*ಗೋಣಿಕೊಪ್ಪ, ಅ. 12: ಶ್ರೀ ಕಾವೇರಿ ದಸರಾ ಸಮಿತಿ ಅಚರಿಸಿಕೊಂಡು ಬರುತ್ತಿರುವ 40 ನೇ ವರ್ಷದ ದಸರ ಜನೋತ್ಸವ ಈ ಬಾರಿ ಸರಳ ಕಾರ್ಯಕ್ರಮವಾಗಿದೆ. ಉತ್ತರ ಕೊಡಗಿನಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಕೊಡಗಿನಲ್ಲಿ ಸೂತಕದ ಛಾಯೆ ಆವರಿಸಿರುವಾಗ ಅದ್ಧೂರಿ ದಸರಾ ಆಚರಣೆಗೆ ಮುಂದಾಗುವದಿಲ್ಲ ಎಂದು ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಹೇಳಿದ್ದಾರೆ.
ಪಂಚಾಯಿತಿ ಕಚೇರಿ ಆವರಣ ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಕ್ಕಳ ದಸರಾ, ಮಹಿಳಾ ದಸರಾ, ಯುವ ದಸರಾ, ನಡೆಯಲಿದೆ. ವಿಜಯದಶಮಿಯಂದು ಮಂಟಪ ಸಮಿತಿಗಳಿಂದ ಶೋಭಾ ಯಾತ್ರೆ ನಡೆಯಲ್ಲಿದ್ದು ದೇವಿ ವಿಸರ್ಜನೆಗೊಳ್ಳಲಿದೆ ಎಂದರು.
ಕಾರ್ಯಕ್ರಮ : 14 ರಂದು ಚೆಸ್ ಪಂದ್ಯಾಟ ಬೆಳಿಗ್ಗೆ 10 ಗಂಟೆಯಿಂದ 1 ರಿಂದ 7 ಹಾಗೂ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಚೆಸ್ ಪಂದ್ಯಾಟ ನಡೆಯಲಿದೆ ಮಕ್ಕಳ ದಸರಾ : 15 ರಂದು ಮಕ್ಕಳ ದಸರಾ ಆಚರಣೆ ಮೂಲಕ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಕ್ಕಳ ಸಂತೆ, 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಜನಪದ ಗೀತೆ, ಚಿತ್ರಕಲಾ ವೈಯಕ್ತಿಕ ಸ್ಪರ್ಧೆ, ಪೌರಾಣಿಕ ಹಿನ್ನೆಲೆಯ ಛದ್ಮವೇಷ, ಪಾಶ್ಚಿಮಾತ್ಯ ಸಾಮೂಹಿಕ ನೃತ್ಯ, ಸುಳ್ಯದ ಕಿರುತೆರೆ ಕಲಾವಿದರಿಂದ ಮಿಮಿಕ್ರಿ, ಶ್ಯಾಡೋ ಶೋ ನಡೆಯಲಿದೆ.
ಮಹಿಳಾ ದಸರಾ : 16 ರಂದು ಬೆಳಿಗ್ಗೆ 10.30 ಕ್ಕೆ ಸ್ವತಂತ್ರ್ಯ ಹೋರಾಟಗಾರರ ಭವನದಲ್ಲಿ ಕವಿಗೋಷ್ಠಿ, ಸಂಜೆ 6 ಗಂಟೆಗೆ ಮಹಿಳಾ ದಸರಾ ನಡೆಯಲಿದ್ದು, ನೃತ್ಯ ಸ್ಪರ್ಧೆ, ಜಾನಪದ ಗೀತೆ, ಮಿಸಸ್ ಗೋಣಿಕೊಪ್ಪ, ಛದ್ಮವೇಷ, ಸೀರೆಯ ನಿಖರ ಬೆಲೆ, ಪಿಕ್ ಅಯಿಂಡ್ ಆಕ್ಟ್ ಕೊಡಗಿನ ಪ್ರಕೃತಿ ಸಂಪತ್ತು ಉಳಿಸಿ ಪೋಷಿಸಲು ಪರಿಸರ ರಕ್ಷಣೆಯಲ್ಲಿ ನಮ್ಮ ಪಾತ್ರ್ರ ವಿಷಯದಲ್ಲಿ ಚರ್ಚೆಗಳು ನಡೆಯಲಿದೆ.
17 ರಂದು ಸೈಕ್ಲೋನ್ ನೃತ್ಯ ಶಾಲೆಯ ರಮೇಶ್ ನೇತೃತ್ವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಜಗನ್ಮೋಹನ ನಾಟ್ಯಾಲಯ ತಂಡದಿಂದ ಭರತನಾಟ್ಯ ನಡೆಯಲಿದೆ.
ಯುವ ದಸರಾ : 18 ರಂದು ಜೆ.ಕೆ. ಸೋಮಣ್ಣ ಹಾಗೂ ತಂಡದ ನೇತೃತ್ವದಲ್ಲಿ ಯುವ ದಸರಾ ಕಾರ್ಯಕ್ರಮದಡಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ವಿಜಯದಶಮಿಯಂದು ಸಂಗೀತ ರಸಮಂಜರಿ ಸಂಜೆಯೊಂದಿಗೆ ದಶಮಂಟಪಗಳ ಶೋಭಾ ಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು ಗೋಷ್ಠಿಯಲ್ಲಿ ಕಾರ್ಯಧ್ಯಕ್ಷ ಬಿ.ಎನ್. ಪ್ರಕಾಶ್, ಕೋಶಾಧ್ಯಕ್ಷ ಧ್ಯಾನ್ ಸುಬ್ಬಯ್ಯ, ಮಹಿಳಾ ದಸರಾ ಅಧ್ಯಕ್ಷೆ ಮಂಜುಳಾ ಉಪಸ್ಥಿತರಿದ್ದರು.