ಗೋಣಿಕೊಪ್ಪ ವರದಿ, ಅ. 13: ಶಬರಿಮಲೆ ಅಯ್ಯಪ್ಪ ಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿ ತೀರ್ಪು ನೀಡಿರುವ ಸುಪ್ರಿಂ ಕೋರ್ಟ್ ತೀರ್ಪನ್ನು ಮರು ಪರಿಶೀಲನೆ ಪ್ರಯತ್ನದ ಮನವಿ ಸಲ್ಲಿಸಲು ಮುಂದಾಗದ ಕೇರಳ ಸರ್ಕಾರದ ವಿರುದ್ಧ ಬಾಳೆಲೆಯಲ್ಲಿ ಪ್ರತಿಭಟನೆ ನಡೆಯಿತು.

ಬಾಳೆಲೆ ಶ್ರೀ ಸ್ವಾಮಿ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಬಾಳೆಲೆ ಪಟ್ಟಣದಿಂದ ಗಣಪತಿ ದೇವಸ್ಥಾನ ದವರೆಗೆ ಮೆರವಣಿಗೆ ತೆರಳಿ ವಿರೋಧ ವ್ಯಕ್ತಪಡಿಸಲಾಯಿತು. ಕೇರಳ ಸರ್ಕಾರ ಕೂಡಲೇ ಮರುಪರಿಶೀಲನೆಗೆ ಮುಂದಾಗಬೇಕು ಎಂದು ಒತ್ತಾಯಿಸ ಲಾಯಿತು. ಈ ಸಂದರ್ಭ ಪ್ರಮುಖರು ಗಳಾದ ಅಳಮೇಂಗಡ ಬೋಸ್ ಮಂದಣ್ಣ ಚಿಮ್ಮಣಮಾಡ ಕೃಷ್ಣ ಗಣಪತಿ, ಪೋಡಮಾಡ ಸುಖೇಶ್ ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.