ಎಂದರು.

ಕವಿಗೋಷ್ಠಿಯಲ್ಲಿ ಆಹ್ವಾನ ಪತ್ರಿಕೆ, ಸ್ಮರಣಿಕೆ, ಗೌರವಧನ, ಕಾಫಿ, ಟೀ ಹಾಗೂ ಮಧ್ಯಾಹ್ನದ ಊಟ ಇರುವದಿಲ್ಲ. ಯಾರಿಂದಲೂ ಹಣ ಸಂಗ್ರಹ ಮಾಡುವದಿಲ್ಲ. ಅನುದಾನ ನೀಡದ ಕಾರಣಕ್ಕಾಗಿ ಬಂದವರಿಗೆ ಪ್ರತಿಭಟನೆಯ ಸಂಕೇತವಾಗಿ ``ತಣ್ಣೀರು’’ ವಿತರಿಸಲಾಗುವದು. ಗುರುವಾರ ನಡೆದ ಸಮಿತಿ ತುರ್ತು ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ನಿಕಟಪೂರ್ವ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ಕವಿಗೋಷ್ಠಿ ಯನ್ನು ರದ್ದುಪಡಿಸಿರುವದು ಆಕ್ಷೇಪಾರ್ಹ. ಇದನ್ನು ಸಂತ್ರಸ್ತರಿಗೆ ಸಾಂತ್ವನ ತುಂಬಲು ಬಳಸಿಕೊಳ್ಳ ಬೇಕಿತ್ತು. ಸರಕಾರದಿಂದ 50 ಲಕ್ಷ ರೂ. ಬಿಡುಗಡೆಯಾಗಿದೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿಯಮಾನು ಸಾರ ಬಿಡುಗಡೆ ಯಾಗಿರುವ ಅನುದಾನದಲ್ಲಿ ಶೇ. 60ರಷ್ಟನ್ನು ಕಲಾವಿದರು, ಕಲೆ ಸಾಹಿತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ವಿನಿ ಯೋಗಿಸಬೇಕು. ಉಳಿದ ಮೊತ್ತವನ್ನು ಇನ್ನಿತರ ಚಟುವಟಿಕೆಗಳಿಗೆ ಬಳಸಲು ಅವಕಾಶ ವಿರುತ್ತದೆ. ಆದರೆ ಕಲಾವಿದರನ್ನು ಪ್ರೋತ್ಸಾಹಿಸುವ ಕವಿಗೋಷ್ಠಿಗೆ ಕನಿಷ್ಟ ಶೇ 1ರಷ್ಟು ಅನುದಾನ ನೀಡಿದ್ದರೂ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ಅವಕಾಶವಾಗುತ್ತಿತ್ತು. ಇದೀಗ ಆಸಕ್ತಿಯಿಂದಿದ್ದ ಕಲಾ ವಿದರು, ಕವಿಗಳು ನಿರಾಶರಾಗಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಕವಿಗೋಷ್ಠಿ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎನ್. ನಾಸಿರ್, ಪದಾಧಿಕಾರಿಗಳಾದ ವಿಘ್ನೇಶ್ ಭೂತನಕಾಡು, ಕಿಶೋರ್ ರೈ ಕತ್ತಲೆಕಾಡು, ಮನು ಮುಂತಾದವರು ಉಪಸ್ಥಿತರಿದ್ದರು.