ಮಡಿಕೇರಿ, ಅ.13: ಕೊಡಗು ಪತ್ರಿಕಾ ಭವನದ 17ನೇ ವಾರ್ಷಿಕೋತ್ಸವವು ನಗರದ ಪತ್ರಿಕಾ ಭವನದಲ್ಲಿ ತಾ. 15 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮವನ್ನು ಬೆಂಗಳೂರು ಕೆ.ಪಿ.ಸಿಎಲ್ ಮಾಜಿ ನಿರ್ದೇಶಕ ಹಾಗೂ ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾದ ಚೇರ್‍ಮೆನ್ ಎಂ.ಬಿ.ಜಯರಾಂ ಉದ್ಘಾಟಿಸಲಿದ್ದಾರೆ. ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್.ಮನು ಶೆಣೈ ಇತರರು ಪಾಲ್ಗೊಳ್ಳಲಿದ್ದಾರೆ. ಈ ಪ್ರಯುಕ್ತ ‘ಪ್ರಕೃತಿ ವಿಕೋಪ’ ಪರಿಸರ ಸೂಕ್ಮ ವಲಯ- ಮುಂದಿನ ಹೆಜ್ಜೆಗಳು ಎಂಬ ವಿಚಾರದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು ಕುಟ್ಟದ ಬೆಳೆಗಾರ, ಕಾಪ್ಸ್ ವಿದ್ಯಾಸಂಸ್ಥೆಯ ಟ್ರಸ್ಟಿ ಮಾಚಿಮಾಡ ರಾಜಾ ತಿಮ್ಮಯ್ಯ ಉಪನ್ಯಾಸ ನೀಡಲಿದ್ದಾರೆ.