ಶನಿವಾರಸಂತೆ, ಅ. 12: ಸಕಲೇಶಪುರದತ್ತ ಅಕ್ರಮವಾಗಿ ಉಚ್ಚಂಗಿಯಿಂದ ಎರಡು ಎತ್ತು ಹಾಗೂ ಒಂದು ಕರುವನ್ನು ಸಾಗಿಸುತ್ತಿದ್ದ ವೇಳೆ ಇಲ್ಲಿನ ಪೊಲೀಸ್ ಠಾಣಾಧಿಕಾರಿ ಮರಿಸ್ವಾಮಿ ಹಾಗೂ ಸಿಬ್ಬಂದಿ ಪತ್ತೆ ಹಚ್ಚಿ ಕ್ರಮ ಕೈಗೊಂಡಿದ್ದಾರೆ.

ಆರೋಪಿ ಅಲ್‍ಮೋಸ್ಕಾನ್ ಎಂಬಾತ ವಾಹನದಲ್ಲಿ (ಕೆ.ಎ. 35- ಬಿ. 3635) ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಜಾನುವಾರುಗಳ ಸಾಗಾಟದಲ್ಲಿದ್ದಾಗ ಗಸ್ತು ತಿರುಗುತ್ತಿದ್ದ ಠಾಣಾಧಿಕಾರಿ ಹಾಗೂ ಸಿಬ್ಬಂದಿ ರಘು ಮತ್ತು ಹರೀಶ್ ಕಾನೂನು ಕ್ರಮದೊಂದಿಗೆ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಾನುವಾರುಗಳನ್ನು ಮೈಸೂರು ಗೋ ಶಾಲೆಗೆ ಕಳುಹಿಸಲಾಗಿದೆ. - ನರೇಶ್