ಸುಂಟಿಕೊಪ್ಪ, ಅ.11 : ಅರಣ್ಯ ಇಲಾಖೆ ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆ ಇಕೋಕ್ಲಬ್ ಆಶ್ರಯದಲ್ಲಿ ವಿಶ್ವ ವನ್ಯಜೀವಿ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಯಿತು.

ವನ್ಯಜೀವಿ ಸಂರಕ್ಷಣೆ ಕುರಿತ ಪ್ರತಿಜ್ಞಾ ವಿಧಿ ಭೋಧಿಸಿದ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿ.ಟಿ.ಸೋಮಶೇಖರ್ ಪ್ರತಿಯೊಬ್ಬರು ವನ್ಯಜೀವಿ ಸಂರಕ್ಷಣೆಗೆ ಹೆಚ್ಚಿನ ಗಮನ ಹರಿಸಬೇಕೆಂದರು.

ಇಕೋಕ್ಲಬ್ ಸಂಚಾಲಕ ಶಿಕ್ಷಕ ಟಿ.ಜಿ.ಪ್ರೇಮ್‍ಕುಮಾರ್ ವನ್ಯ ಜೀವಿ ಸಂರಕ್ಷಣೆ ಕುರಿತು ಮಾತನಾಡಿ ಅರಣ್ಯಗಳು ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಹೆಚ್ಚಿನ ಆಧ್ಯತೆ ನೀಡಬೇಕು. ವನ್ಯಜೀವಿಗಳು ಅರಣ್ಯ ಆಭರಣವಿದ್ದಂತೆ, ಅರಣ್ಯಗಳು ಪರಿಸರಕ್ಕೆ ಆಮ್ಲಜನಕದ ಕಣಜಗಳು ಇದ್ದಂತೆ ಎಂದು ಬಣ್ಣಿಸಿದರು.

ಕಾಡಿನಲ್ಲಿ ವನ್ಯಜೀವಿಗಳ ಸಂತತಿ ಕ್ಷೀಣಿಸಿದರೆ ಪರಿಸರ ಅಸಮತೋಲನ ಉಂಟಾಗಿ ಜೀವಕುಲಗಳು ಅವನತಿಗೆ ಕಾರಣವಾಗುತ್ತದೆ ನಾವು ವನ್ಯಜೀವಿಗಳ ಉಳಿವಿಗೆ ಸಂಪೂರ್ಣ ಪ್ರಯತ್ನ ಮಾಡಬೇಕಿದೆ ಎಂದರು.

ಶಾಲಾ ಮುಖ್ಯೋಪಾದ್ಯಾಯ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಸಂಘದ ಸಂಚಾಲಕ ಶಿಕ್ಷಕಿ ಎಂ.ಎನ್.ಲತಾ, ಶಿಕ್ಷಕರಾದ ಎಸ್.ಆರ್.ಚಿತ್ರಾ,ಕೆ.ಕೆ.ಪುಷ್ಪಾ,ಟಿ.ಪವಿತ್ರ ಇದ್ದರು. ನಂತರ ನಡೆದ ಪ್ರದರ್ಶನ ದಲ್ಲಿ ವಿದ್ಯಾರ್ಥಿಗಳು ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಿದರು.