ಮಡಿಕೇರಿ, ಅ. 12: ಕೋಟೆ ಮಹಾಗಣಪತಿ ದಸರಾ ಸಮಿತಿ ವತಿಯಿಂದ ಇಂದು ದೇವಾಲಯ ಆವರಣದಲ್ಲಿ ಗಣಪತಿ ಹೋಮ ಹಾಗೂ ಅನ್ನದಾನ ಕಾರ್ಯಕ್ರಮ ಇಟ್ಟುಕೊಂಡಿದ್ದರು.
ಭಕ್ತರು ತಂದಿದ್ದ ತೆಂಗಿನಕಾಯಿಯನ್ನು ಸ್ವಯಂ ಸೇವಕ ಪಿ.ಜಿ. ಸುಕುಮಾರ್ ಒಡೆದಾಗ ಅಚ್ಚರಿಯ ಬೆಳವಣಿಗೆ ಕಂಡರು. ಒಡೆದ ತೆಂಗಿನ ಹೋಳಿನೊಳಗೆ ಕುಳಿತ ಭಂಗಿಯಲ್ಲಿ ಗಣಪ ಇರುವ ಬೆಳವಣಿಗೆಯನ್ನು ಸುತ್ತಲಿನ ಭಕ್ತರಿಗೆ ತೋರಿಸಿದರು. ಅದನ್ನು ಗರ್ಭಗುಡಿಯಲ್ಲಿಟ್ಟು ಪೂಜಿಸಲಾಯಿತು.