ಗೋಣಿಕೊಪ್ಪಲು, ಅ. 11: ಗೋಣಿಕೊಪ್ಪಲು ರಾಷ್ಟ್ರೀಯ ಹೆದ್ದಾರಿ ಆಸು ಪಾಸು, ಬಡಾವಣೆ ರಸ್ತೆ, ಮಾರುಕಟ್ಟೆ ಪ್ರದೇಶ, ಕೀರೆಹೊಳೆ- ಕೈಕೇರಿ ತೋಡು, ಬೈಪಾಸ್ ರಸ್ತೆ ಒಳಗೊಂಡಂತೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕೊಳೆಯುವ ಪದಾರ್ಥ, ಇತರ ಕಸವನ್ನು ವಿಲೇವಾರಿ ಮಾಡಿದ್ದೇ ಆದಲ್ಲಿ ಇನ್ನು ಮುಂದೆ ಗ್ರಾಮ ಪಂಚಾಯಿತಿ ವತಿಯಿಂದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವದು. ಮೊದಲು ರೂ.200 ದಂಡ, ನಂತರ ರೂ.2000 ಹಾಗೂ ಮತ್ತೆಯೂ ನಿರ್ಲಕ್ಷ್ಯತನ ವಹಿಸಿದ್ದಲ್ಲಿ ಅಂತಹಾ ವರ್ತಕರ ವ್ಯಾಪಾರ ಪರವಾನಗಿಯನ್ನು ರದ್ಧುಗೊಳಿಸಿ ಕ್ರಮ ಜರುಗಿಸಲಾಗುವದು. ನಗರದ ಗೋಣಿಕೊಪ್ಪಲು, ಅ. 11: ಗೋಣಿಕೊಪ್ಪಲು ರಾಷ್ಟ್ರೀಯ ಹೆದ್ದಾರಿ ಆಸು ಪಾಸು, ಬಡಾವಣೆ ರಸ್ತೆ, ಮಾರುಕಟ್ಟೆ ಪ್ರದೇಶ, ಕೀರೆಹೊಳೆ- ಕೈಕೇರಿ ತೋಡು, ಬೈಪಾಸ್ ರಸ್ತೆ ಒಳಗೊಂಡಂತೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕೊಳೆಯುವ ಪದಾರ್ಥ, ಇತರ ಕಸವನ್ನು ವಿಲೇವಾರಿ ಮಾಡಿದ್ದೇ ಆದಲ್ಲಿ ಇನ್ನು ಮುಂದೆ ಗ್ರಾಮ ಪಂಚಾಯಿತಿ ವತಿಯಿಂದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವದು. ಮೊದಲು ರೂ.200 ದಂಡ, ನಂತರ ರೂ.2000 ಹಾಗೂ ಮತ್ತೆಯೂ ನಿರ್ಲಕ್ಷ್ಯತನ ವಹಿಸಿದ್ದಲ್ಲಿ ಅಂತಹಾ ವರ್ತಕರ ವ್ಯಾಪಾರ ಪರವಾನಗಿಯನ್ನು ರದ್ಧುಗೊಳಿಸಿ ಕ್ರಮ ಜರುಗಿಸಲಾಗುವದು. ನಗರದ ಯಾರದೇ ಅಂಗಡಿ ಮುಂಭಾಗ ಕಸ ಕಂಡಲ್ಲಿ ಅಂತಹಾ ವರ್ತಕರಿಗೆ ದಂಡ ವಿಧಿಸಲಾಗುವದು. ದಿನಕ್ಕೆ ಮೂರು ಬಾರಿ ಕಸ ಸಂಗ್ರಹ ವಾಹನ ಗಂಟೆ ಬಾರಿಸುತ್ತಾ ಬರುತ್ತಿದ್ದು, ವರ್ತಕರು, ಹೊಟೇಲ್ ಮಾಲೀಕರು, ಬಡಾವಣೆ ನಿವಾಸಿಗಳು ನೇರವಾಗಿ ಪೌರಕಾರ್ಮಿಕರ ವಾಹನಕ್ಕೆ ಕಸವನ್ನು ಹಾಕಿ ಸಹಕರಿಸಲು ಮನವಿ ಮಾಡಿದರು. ಪ್ಲಾಸ್ಟಿಕ್ ತ್ಯಾಜ್ಯ, ಕೊಳೆಯುವ ತ್ಯಾಜ್ಯ, ಕಾಗದ, ಗಾಜು ಇತ್ಯಾದಿ ತ್ಯಾಜ್ಯವಸ್ತುಗಳನ್ನು ವಿಂಗಡಿಸಿ ನೀಡುವಂತೆಯೂ, ರಸ್ತೆ ಬದಿಗೆ ಅಥವಾ ಚರಂಡಿಗೆ ಸುರಿಯುವಂತಿಲ್ಲ ಎಂದು ಹೇಳಿದರಲ್ಲದೆ ರೂ.5 ಸಾವಿರ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಪಡಿಸಲೂ ಕಾನೂನಿನಲ್ಲಿ ಯಾರದೇ ಅಂಗಡಿ ಮುಂಭಾಗ ಕಸ ಕಂಡಲ್ಲಿ ಅಂತಹಾ ವರ್ತಕರಿಗೆ ದಂಡ ವಿಧಿಸಲಾಗುವದು. ದಿನಕ್ಕೆ ಮೂರು ಬಾರಿ ಕಸ ಸಂಗ್ರಹ ವಾಹನ ಗಂಟೆ ಬಾರಿಸುತ್ತಾ ಬರುತ್ತಿದ್ದು, ವರ್ತಕರು, ಹೊಟೇಲ್ ಮಾಲೀಕರು, ಬಡಾವಣೆ ನಿವಾಸಿಗಳು ನೇರವಾಗಿ ಪೌರಕಾರ್ಮಿಕರ ವಾಹನಕ್ಕೆ ಕಸವನ್ನು ಹಾಕಿ ಸಹಕರಿಸಲು ಮನವಿ ಮಾಡಿದರು. ಪ್ಲಾಸ್ಟಿಕ್ ತ್ಯಾಜ್ಯ, ಕೊಳೆಯುವ ತ್ಯಾಜ್ಯ, ಕಾಗದ, ಗಾಜು ಇತ್ಯಾದಿ ತ್ಯಾಜ್ಯವಸ್ತುಗಳನ್ನು ವಿಂಗಡಿಸಿ ನೀಡುವಂತೆಯೂ, ರಸ್ತೆ ಬದಿಗೆ ಅಥವಾ ಚರಂಡಿಗೆ ಸುರಿಯುವಂತಿಲ್ಲ ಎಂದು ಹೇಳಿದರಲ್ಲದೆ ರೂ.5 ಸಾವಿರ ದಂಡ ಮತ್ತು ಜೈಲು ಶಿಕ್ಷೆಗೆ ಗುರಿಪಡಿಸಲೂ ಕಾನೂನಿನಲ್ಲಿ ಮಾಡಿದರು.

ಇದೇ ಸಂದರ್ಭ ಪೌರ ಕಾರ್ಮಿಕರು ಬೇಕರಿ ಇತ್ಯಾದಿ ಕಸ ತೆಗೆದುಕೊಳ್ಳಲು ಬಂದ ಸಂದರ್ಭ ಹಣದ ಆಮಿಷ ಒಡ್ಡಬೇಡಿ. 5-6 ಪೌರಕಾರ್ಮಿಕರ ವೇತನ, ವಿಂಗಡಣೆ, ಸಾಗಾಟ ಇತ್ಯಾದಿ ವೆಚ್ಚವನ್ನು ಸರಿದೂಗಿಸಲು ಇನ್ನು ಮುಂದೆ ನಗರದ ವರ್ತಕರಿಂದ ಮಾಸಿಕ ರೂ.50. ರೂ.100 ರಂತೆ ರಶೀತಿ ನೀಡಿ ಹಣ ಸ್ವೀಕರಿಸಲಾಗುತ್ತದೆ. ಎಲ್ಲರೂ ಸಹಕರಿಸಲು ಪಿಡಿಓ ಚಂದ್ರಮೌಳಿ ಸೂಚನೆ ನೀಡಿದರು.

ಪೌರಕಾರ್ಮಿಕರು ಕಸ ಸ್ವೀಕರಿಸಲು ನಿರಾಕರಿಸಿದರೆ ಗ್ರಾ.ಪಂ.ಗೆ ದೂರು ನೀಡಲು ಇದೇ ಸಂದರ್ಭ ಮಾಹಿತಿ ನೀಡಲಾಯಿತಲ್ಲದೆ, ವರ್ತಕರು ತಮ್ಮ ಅಂಗಡಿ ಮಳಿಗೆ ಮುಂಭಾಗ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಮನವಿ ಮಾಡಲಾಯಿತು.

ಗೋಣಿಕೊಪ್ಪಲು ವರ್ತಕರ ಸಂಘದ ಅಧ್ಯಕ್ಷ ಸುನಿಲ್ ಮಾದಪ್ಪ ಮಾತನಾಡಿ ಇತ್ತೀಚೆಗೆ ಗೋಣಿಕೊಪ್ಪಲು ವರ್ತಕರಲ್ಲಿಯೂ ಸಮರ್ಪಕ ಕಸ ವಿಲೇವಾರಿ ಬಗ್ಗೆ ಕರ್ತವ್ಯ ಪ್ರಜ್ಞೆ ಮೂಡಿದ್ದು, ನಗರದ ವಿದ್ಯುತ್ ಕಂಬದ ಬುಡ, ಇತ್ಯಾದಿ ಕಡೆ ಕಸ ಹಾಕುವದು ಕಡಿಮೆಯಾಗಿದೆ. ಪಂಚಾಯಿತಿ ನಿಯಮಕ್ಕೆ ಪೂರಕ ಸ್ಪಂದನ ನೀಡುವದಾಗಿ ಹೇಳಿದರು.

ಗೋಣಿಕೊಪ್ಪಲು ರುದ್ರಭೂಮಿ ಬಳಿ, ಕಾವೇರಿ ಕಾಲೇಜು ಮುಂಭಾಗ, ತೋಡು ಹಾಗೂ ಬೈಪಾಸ್ ರಸ್ತೆಯಲ್ಲಿ ಕಸ ಹಾಕುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವದು. ಕಸಕ್ಕೆ ಬೆಂಕಿ ಹಾಕಿ ಪರಿಸರ ಮಾಲಿನ್ಯವನ್ನೂ ಮಾಡುವಂತಿಲ್ಲ ಎಂದು ವರ್ತಕರಿಗೆ ಮಾಹಿತಿ ನೀಡಲಾಯಿತು.

ವರ್ತಕ ಜಯೇಂದ್ರನ್ ಮಾತನಾಡಿ ಹರಿಶ್ಚಂದ್ರಪುರ ಮದ್ರಸಾವೊಂದರಲ್ಲಿ ಮದುವೆ ಇತ್ಯಾದಿ ಕಾರ್ಯಕ್ರಮ ಮುಗಿದ ನಂತರ ತ್ಯಾಜ್ಯವನ್ನು ಅಲ್ಲೇ ಸಮೀಪವಿರುವ ತಮ್ಮ ಕಾಫಿ ತೋಟಕ್ಕೆ ತಂದು ಸುರಿಯಲಾಗುತ್ತಿದೆ, ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಿದರು.

ಸಭೆಯಲ್ಲಿ ಉದ್ಯಮಿ ಪೆÇನ್ನಿಮಾಡ ಸುರೇ&divlusmn;,ಇತರರು ಮಾತನಾಡಿದರು.

ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ಧ್ಯಾನ್ ಸುಬ್ಬಯ್ಯ, ರತಿ ಅಚ್ಚಪ್ಪ, ಕುಲ್ಲಚಂಡ ಗಣಪತಿ, ರಾಮಕೃಷ್ಣ, ಪ್ರಭಾವತಿ, ಮಂಜುಳಾ, ರಾಜಶೇಖರ್, ಯಾಸ್ಮೀನ್, ಸಾಹಿನಾ, ಸುಲೇಖಾ, ಮುರುಘ ಮುಂತಾದವರು ಉಪಸ್ಥಿತರಿದ್ದರು. ಗ್ರಾ.ಪಂ.ನೌಕರ ನವೀನ್ ಸ್ವಾಗತಿಸಿ, ವಂದಿಸಿದರು.