ಗೋಣಿಕೊಪ್ಪ, ಅ. 13: ಶ್ರೀ ಕಾವೇರಿ ದಸರಾ ಸಮಿತಿ ಆಚರಿಸಿಕೊಂಡು ಬರುತ್ತಿರುವ 40ನೇ ವರ್ಷದ ದಸರಾ ಆಚರಣೆ ಹಿನ್ನೆಲೆ ತಾ. 18 ರಂದು ಯುವ ದಸರಾ ಕಾರ್ಯಕ್ರಮ ನಡೆಯಲಿದೆ ಎಂದು ಯುವ ದಸರಾ ಸಮಿತಿ ಅಧ್ಯಕ್ಷ ಜೆ.ಕೆ. ಸೋಮಣ್ಣ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ತಂಡ ಭಾಗವಹಿಸಲಿದೆ. ಅಂದು ಸಂಜೆ 6 ರಿಂದ ರಾತ್ರಿ 12ರವರೆಗೆ ಬಸ್ ನಿಲ್ದಾಣದ ವೇದಿಕೆಯಲ್ಲಿ ತಾಲೂಕಿನ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ವಿವಿದ ನೃತ್ಯಗಳನ್ನು ಮಾಡುವ ಮೂಲಕ ಯುವ ದಸರಾಗೆ ಮೆರುಗು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಸ್ಪಧೆರ್Éಯಲ್ಲಿ ಭಾಗವಹಿಸುವ ತಂಡಗಳಿಗೆ ಬಹುಮಾನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ 9482718687, 7022136384, 7760803783 ಸಂಪರ್ಕಿಸ ಬಹುದಾಗಿದೆ ಎಂದರು. ಗೋಷ್ಠಿಯಲ್ಲಿ ಯುವ ದಸರಾ ಸಮಿತಿ ಉಪಾಧ್ಯಕ್ಷ ಮುರುಗ, ಕಾರ್ಯದರ್ಶಿ ರಮೇಶ್ ಸೈಕ್ಲೋನ್ ಉಪಸ್ಥಿತರಿದ್ದರು.