ಮಡಿಕೇರಿ, ಅ. 13: ಮಡಿಕೇರಿ ಮತ್ತು ಸೋಮವಾರಪೇಟೆಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕೆಲವು ಕುಟುಂಬಗಳಿಗೆ ಬೆಂಗಳೂರಿನ ಕೆ.ಪಿ. ರೋಡ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಅಸೋಸಿಯೇಷನ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ಬೆಂಗಳೂರಿನ ಕೆ.ಪಿ. ರೋಡ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಅಸೋಸಿಯೇಷನ್ ವತಿಯಿಂದ ಎಂ. ಚಂದ್ರಶೇಖರ್ ಮುಂದಾಳತ್ವದಲ್ಲಿ ನಿರಾಶ್ರಿತರಿಗೆ ರೂ. 1 ಲಕ್ಷ ಪೈಕಿ ತಲಾ 10 ಸಾವಿರದಂತೆ ವಿತರಿಸಲಾಯಿತು. ಉದಯಗಿರಿಯ ಬಿ.ಕೆ. ಚಂದ್ರಶೇಖರ್, ರೀನಾ ಬಿ.ಆರ್, ಪರಿಶಿತ್, ಮಕ್ಕಂದೂರಿನ ಬಿ.ಕೆ. ಶಿವಪ್ಪ, ಬಿ.ಎ. ಕೃಷ್ಣಪ್ಪ, ಎರಡನೇ ಮೊಣ್ಣಂಗೇರಿಯ ಕುಮುದಾಕ್ಷಿ, ಬಿ.ಪಿ. ಸೀನ, ವಿಠಲ, ಚಂದ್ರಶೇಖರ್, ಪುಟ್ಟನಾಯಕ್ ಇವರಿಗೆ ಆರ್ಥಿಕ ನೆರವು ನೀಡಲಾಯಿತು. ಮುಂದಿನ ತಿಂಗಳುಗಳಲ್ಲಿಯೂ ಸಂಘದಿಂದ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಚಂದ್ರಶೇಖರ್ ತಿಳಿಸಿದರು.

ಈ ಸಂದರ್ಭ ರಾಜ್ಯ ಔಷಧ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ಜೀವನ್ ಕುಶಾಲಪ್ಪ, ಚೇತನ್, ಧನಂಜಯ್, ಬೆಂಗಳೂರಿನ ಕೆ.ಪಿ. ರೋಡ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಅಸೋಸಿಯೇಷನ್‍ನ ಪ್ರಮುಖರಾದ ಗಣೇಶ್, ಗುರುರಾಜ್, ರಾಜಣ್ಣ, ಸುಬ್ರಮಣಿ ಹಾಜರಿದ್ದರು.