ಮಡಿಕೇರಿ, ಅ. 11: ಮೈಸೂರು - ಮಡಿಕೇರಿ ನಡುವೆ ಭವಿಷ್ಯದಲ್ಲಿ ರೂಪಿಸಲಾಗಿರುವ ಚತುಷ್ಪಥ ಹೆದ್ದಾರಿಯ ಯೋಜನೆಗೆ ಅಂದಾಜು ರೂಪಿಸಲಾಗಿರುವ ಚತುಷ್ಪಥ ಹೆದ್ದಾರಿಯ ಯೋಜನೆಗೆ ಅಂದಾಜು ಕ್ರಮಗಳೊಂದಿಗೆ, ಕೊಡಗಿನ ಪರಿಸರ ಮತ್ತು ಭೌಗೋಳಿಕ ಹಿನ್ನೆಲೆಯನ್ನು ಕೂಡ ಗಮನದಲ್ಲಿ ಇರಿಸಿಕೊಂಡು ಅತ್ಯಂತ ಗುಣಮಟ್ಟದ ಕೆಲಸವನ್ನು ಕೈಗೊಳ್ಳಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯ ಯೋಜನಾ ನಿರ್ದೇಶಕ ಬಿ.ಟಿ. ಶ್ರೀಧರ್ ಸ್ಪಷ್ಟಪಡಿಸಿದ್ದಾರೆ.

ಹೆದ್ದಾರಿ ಚತುಷ್ಪಥ ಯೋಜನೆಯ ಅನುಷ್ಠಾನ ಕುರಿತು ‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಷ್ಟ್ರದ ಬೇರೆ ಬೇರೆ ರಾಜ್ಯಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟವನ್ನು ಕೊಡಗಿನ ಬಹುಮಂದಿ ಸ್ವತಃ ಓಡಾಡುವದ ರೊಂದಿಗೆ ತಿಳಿದವರಿದ್ದಾರೆ ಎಂದು ಬೊಟ್ಟು ಮಾಡಿದರು. ಮಾತ್ರವಲ್ಲದೆ ಇದುವರೆಗೆ ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯದ ಯಾವದೇ ರಸ್ತೆ ನಿರ್ಮಾಣಕ್ಕೆ ಈ ಜಿಲ್ಲೆಯಲ್ಲಿ ಅವಕಾಶವಾಗಿಲ್ಲವೆಂದು ಅವರು ನೆನಪಿಸಿದರು. ಮೈಸೂರು - ಮಡಿಕೇರಿ ನಡುವಿನ ಚತುಷ್ಪಥ ಮಾರ್ಗವನ್ನು ಕೇಂದ್ರದಿಂದ ಪ್ರಥಮವಾಗಿ ಅನುಷ್ಠಾನಗೊಳಿಸುವ ಪ್ರಯತ್ನ ಇದಾಗಿದೆ ಎಂದು ನೆನಪಿಸಿದ ಶ್ರೀಧರ್, ಈಗಷ್ಟೇ ಒಂದು ಮಹತ್ತರ ಯೋಜನೆಯ ಅನುಷ್ಠಾನಕ್ಕೆ ಕಾಲ ಕೂಡಿ ಬರುತ್ತಿದೆ ಎಂದು ವ್ಯಾಖ್ಯಾನಿಸಿದರು.ಪ್ರಸಕ್ತ ಸಭೆಯಲ್ಲಿ ಜನತೆ ನೀಡಿರುವ ಅಭಿಪ್ರಾಯವನ್ನು ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯ ಪರಿಗಣನೆಗೆ ತೆಗೆದುಕೊಂಡು ಸಾಕಷ್ಟು ಕಾಲಮಿತಿಯೊಂದಿಗೆ, ಯೋಜನೆಯ ಜಾರಿಗೆ ಒತ್ತು ನೀಡಲಿದ್ದು, ತರಾತುರಿಯಲ್ಲಿ ಯಾವದೇ ಕೆಲಸ ಕೈಗೊಳ್ಳುವದಿಲ್ಲವೆಂದು ಸ್ಪಷ್ಟಪಡಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೂಪಿಸಿರುವ ನಕಾಶೆಯಂತೆ, ಮೈಸೂರಿನಿಂದ ಮಂಗಳೂರಿನ ಮಾಣಿ ತನಕ ಯೋಜನೆಯ ಅನುಷ್ಠಾನಕ್ಕೆ ಸಮೀಕ್ಷೆಗೆ ಉದ್ದೇಶಿಸಿದ್ದರೂ, ಕೇವಲ ಮೈಸೂರು - ಮಡಿಕೇರಿಯ ನಡುವೆ ಆದ್ಯತೆ ಮೇರೆಗೆ ಈ ಕೆಲಸಕ್ಕೆ ಪ್ರಥಮ ಪ್ರ್ರಾಶಸ್ತ್ಯದಲ್ಲಿ ಮುಂದಾಗಲಿರುವದಾಗಿ ಮಾಹಿತಿ ನೀಡಿದರು.

ರಾಷ್ಟ್ರೀಯ ಯೋಜನೆಯ ಹೆದ್ದಾರಿಗೆ ಕೊಡಗು ಜಿಲ್ಲೆಯ ಜನತೆ ಒಮ್ಮೆ ಅವಕಾಶ ಮಾಡಿಕೊಟ್ಟು, ಆ ಬಳಿಕ ಅಭಿಪ್ರಾಯ

(ಮೊದಲ ಪುಟದಿಂದ) ನೀಡಿದರೆ ಸೂಕ್ತವೆಂದ ಅವರು, ಕೇಂದ್ರದ ಯೋಜನೆಗಳು ಸಾಕಷ್ಟು ಗುಣಮಟ್ಟದೊಂದಿಗೆ ಜನಹಿತಕಾರಿ ಯಾಗಿರಲಿದೆ ಎಂದು ಸಮಜಾಯಿಷಿಕೆ ನೀಡಿದರು. ಕೇಂದ್ರ ಸರಕಾರದ ಯೋಜನೆ ಇದಾಗಿದ್ದು, ಮಹತ್ವ ಪೂರ್ಣ ಪಡೆಯಲಿದೆ ಎಂದ ಅಧಿಕಾರಿ, ಚತುಷ್ಪಥ ರಸ್ತೆ ನಿರ್ಮಾಣಗೊಂಡ ಬಳಿಕವಷ್ಟೇ, ಕೊಡಗಿನಂತಹ ಕ್ಲಿಷ್ಟ ಹಾದಿಯಲ್ಲಿನ ಸಂಚಾರದ ಸುರಕ್ಷಿತ ಕ್ರಮಗಳ ಅರಿವು ಜನಸಾಮಾನ್ಯರಿಗೆ ಮನವರಿಕೆ ಯೊಂದಿಗೆ ಅದರ ಪ್ರಯೋಜನ ತಿಳಿಯಲಿದೆ ಎಂದು ಅಭಿಪ್ರಾಯ ಪಟ್ಟರು.

ಬೆಂಗಳೂರು - ಮೈಸೂರು - ಮಡಿಕೇರಿ ನಡುವೆ ಅನೇಕ ಕೊಡಗಿನ ಮಂದಿ ಸಂಚರಿಸುತ್ತಿದ್ದು, ಈಗಿನ ಕಿರಿದಾದ ರಸ್ತೆಗಳ ಬವಣೆಯಿಂದ ಮುಕ್ತಿಯೊಂದಿಗೆ ಎಲ್ಲಾ ತುರ್ತು ಸಂದರ್ಭಗಳಲ್ಲಿ ಸಮಯ, ಇಂಧನ, ಜೀವಸುರಕ್ಷತೆಯ ಅರಿವು ಗೋಚರಿಸಲಿದೆ ಎಂದು ಆಶಯ ವ್ಯಕ್ತಪಡಿಸಿದರು. ಭವಿಷ್ಯದ ಆರು ತಿಂಗಳಿನಲ್ಲಿ ಚತುಷ್ಪಥ ಯೋಜನೆ ಅನುಷ್ಠಾನಗೊಳ್ಳಲು ರೂಪುರೇಷೆ ಸಾಧ್ಯವಾದೀತು ಎಂದು ಅವರು ‘ಶಕ್ತಿ’ ಕಾಲಮಿತಿ ಪ್ರಶ್ನೆಗೆ ಉತ್ತರಿಸಿದರು. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯದ ಕೆಲಸ ತರಾತುರಿಯಿಂದ ನಡೆಯುವ ದಲ್ಲವೆಂದು ಪುನರುಚ್ಚರಿಸಿದರು.

ಸೀಮಿತ ಜಾಗ ಕೊಡಗಿಗೆ

ಮೈಸೂರು - ಕೊಡಗಿನ ಗಡಿ ಕುಶಾಲನಗರ ತನಕ 70 ಮೀಟರ್ ವ್ಯಾಪ್ತಿಯಲ್ಲಿ ಯೋಜನೆ ರೂಪು ಗೊಂಡರೆ, ಕೊಡಗಿನ ಪರಿಸರಕ್ಕೆ ಅನುಗುಣವಾಗಿ ಈ ಚತುಷ್ಪಥ ಮಾರ್ಗವನ್ನು ಕೇವಲ 45 ಮೀಟರ್‍ದೊಂದಿಗೆ ರಸ್ತೆ ಮಧ್ಯ ಭಾಗದಿಂದ ಇಕ್ಕಡೆಗಳಲ್ಲಿ ಸರಾಸರಿ 22.5 ಮೀಟರ್‍ಗೆ ಸೀಮಿತ ಗೊಳಿಸುವದಾಗಿ ಸ್ಪಷ್ಟಪಡಿಸಿದರು.