ಮಡಿಕೇರಿ, ಅ. 13: ತಾ. 4 ರಂದು ಕೂಡಿಗೆ ಸೇತುವೆಯ ಬಳಿ ಬೈಕ್ ಹಾಗೂ ಆಟೋ ನಡುವೆ ಸಂಭವಿಸಿದ ಡಿಕ್ಕಿ ವೇಳೆ ಗಾಯಗೊಂಡಿದ್ದ ಬೈಕ್ ಸವಾರ ಚಂದ್ರಶೇಖರ್ ಯಾನೆ ಗಣೇಶ್ (27) ನಿನ್ನೆ ರಾತ್ರಿ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಸ್ನೇಹಿತ ರವಿ ಎಂಬವರ ಬೈಕ್ನಲ್ಲಿ (ಕೆಎ 18 ಕೆ 7755) ರಲ್ಲಿ ತೆರಳುತ್ತಿದ್ದಾಗ ತಾ. 4ರ ರಾತ್ರಿ 8 ಗಂಟೆ ಸುಮಾರಿಗೆ ಎದುರಿನಿಂದ ಆಟೋ ರಿಕ್ಷಾ (ಕೆಎ 12 ಬಿ 1502) ಡಿಕ್ಕಿಯಾಗಿದ್ದು, ಗಾಯಾಳುವಿಗೆ ಕುಶಾಲನಗರದಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಮೈಸೂರಿಗೆ ಕರೆದೊಯ್ಯಲಾಗಿತ್ತು.
ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಮೃತನು ಕುಶಾಲಕನಗರ ತಾವರೆಕೆರೆ ಬಳಿ ಲಾರಿ ಗ್ಯಾರೇಜ್ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಸ್ನೇಹಿತ ರವಿ ನೀಡಿದ ಪುಕಾರು ಮೇರೆಗೆ ಕುಶಾಲನಗರ ಗ್ರಾಮಾಂತ ಸಂಚಾರಿ ಠಾಣೆಯಲ್ಲಿ ಆಟೋ ಚಾಲಕ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮಕೈಗೊಳ್ಳಲಾಗಿದೆ.