ಚಿಕ್ಕಮಗಳೂರು, ಅ. 12: ಪ್ರವಾಹ ಪೀಡಿತ ಪ್ರದೇಶಗಳೆಂದು ರಾಜ್ಯಸರ್ಕಾರ ಘೋಷಿಸಿರುವ ತಾಲೂಕುಗಳಲ್ಲಿ ಆಗಿರುವ ಬೆಳೆಹಾನಿಗೆ ಹಲವು ರೀತಿಯ ರಿಯಾಯಿತಿ ನೀಡಲು ಬ್ಯಾಂಕ್‍ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ.ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗದರ್ಶಿ ಸೂತ್ರದ ಪ್ರಕಾರ ಕಾಫಿ ಬೆಳೆಯುವ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ಕಾಫಿ ಬೆಳೆಗಾರರಿಗೂ ಅನೇಕ ರೀತಿಯ ಆರ್ಥಿಕ ಪರಿಹಾರ ದೊರಕಲಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ ತಿಳಿಸಿದ್ದಾರೆ.ರಾಜ್ಯ ಸರ್ಕಾರ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ನರಸಿಂಹರಾಜಪುರ, ಮೂಡಿಗೆರೆ, ಶೃಂಗೇರಿ ಮತ್ತು ಕೊಪ್ಪ ತಾಲೂಕನ್ನು ಪ್ರವಾಹ ಪೀಡಿತ ತಾಲೂಕುಗಳೆಂದು ಘೋಷಿಸಿದೆ. ಇದೇ ರೀತಿ ಹಾಸನ ಚಿಕ್ಕಮಗಳೂರು, ಅ. 12: ಪ್ರವಾಹ ಪೀಡಿತ ಪ್ರದೇಶಗಳೆಂದು ರಾಜ್ಯಸರ್ಕಾರ ಘೋಷಿಸಿರುವ ತಾಲೂಕುಗಳಲ್ಲಿ ಆಗಿರುವ ಬೆಳೆಹಾನಿಗೆ ಹಲವು ರೀತಿಯ ರಿಯಾಯಿತಿ ನೀಡಲು ಬ್ಯಾಂಕ್‍ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗದರ್ಶಿ ಸೂತ್ರದ ಪ್ರಕಾರ ಕಾಫಿ ಬೆಳೆಯುವ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ಕಾಫಿ ಬೆಳೆಗಾರರಿಗೂ ಅನೇಕ ರೀತಿಯ ಆರ್ಥಿಕ ಪರಿಹಾರ ದೊರಕಲಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ನರಸಿಂಹರಾಜಪುರ, ಮೂಡಿಗೆರೆ, ಶೃಂಗೇರಿ ಮತ್ತು ಕೊಪ್ಪ ತಾಲೂಕನ್ನು ಪ್ರವಾಹ ಪೀಡಿತ ತಾಲೂಕುಗಳೆಂದು ಘೋಷಿಸಿದೆ. ಇದೇ ರೀತಿ ಹಾಸನ (ಮೊದಲ ಪುಟದಿಂದ) ಕಾಣೆಯಾಗಿವೆ ಎಂದು ವಿವರಿಸಿರುವದಾಗಿ ತಿಳಿಸಿದರು. ಬ್ಯಾಂಕ್‍ಗಳು ಕಾಫಿ ಬೆಳೆಗಾರರ ಸಂಕಷ್ಟವನ್ನು ಅರ್ಥಮಾಡಿಕೊಂಡು ಅವರ ಸಾಲ ವಸೂಲಿಗೆ ಮುಂದಾಗದೆ ಬಡ್ಡಿ ಮನ್ನಾ ಮತ್ತು ಸಾಲವಸೂಲಿ ಮುಂದೂಡಿಕೆಗೆ ಮುಂದಾಗಬೇಕೆಂದು ಸಭೆಯಲ್ಲಿ ತಾವು ಒತ್ತಾಯಿಸಿದ್ದಾಗಿ ಭೋಜೇಗೌಡ ತಿಳಿಸಿದ್ದಾರೆ.
ಕಾಫಿ ಬೆಳೆಗಾರರ ಪರಿಸ್ಥಿತಿಯನ್ನು ಸಂಸದೆÀ ಶೋಭಾಕರಂದ್ಲಾಜೆ ಮತ್ತು ಪ್ರತಾಪ್‍ಸಿಂಹ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ. ಸದಾನಂದಗೌಡ ಮತ್ತು ಕಾಫಿ ಜಿಲ್ಲೆಗಳ ಶಾಸಕರೊಂದಿಗೆ ತಾವು ಕೇಂದ್ರದ ಅರ್ಥ ಸಚಿವರು ಹಾಗೂ ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಪರಿಹಾರೋಪಾಯಗಳ ಬಗ್ಗೆ ಚರ್ಚಿಸಿದ್ದರ ಫಲ ಈ ಮಾರ್ಗದರ್ಶಿ ಸೂತ್ರಗಳೆಂದು ಹೇಳಿದರು.
ಕೇಂದ್ರಸರ್ಕಾರದ ನಿರ್ದೇಶನದಂತೆ ಆರ್.ಬಿ.ಐ. ತನ್ನ ಮಾರ್ಗದರ್ಶಿ ಸೂತ್ರದಲ್ಲಿ ಬ್ಯಾಂಕ್‍ಗಳಿಗೆ ಎಲ್ಲಾ ರೀತಿಯ ಬೆಳೆ ಸಾಲದ ವಸೂಲಿಯನ್ನು ಒಂದು ತ್ರೈಮಾಸಿಕಕ್ಕೆ ಮುಂದೂಡಲು, ಒಂದು ವರ್ಷದವರೆಗೆ ಸಾಲ ಮರುಪಾವತಿ ರಜೆ ನೀಡಲು, ಬೆಳೆ ಸಾಲವನ್ನು ದೀರ್ಘಾವಧಿ ಸಾಲ ಎಂದು ಪರಿವರ್ತಿಸಲು, ಅದಕ್ಕೆ ಒಂದು ವರ್ಷ ಮೊರಾಟೋರಿಯಂ ನೀಡಲು ಹಾಗೂ ಸಣ್ಣ ರೈತರಾದರೆ 3 ರಿಂದ 5 ವರ್ಷದವರೆಗೆ ಸಾಲ ಪಾವತಿ ರಜೆ ನೀಡಲು, ಸುಸ್ತಿ ಬಡ್ಡಿ ಹಾಗೂ ಬಡ್ಡಿಗೆ ಬಡ್ಡಿ ಹಾಕದಿರಲು ಮತ್ತು ಹಿಂದಿನ ಒಪ್ಪಂದದಂತೆಯೇ ಬಡ್ಡಿ ವಿಧಿಸಲು ಸೂಚಿಸಿದೆ. ಈ ರಿಯಾಯಿತಿಗಳು ಅನುತ್ಪಾದಕ ಸಾಲಗಳಿಗೆ ಅನ್ವಯಿಸುವದಿಲ್ಲ ಎಂದು ಹೇಳಲಾಗಿದೆ.