ಮಡಿಕೇರಿ, ಅ. 12: ಶಬರಿಮಲೆ ಪುಣ್ಯ ಕ್ಷೇತ್ರದಲ್ಲಿ ಅನಾಧಿಕಾಲ ದಿಂದಲೂ ನಡೆದು ಬಂದ ಧಾರ್ಮಿಕ ಪದ್ಧತಿಯು ಇನ್ನು ಮುಂದೆಯೂ ಅದೇ ರೀತಿ ನಡೆಯ ಬೇಕೆಂದು ಬಹಳಷ್ಟು ಸಾರ್ವಜನಿಕರ ಒಮ್ಮತದ ಅಭಿಪ್ರಾಯ ವಾಗಿರುವ ದರಿಂದ ಈ ಸಂಬಂಧ ಜನಾಭಿಪ್ರಾಯವನ್ನು ಪರಿಗಣಿಸಲು ಒತ್ತಾಯಿಸಿ ತಾ. 14ರಂದು (ನಾಳೆ) ಗೋಣಿಕೊಪ್ಪದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ರ್ಯಾಲಿಯಲ್ಲಿ ಎಲ್ಲಾ ಸಾರ್ವಜನಿಕರು ಭಾಗ ವಹಿಸುವಂತೆ ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಚೀಯಕಪೂವಂಡ ಬೋಪಣ್ಣ ಮತ್ತು ಸದಸ್ಯ ಬಾನಂಡ ಪ್ರಥ್ಯು ತಿಳಿಸಿದ್ದಾರೆ.