ಮಡಿಕೇರಿ, ಅ. 11: ಕೊಡಗು ಬಲಿಜ ಸಮಾಜ ನೇತೃತ್ವದಲ್ಲಿ ಹೆಬ್ಬಾಲೆಯಲ್ಲಿ ಶಿರಂಗಾಲ ಮತ್ತು ಸೋಮವಾರಪೇಟೆ ತಾಲೂಕಿನ ಬಡ ಬಲಿಜ ಸಮುದಾಯಕ್ಕೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ನೆರವೇರಿತು. ಕರ್ನಾಟಕ ರಾಜ್ಯ ಬಲಿಜ ಸಂಘ ಹಾಗೂ ಕೊಡಗು ಬಲಿಜ ಸಮಾಜ ಆಶ್ರಯದಲ್ಲಿ ಬೆಂಗಳೂರಿನ ನ್ಯೂ ಬಾಲ್ಡ್ವಿನ್ ಶಾಲಾ ಸಂಸ್ಥಾಪಕ ಡಾ.ಟಿ.ವೇಣುಗೋಪಾಲ್ ಪ್ರಾಯೋಜನೆಯ ಸುಮಾರು 200 ಆಹಾರ ಸಾಮಗ್ರಿ ಕಿಟ್ ಅರ್ಹ ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮ ಅರ್ಥಪೂರ್ಣವಾಗಿ ಮುಕ್ತಾಯಗೊಂಡಿತು.
ಶಿರಂಗಾಲ, ಗೌಡಳ್ಳಿಯ ಕೆಲವು ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ, ಉಚಿತ ವಿದ್ಯಾಭ್ಯಾಸ ಹಾಗೂ ವಿದ್ಯಾರ್ಥಿ ವೇತನ ನೀಡುವ ಬಗ್ಗೆ ಕೊಡಗು ಬಲಿಜ ಸಮಾಜದ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಮಾಹಿತಿ ನೀಡಿದರು.
ಶಿರಂಗಾಲದ 18 ಕುಟುಂಬಗಳ ಪರವಾಗಿ ಅಲ್ಲಿನ ಕಮಲಮ್ಮ ನೇತೃತ್ವದಲ್ಲಿ ಆಹಾರ ಕಿಟ್ ವಿತರಣೆ ಮಾಡಲಾಯಿತು. ಸೋಮವಾರಪೇಟೆಯ ಪ್ರಕಾಶ್, ಕೊಡಗು ಬಲಿಜ ಸಮಾಜ ನಿರ್ದೇಶಕಿ ಪದ್ಮಾ, ಕ್ರೀಡೋತ್ಸವ ಸಮಿತಿ ಜಿಲ್ಲಾ ಸಂಚಾಲಕ ಮದನ್ಕುಮಾರ್ ಉಪಸ್ಥಿತರಿದ್ದರು.