ಮಡಿಕೇರಿ, ಅ. 12: ಐತಿಹಾಸಿಕ ಹಿನ್ನೆಲೆ ಹೊಂದಿರುವ ನಾಡಹಬ್ಬ ಮಡಿಕೇರಿ ದಸರಾ ಉತ್ಸವನ್ನು ಈ ಬಾರಿ ಯಾವದೇ ಅಡಂಭರವಿಲ್ಲದೆ ಸರಳತೆಯೊಂದಿಗೆ ಸಾಂಪ್ರದಾಯಿ ಕವಾಗಿ ಆಚರಿಸಲಾಗುತ್ತಿದ್ದು, ಎಲ್ಲ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ವಿಜಯದಶಮಿಯಂದು ಮಾತ್ರ ಒಂದು ದಿನ ಸಾಂಸ್ಕøತಿಕ ಹಾಗೂ ವೇದಿಕೆ ಕಾರ್ಯಕ್ರಮ ಹಮ್ಮಿ ಕೊಳ್ಳುವಂತೆ ತೀರ್ಮಾನಿಸಲಾಗಿದೆ.ಕಾರ್ಯಕ್ರಮಗಳ ಬಗ್ಗೆ ದಸರಾ ಸಮಿತಿ ಹಾಗೂ ಉಪಸಮಿತಿಗಳು ಗೊಂದಲವೇರ್ಪಟ್ಟ ಹಿನ್ನೆಲೆಯಲ್ಲಿಂದು ಸಂಜೆ ಕಾವೇರಿ ಕಲಾಕ್ಷೇತ್ರದಲ್ಲಿ ಮಡಿಕೇರಿ, ಅ. 12: ಐತಿಹಾಸಿಕ ಹಿನ್ನೆಲೆ ಹೊಂದಿರುವ ನಾಡಹಬ್ಬ ಮಡಿಕೇರಿ ದಸರಾ ಉತ್ಸವನ್ನು ಈ ಬಾರಿ ಯಾವದೇ ಅಡಂಭರವಿಲ್ಲದೆ ಸರಳತೆಯೊಂದಿಗೆ ಸಾಂಪ್ರದಾಯಿ ಕವಾಗಿ ಆಚರಿಸಲಾಗುತ್ತಿದ್ದು, ಎಲ್ಲ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ವಿಜಯದಶಮಿಯಂದು ಮಾತ್ರ ಒಂದು ದಿನ ಸಾಂಸ್ಕøತಿಕ ಹಾಗೂ ವೇದಿಕೆ ಕಾರ್ಯಕ್ರಮ ಹಮ್ಮಿ ಕೊಳ್ಳುವಂತೆ ತೀರ್ಮಾನಿಸಲಾಗಿದೆ.ಕಾರ್ಯಕ್ರಮಗಳ ಬಗ್ಗೆ ದಸರಾ ಸಮಿತಿ ಹಾಗೂ ಉಪಸಮಿತಿಗಳು ಗೊಂದಲವೇರ್ಪಟ್ಟ ಹಿನ್ನೆಲೆಯಲ್ಲಿಂದು ಸಂಜೆ ಕಾವೇರಿ ಕಲಾಕ್ಷೇತ್ರದಲ್ಲಿ ಮಡಿಕೇರಿ, ಅ. 12: ಐತಿಹಾಸಿಕ ಹಿನ್ನೆಲೆ ಹೊಂದಿರುವ ನಾಡಹಬ್ಬ ಮಡಿಕೇರಿ ದಸರಾ ಉತ್ಸವನ್ನು ಈ ಬಾರಿ ಯಾವದೇ ಅಡಂಭರವಿಲ್ಲದೆ ಸರಳತೆಯೊಂದಿಗೆ ಸಾಂಪ್ರದಾಯಿ ಕವಾಗಿ ಆಚರಿಸಲಾಗುತ್ತಿದ್ದು, ಎಲ್ಲ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ವಿಜಯದಶಮಿಯಂದು ಮಾತ್ರ ಒಂದು ದಿನ ಸಾಂಸ್ಕøತಿಕ ಹಾಗೂ ವೇದಿಕೆ ಕಾರ್ಯಕ್ರಮ ಹಮ್ಮಿ ಕೊಳ್ಳುವಂತೆ ತೀರ್ಮಾನಿಸಲಾಗಿದೆ.
ಕಾರ್ಯಕ್ರಮಗಳ ಬಗ್ಗೆ ದಸರಾ ಸಮಿತಿ ಹಾಗೂ ಉಪಸಮಿತಿಗಳು ಗೊಂದಲವೇರ್ಪಟ್ಟ ಹಿನ್ನೆಲೆಯಲ್ಲಿಂದು ಸಂಜೆ ಕಾವೇರಿ ಕಲಾಕ್ಷೇತ್ರದಲ್ಲಿ ಇನ್ನೂ ಕೆಲವರು ಸಾಂಪ್ರ ದಾಯಿಕ, ಸರಳ ಆಚರಣೆ ಆಗಿರುವ ದರಿಂದ ಎರಡು ದಿನಗಳ ಬದಲಿಗೆ ವಿಜಯದಶಮಿಯಂದು ಒಂದು ದಿನ ಮಾತ್ರ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸುವಂತೆ ಸಲಹೆ ನೀಡಿದ ರಲ್ಲದೆ, ವೇದಿಕೆ, ಶಾಮಿಯಾನಗಳಿಗೆ ವೆಚ್ಚ ಮಾಡುವದಕ್ಕಿಂತ ಗಾಂಧಿ ಮೈದಾನದಲ್ಲಿರುವ ವೇದಿಕೆಯನ್ನೇ ಅಲಂಕೃತಗೊಳಿಸಿ, ಮೈದಾನದಲ್ಲಿ ಸಾರ್ವಜನಿಕರಿಗೆ ಆಸೀನರಾಗಲು ಆಸನಗಳ ವ್ಯವಸ್ಥೆ ಮಾಡುವ ಬಗ್ಗೆ ಸಲಹೆ ನೀಡಿದರು. ಎಲ್ಲರ ಅಭಿಪ್ರಾಯ ಗಳನ್ನು ಪಡೆದ ಬಳಿಕ ಒಂದೇ ದಿನ ಕಾರ್ಯಕ್ರಮ ನಡೆಸುವಂತೆ ತೀರ್ಮಾನ ಕೈಗೊಳ್ಳಲಾಯಿತು.
ದೇಶಭಕ್ತಿ - ಸಂಸ್ಕøತಿ
ವಿಜಯದಶಮಿಯಂದು ಸಂಜೆಯಿಂದ ಬೆಳಗ್ಗಿನ ಜಾವದವರೆಗೆ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ದೇಶಭಕ್ತಿ, ಧಾರ್ಮಿಕತೆಯನ್ನು ಬಿಂಬಿಸುವ ಕಾರ್ಯಕ್ರಮ ಹಾಗೂ ಸಂಸ್ಕøತಿ, ಪದ್ಧತಿಗಳನ್ನು ಬಿಂಬಿಸುವ ಸಲುವಾಗಿ ಕೊಡವ, ಅರೆಭಾಷೆ, ತುಳು, ಕೊಂಕಣಿ (ಮೊದಲ ಪುಟದಿಂದ) ನೀಡುವಂತೆ ಸಲಹೆ ನೀಡಿದರೆ, ಇನ್ನೂ ಕೆಲವರು ಕವಿಗೋಷ್ಠಿ ನೀಡಿದರೆ ಇತರ ಸಮಿತಿಗಳಿಗೂ ಅವಕಾಶ ನೀಡಬೇಕಾಗುತ್ತದೆ ಎಂದು ಹೇಳಿದರು. ಇನ್ನೂ ಕೆಲವರು ಕವಿಗೋಷ್ಠಿ ಹಾಗೂ ಸಾಂಸ್ಕøತಿಕ ಸಮಿತಿಯನ್ನು ದೂರವಿಟ್ಟು ಕಾರ್ಯಕ್ರಮ ಮಾಡುವ ಬಗ್ಗೆಯೂ ಹೇಳಿದರು. ಮತ್ತೆ ಕೆಲವರು ಯಾರನ್ನು ಹೊರಗಿಟ್ಟು ಮಾಡುವದು ಸರಿಯಾದ ಕ್ರಮವಲ್ಲ. ಈಗಾಗಲೇ ಕವಿಗೋಷ್ಠಿ ಸಮಿತಿಯವರು ಕಾರ್ಯಕ್ರಮ ನಿಗದಿ ಮಾಡಿದ್ದಾರೆ. ಸಮಿತಿಯವರನ್ನು ಹಾಗೂ ಸಾಂಸ್ಕøತಿಕ ಸಮಿತಿಯವರನ್ನು ಕರೆಸಿ ಮನವೊಲಿಸಿ ಕಾರ್ಯಕ್ರಮಕ್ಕೆ ಸಹಕಾರ ನೀಡುವ ಬಗ್ಗೆ ಸಲಹೆ ನೀಡಿದರು. ಅಂತಿಮವಾಗಿ ಎರಡು ಸಮಿತಿ ಅಧ್ಯಕ್ಷರನ್ನು ಒಳಗೊಂಡು ಮಾತುಕತೆ ನಡೆಸಿ ಗೊಂದಲ ನಿವಾರಿಸಿಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಮಂಟಪಕ್ಕೆ ಜಾಸ್ತಿ ಕೊಡಿ
ದಸರಾದ ಪ್ರಮುಖ ಆಕರ್ಷಣೆ ಯಾಗಿರುವ ದಶಮಂಟಪ ಗಳಿಗೆ ಇನ್ನೂ ಕೂಡ ಅನುದಾನ ಘೋಷಣೆ ಮಾಡಿಲ್ಲ. ಕಾರ್ಯ ಕ್ರಮಗಳು ರದ್ದಾಗಿರುವದರಿಂದ ಹಣ ಉಳಿಕೆಯಾಗಲಿದೆ. ಹಾಗಾಗಿ ಮಂಟಪಗಳಿಗೆ ಹೆಚ್ಚಿಗೆ ಅನುದಾನ
ಒದಗಿಸಬೇಕೆಂದು ದಶಮಂಟಪ ಸಮಿತಿಯವರು ತಮ್ಮ ಬೇಡಿಕೆ ಮುಂದಿಟ್ಟರು.
ಈಗಾಗಲೇ ಕಳೆದ ಸಾಲಿನ ರೂ. 10 ಲಕ್ಷ ಸಾಲ ಪಾವತಿಗೆ ಬಾಕಿ ಇದೆ. ಅಲ್ಲದೆ, ಈ ಬಾರಿಯ ಖರ್ಚು ವೆಚ್ಚ ಸರಿದೂಗಿಸಬೇಕಾಗಿದೆ. ಮಂಟಪಗಳು ಹಾಗೂ ಕರಗಗಳಿಗೆ ಸೂಕ್ತವಾದ ಅನುದಾನ ಒದಗಿಸುವ ಬಗ್ಗೆ ದಸರಾ ಸಮಿತಿ ಪ್ರಮುಖರು ಪ್ರಕಟಿಸಿದರು. ಅಂತಿಮವಾಗಿ ಎಲ್ಲರೂ ಒಗ್ಗಟ್ಟಾಗಿ ಒಮ್ಮನಸ್ಸಿನಿಂದ ದಸರಾ ಉತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆ ಹಾಗೂ ಚರ್ಚೆಯಲ್ಲಿ ದಸರಾ ಸಮಿತಿ ಖಜಾಂಚಿ ಸಂಗೀತ ಪ್ರಸನ್ನ, ಕ್ರೀಡಾ ಸಮಿತಿ ಅಧ್ಯಕ್ಷ ಜಗದೀಶ್, ದಶಮಂಟಪ ಸಮಿತಿ ಅಧ್ಯಕ್ಷ ರವಿಕುಮಾರ್, ದಸರಾ ಸಮಿತಿ ಗೌರವ ಸಲಹೆಗಾರರಾದ ರಾಬಿನ್ ದೇವಯ್ಯ, ಜಿ. ಚಿದ್ವಿಲಾಸ್, ಎಂ.ಎ. ಉಸ್ಮಾನ್, ಎ.ಆರ್. ಕುಟ್ಟಪ್ಪ, ಟಿ.ಪಿ. ರಾಜೇಂದ್ರ, ಕಾನೆಹಿತ್ಲು ಮೊಣ್ಣಪ್ಪ, ಹೆಚ್.ಸಿ. ಸತೀಶ್ಕುಮಾರ್, ತೆನ್ನೀರ
ಮೈನ, ಜಾನ್ಸನ್ ಪಿಂಟೋ, ಬಿ.ಎಂ. ರಾಜೇಶ್, ಕೆ.ಯು. ಅಬ್ದುಲ್ರಜಾಕ್, ಬೈ.ಶ್ರೀ ಪ್ರಕಾಶ್, ಬಿ.ಕೆ. ಅರುಣ್ಕುಮಾರ್, ಪ್ರದೀಪ್, ಎ.ಕೆ. ಲೋಕೇಶ್, ವೀಣಾಕ್ಷಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.