ಕೂಡಿಗೆ, ಅ. 11: ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂಡ್ಲೂರಿನ ಅಂಗನವಾಡಿ ಕೇಂದ್ರದಲ್ಲಿ ಆ ವ್ಯಾಪ್ತಿಯಲ್ಲಿನ ಗರ್ಭಿಣಿಯರ ಸೀಮಂತ ಕಾರ್ಯಕ್ರಮ ನಡೆಯಿತು.
ಆರೋಗ್ಯ ಕಾರ್ಯಕರ್ತೆ ಶಕೀಲಾ ಮಾತನಾಡಿ, ಗರ್ಭಿಣಿಯರಿಗೆ ಕಬ್ಬಿಣಾಂಶ ಹೇರಳವಾಗಿರುವ ಸೊಪ್ಪು, ಕಾಳು, ಬೆಲ್ಲ, ಆಹಾರದಲ್ಲಿ ಸೇವಿಸಿ, ರಕ್ತಹೀನತೆ ಆಗುವದನ್ನು ತಡೆಗಟ್ಟುವ ಮಾರ್ಗೋಪಾಯಗಳನ್ನು ಸೂಚಿಸಿದರು.
ಈ ಸಂದರ್ಭ ಗ್ರಾಮ ಪಂಚಾಯ್ತಿ ಸದಸ್ಯೆ ಪಾರ್ವತಮ್ಮ ಸೋಮಾಚಾರಿ, ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ ಈರಯ್ಯ, ಆಶಾ ಕಾರ್ಯಕರ್ತೆ ಪೂರ್ಣಿಮಾ ಇದ್ದರು.