ಮಡಿಕೇರಿ, ಅ. 11: ಯಾರು ಪ್ರಾಕೃತಿಕ ವಿಕೋಪ ಸಂದರ್ಭ ತಮ್ಮ ಸ್ವಂತ ವಾಸದ ಮನೆಗಳನ್ನು ಕಳೆದುಕೊಂಡಿದ್ದಾರೋ, ಅಂತಹವರಿಗೆ ಮಾತ್ರ ಸರಕಾರದಿಂದ ಪುನರ್ವಸತಿ ಕಲ್ಪಿಸುವ ತೀರ್ಮಾನವಾಗಿದ್ದು, ಬಾಡಿಗೆ ಮನೆಯಲ್ಲಿದ್ದವರಿಗೆ ಹಾಗೂ ಮಡಿಕೇರಿ, ಅ. 11: ಯಾರು ಪ್ರಾಕೃತಿಕ ವಿಕೋಪ ಸಂದರ್ಭ ತಮ್ಮ ಸ್ವಂತ ವಾಸದ ಮನೆಗಳನ್ನು ಕಳೆದುಕೊಂಡಿದ್ದಾರೋ, ಅಂತಹವರಿಗೆ ಮಾತ್ರ ಸರಕಾರದಿಂದ ಪುನರ್ವಸತಿ ಕಲ್ಪಿಸುವ ತೀರ್ಮಾನವಾಗಿದ್ದು, ಬಾಡಿಗೆ ಮನೆಯಲ್ಲಿದ್ದವರಿಗೆ ಹಾಗೂ ಮಡಿಕೇರಿ, ಅ. 11: ಯಾರು ಪ್ರಾಕೃತಿಕ ವಿಕೋಪ ಸಂದರ್ಭ ತಮ್ಮ ಸ್ವಂತ ವಾಸದ ಮನೆಗಳನ್ನು ಕಳೆದುಕೊಂಡಿದ್ದಾರೋ, ಅಂತಹವರಿಗೆ ಮಾತ್ರ ಸರಕಾರದಿಂದ ಪುನರ್ವಸತಿ ಕಲ್ಪಿಸುವ ತೀರ್ಮಾನವಾಗಿದ್ದು, ಬಾಡಿಗೆ ಮನೆಯಲ್ಲಿದ್ದವರಿಗೆ ಹಾಗೂ (ಮೊದಲ ಪುಟದಿಂದ) ಕೆ. ನಿಡುಗಣೆ, ಕರ್ಣಂಗೇರಿ, ಸಂಪಾಜೆ, ಗಾಳಿಬೀಡು, ಜಂಬೂರು ಮುಂತಾದೆಡೆಗಳಲ್ಲಿ ಸಂತ್ರಸ್ತ ಕುಟುಂಬಗಳಿಗಾಗಿ ನಿವೇಶನ ಗುರುತಿಸಿದ್ದು, ಆ ಜಾಗಗಳು ಮನೆಗಳಿಗೆ ಸೂಕ್ತವೆಂದು ಭಾರತೀಯ ಭೂಗರ್ಭಶಾಸ್ತ್ರ ಇಲಾಖೆ ಸಮ್ಮತಿಸಿದ ಮೇರೆಗೆ ಮನೆ ಕಟ್ಟಲು ತಯಾರಿ ನಡೆದಿದೆ ಎಂದು ಅಧಿಕಾರಿ ವಿವರಿಸಿದರು.

ಅಧ್ಯಯನ ಮುಂದುವರಿಕೆ : ಗ್ರಾಮೀಣ ಭಾಗದ ಮಾಂದಲಪಟ್ಟಿ ಸಹಿತ ಹಲವೆಡೆ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿರುವ ಕಾರಣ, ಎಲ್ಲೆಡೆ ವಿಶೇಷ ಶೋಧನೆ ನಡೆಯಲಿದ್ದು, ಕೊಡಗಿನ ಎಲ್ಲೆಲ್ಲಿ ವಸತಿಗೆ ಯೋಗ್ಯವಿಲ್ಲವೆಂದು ಮಾಹಿತಿ ಲಭಿಸುವದೋ, ಅಂತಹ ಗ್ರಾಮಸ್ಥರಿಗೆ ಪರ್ಯಾಯ ಪುನರ್ವಸತಿಗೆ ಕ್ರಮ ವಹಿಸಲಾಗುವದು ಎಂದು ಸ್ಪಷ್ಟಪಡಿಸಿದರು.

ಆತಂಕ ಬೇಡ : ಜಿಲ್ಲಾಡಳಿತದಿಂದ ಯಾರನ್ನೂ ಎಲ್ಲಿಯೂ ಬಲವಂತದಿಂದ ಒಕ್ಕಲೆಬ್ಬಿಸುವ ಉದ್ದೇಶವಿಲ್ಲವೆಂದು ಮಾರ್ನುಡಿದ ಅಧಿಕಾರಿ, ಆ ಬಗ್ಗೆ ಯಾರಿಗೂ ಆತಂಕ ಬೇಡವೆಂದರಲ್ಲದೆ, ಬೇರೆಯವರ ಮಾತಿಗೆ ತಲೆಕೆಡಿಸಿಕೊಳ್ಳ ಲಾಗುವದಿಲ್ಲವೆಂದು ಸೂಚ್ಯವಾಗಿ ನುಡಿದರು.

ಮುಟ್ಟುಗೋಲು ತಿಳಿದಿಲ್ಲ: ನೈಜ ಸಂತ್ರಸ್ತರಿಗೆ ಮನೆ ಅಥವಾ ನಿವೇಶನ ಒದಗಿಸಿದ ಮಾತ್ರಕ್ಕೆ ಅಂತಹವರ ಜಾಗವನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂಬ ಅಂಶ ತಿಳಿದಿಲ್ಲವೆಂದ ಅಧಿಕಾರಿ, ಸರಕಾರದ ಮಾರ್ಗಸೂಚಿಯಂತೆ, ಜನಾಭಿಪ್ರಾಯ ಪಡೆದು ಎಲ್ಲವನ್ನು ಪಾರದರ್ಶಕವಾಗಿ ಕ್ರಮ ವಹಿಸಲಾಗುವದು ಎಂದು ಭರವಸೆ ನೀಡಿದರು.