ಸಿದ್ದಾಪುರ, ಅ. 13: ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ಕಲ್ಪಿಸಿರುವದನ್ನು ಕೇರಳ ರಾಜ್ಯವು ಪುನರ್ ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿ ಪಾಲಿಬೆಟ್ಟದಲ್ಲಿ 14 ರಂದು ಶ್ರೀ ಅಯ್ಯಪ್ಪ ಭಕ್ತವೃಂದದಿಂದ ಪ್ರತಿಭಟನೆ ನಡೆಸಲಾಗುವದೆಂದು ಪಾಲಿಬೆಟ್ಟ ಹಾಗೂ ಚೆನ್ನಯ್ಯನಕೋಟೆಯ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಕುರಿತು ಮಾತನಾಡಿದ ಸಮಿತಿಯ ಮುಖ್ಯಸ್ಥರಾದ ಟಿ.ಡಿ. ವಿಜೇಶ್ ಹಾಗೂ ಇಂದಿರಾ ಮುರುಗನ್ ಮಾತನಾಡಿ, ಇತ್ತೀಚೆಗೆ ಸುಪ್ರೀಂಕೋರ್ಟ್ ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ಮಾಡುವಂತೆ ತೀರ್ಪು ನೀಡಿದ್ದು, ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ಪುನರ್‍ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿ ತಾ.14 ರಂದು (ಇಂದು) ಪಾಲಿಬೆಟ್ಟದಲ್ಲಿ ಬೆಳಿಗ್ಗೆ 10.30 ಗಂಟೆಗೆ ಶಬರಿಮಲೆ ಉಳಿಸಿ ನಾಮಜಪ ಯಾತ್ರೆಯೊಂದಿಗೆ ಪ್ರತಿಭಟನೆ ಮೆರವಣಿಗೆ ನಡೆಸಲಾಗು ವದು ಎಂದರು. ಪಾಲಿಬೆಟ್ಟದ ಗಣಪತಿ ದೇವಾಲಯ ಸಮೀಪದಿಂದ ನೂರಾರು ಮಂದಿ ಪಾಲ್ಗೊಂಡು ಬರೀ ಕಾಲಿನಲ್ಲಿ ಭಜನೆ ಮಾಡುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗು ವದು. ನಂತರ ಪಟ್ಟಣದ ಬಸ್ ನಿಲ್ದಾಣದÀಲ್ಲಿ ಪ್ರತಿಭಟನೆಯ ಸಭೆಯನ್ನು ಏರ್ಪಡಿ ಸಲಾಗಿದೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಮಹಿಳೆ ಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿ ಯಲ್ಲಿ ಸಮಿತಿಯ ಪದಾಧಿಕಾರಿಗಳಾದ ರತೀಶ್, ಕೆ.ಟಿ. ಆನಂದ, ಪವಿತ್ರ ಸ್ಟಾಂಡಲಿ ಹಾಜರಿದ್ದರು.