ಸೋಮವಾರಪೇಟೆ, ಅ.12: ಇಲ್ಲಿನ ಭುವನ ಮಂದಾರ ರೈತ ಉತ್ಪಾದಕರ ಸಂಸ್ಥೆಯ ವಾರ್ಷಿಕ ಮಹಾಸಭೆ ತಾ. 13ರಂದು (ಇಂದು) ಪೂರ್ವಾಹ್ನ 10.30ಕ್ಕೆ ಪತ್ರಿಕಾಭವನ ಸಭಾಂಗಣದಲ್ಲಿ ನಡೆಯಲಿದೆ. ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಡಿಸಿಲ್ವಾ, ಮಡಿಕೇರಿ ನಬಾರ್ಡ್ ಬ್ಯಾಂಕ್‍ನ ಡಿಡಿಎಂ ಎಂ.ಸಿ. ನಾಣಯ್ಯ, ಓಡಿಪಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನಿ ಡಿ. ಅಲ್ಮೆಡಾ ಅವರುಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಟಿ. ದಯಾನಂದ್ ತಿಳಿಸಿದ್ದಾರೆ.