ಮಡಿಕೇರಿ, ಅ. 12: ಕೊಡಗು ಜಿಲ್ಲೆಯಲ್ಲಿ ನೂತನವಾಗಿ ಅಂತರರಾಷ್ಟ್ರೀಯ ಗುಣಮಟ್ಟದಂತೆ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ವಿಚಾರ ಹಾಗೂ ಇದಕ್ಕೆ ನಿಗದಿ ಯಾಗಿದ್ದ ಜಾಗಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಇದೀಗ ಸ್ಪಷ್ಟ ನಿಲುವು ಕೈಗೊಂಡಿದೆ. ಈ ಕುರಿತು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳು ಈ ಹಿಂದೆ ಜಾಗ ಮಡಿಕೇರಿ, ಅ. 12: ಕೊಡಗು ಜಿಲ್ಲೆಯಲ್ಲಿ ನೂತನವಾಗಿ ಅಂತರರಾಷ್ಟ್ರೀಯ ಗುಣಮಟ್ಟದಂತೆ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ವಿಚಾರ ಹಾಗೂ ಇದಕ್ಕೆ ನಿಗದಿ ಯಾಗಿದ್ದ ಜಾಗಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಇದೀಗ ಸ್ಪಷ್ಟ ನಿಲುವು ಕೈಗೊಂಡಿದೆ. ಈ ಕುರಿತು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳು ಈ ಹಿಂದೆ ಜಾಗ ಮಡಿಕೇರಿ, ಅ. 12: ಕೊಡಗು ಜಿಲ್ಲೆಯಲ್ಲಿ ನೂತನವಾಗಿ ಅಂತರರಾಷ್ಟ್ರೀಯ ಗುಣಮಟ್ಟದಂತೆ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ವಿಚಾರ ಹಾಗೂ ಇದಕ್ಕೆ ನಿಗದಿ ಯಾಗಿದ್ದ ಜಾಗಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಇದೀಗ ಸ್ಪಷ್ಟ ನಿಲುವು ಕೈಗೊಂಡಿದೆ. ಈ ಕುರಿತು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳು ಈ ಹಿಂದೆ ಜಾಗ ಮಡಿಕೇರಿ, ಅ. 12: ಕೊಡಗು ಜಿಲ್ಲೆಯಲ್ಲಿ ನೂತನವಾಗಿ ಅಂತರರಾಷ್ಟ್ರೀಯ ಗುಣಮಟ್ಟದಂತೆ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ವಿಚಾರ ಹಾಗೂ ಇದಕ್ಕೆ ನಿಗದಿ ಯಾಗಿದ್ದ ಜಾಗಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಇದೀಗ ಸ್ಪಷ್ಟ ನಿಲುವು ಕೈಗೊಂಡಿದೆ. ಈ ಕುರಿತು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳು ಈ ಹಿಂದೆ ಜಾಗ (ಮೊದಲ ಪುಟದಿಂದ) ಪೂರ್ವಾನುಮೋದನೆ ನೀಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇದರಂತೆ ಒಟ್ಟು 12.20 ಎಕರೆ ಜಾಗದ ಗಡಿ ಗುರುತಿಸಿ ತಕ್ಷಣವೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಈ ಮೇಲ್ಕಂಡ ಅಂಶವನ್ನು ಹೊರತು ಪಡಿಸಿ ಈ ಹಿಂದಿನ ಸರಕಾರಿ ಆದೇಶದಲ್ಲಿ ಯಾವದೇ ಬದಲಾವಣೆ ಇರುವದಿಲ್ಲ ಎಂದು ಕಂದಾಯ ಇಲಾಖೆಯ ಭೂಮಂಜೂರಾತಿ ವಿಭಾಗದಿಂದ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಜಿಲ್ಲೆಗೆ ಉತ್ತಮ ಅವಕಾಶ
ರಾಜ್ಯ ಕ್ರಿಕೆಟ್ ಸಂಸ್ಥೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದು, ಇದರಂತೆ ಕ್ರೀಡಾ ಜಿಲ್ಲೆ ಖ್ಯಾತಿಯ ಕೊಡಗಿಗೂ ಕೋಟ್ಯಾಂತರ ರೂ.ಗಳ ವೆಚ್ಚದ ಈ ಬೃಹತ್ ಯೋಜನೆಯನ್ನು ಪ್ರಕಟಿಸಿತ್ತು. ಆದರೆ ಜಾಗ ವಿವಾದದ ಹಿನ್ನೆಲೆಯಲ್ಲಿ ಇದು ಕಾಮಗಾರಿ ಪ್ರಾರಂಭಗೊಂಡರೂ ಈ ತನಕ ನೆನೆಗುದಿಗೇ ಬಿದ್ದಿತ್ತು. ಈ ಸ್ಟೇಡಿಯಂ ಗೊಂದಲದ ಕಾರಣದಿಂದಾಗಿ ಬೇರೆ ಜಿಲ್ಲೆಗೆ ಸ್ಥಳಾಂತರವಾಗಲಿದೆ ಎಂದೂ ಈ ಹಿಂದೆ ಮಾತು ಕೇಳಿ ಬಂದಿತ್ತು. ಇದೀಗ ಈ ವಿವಾದಕ್ಕೆ ಸಂಬಂಧಿಸಿ ದಂತೆ ಮತ್ತೊಂದು ಆದೇಶ ಪ್ರಕಟವಾಗಿರುವದರಿಂದ ಶೀಘ್ರದಲ್ಲಿ ಮರು ಕಾಮಗಾರಿ ಆರಂಭಗೊಳ್ಳುವ ಸಾಧ್ಯತೆ ಇದೆಯಾದರೂ ಜಿಲ್ಲಾಡಳಿತ ಜಾಗದ ಗಡಿ ಗುರುತು ಮಾಡಿ ಸಂಸ್ಥೆಗೆ ವಹಿಸಬೇಕಿದೆ.
ಜಿಲ್ಲೆಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದಲ್ಲಿ ಇದು ಅಂತರ ರಾಷ್ಟ್ರೀಯ ಗುಣಮಟ್ಟವನ್ನೇ ಹೊಂದಿರಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗಿಂತಲೂ ಒಂದು ಮೀಟರ್ ಹೆಚ್ಚು ವಿಸ್ತೀರ್ಣದ ಕ್ರೀಡಾಂಗಣ ಇದಾಗಲಿದೆ. ಇಲ್ಲಿ ಸ್ವಿಮ್ಮಿಂಗ್‍ಪೂಲ್, ಶಟಲ್ ಬ್ಯಾಡ್ ಮಿಂಟನ್, ಬಿಲಿಯಡ್ರ್ಸ್, ಸ್ಕ್ವಾಷ್, ಬಾಸ್ಕೆಟ್‍ಬಾಲ್ ಕೋರ್ಟ್ ಸಹಿತ ಕ್ರಿಕೆಟ್ ಪ್ರ್ಯಾಕ್ಟೀಸ್ ಪಿಚ್ ಕೂಡ ನಿರ್ಮಾಣವಾಗಲಿದ್ದು, ವಿದೇಶಿ ಕೋಚ್‍ಗಳಿಂದಲೂ ತರಬೇತಿ ಕೊಡಿಸಲಾಗುತ್ತದೆ. ಸ್ಥಳೀಯ ಪ್ರತಿಭಾನ್ವಿತ ಮಕ್ಕಳಿಗೆ, ಆಸಕ್ತರಿಗೆ ಇದು ಉತ್ತಮ ಅವಕಾಶವೂ ಆಗಲಿದೆ.
ಈ ಹಿಂದೆ ಈ ಜಾಗದ ವಿಚಾರ ವಿವಾದಾತ್ಮಕ ಸ್ವರೂಪದಲ್ಲಿದ್ದಾಗ ಜಿಲ್ಲಾಡಳಿತ, ಸ್ಥಳೀಯ ಜನಪ್ರತಿನಿಧಿ ಗಳು ನಡೆಸಿದ ಪ್ರಯತ್ನ ಸಫಲವಾಗಿರ ಲಿಲ್ಲ. ಸ್ಮಶಾನಕ್ಕಾಗಿ ಜಾಗ ನೀಡಬೇಕೆಂದು ಒತ್ತಾಯಿಸಿ ಅಲ್ಲಿನ ಮೊಣ್ಣಪ್ಪ ಎಂಬವರು ನ್ಯಾಯಾಲ ಯದ ಮೆಟ್ಟಿಲೇರಿದ್ದರೂ ಅಲ್ಲೂ ಮನವಿ ತಿರಸ್ಕøತಗೊಂಡಿತ್ತು. ರಾಜಕೀಯ ಪಕ್ಷಗಳೂ ಸ್ಪಷ್ಟ ನಿಲುವನ್ನು ಪ್ರಕಟಿಸುತ್ತಿರಲಿಲ್ಲ. ಇದೀಗ ಕಂದಾಯ ಇಲಾಖೆ ಕ್ರಿಕೆಟ್ ಸಂಸ್ಥೆಗೆ ಇಂತಿಷ್ಟು ಹಾಗೂ ಸ್ಮಶಾನದ ಉದ್ದೇಶಕ್ಕೆ ಇಂತಿಷ್ಟು ಎಂದು ಜಾಗವನ್ನು ವಿಂಗಡಿಸಿ ಆದೇಶ ಬದಲಾವಣೆ ಮಾಡಿರುವದರಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ತ್ವರಿತ ಚಾಲನೆ ಸಿಗುವ ನಿರೀಕ್ಷೆ ಇದೆ.
ಈ ಕುರಿತು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಿಇಓ ನಿವೃತ್ತ ಐಎಫ್‍ಎಸ್ ಅಧಿಕಾರಿ ಪಾರ್ಥ ಸಾರಥಿ, ಕಾರ್ಯದರ್ಶಿ ಸುಧಾಕರ್ ರಾವ್, ಕೊಡಗಿನ ಕೆಎಸ್‍ಸಿಎ ಸಂಯೋಜಕ ಚೇನಂಡ ಪ್ರಥ್ವಿದೇವಯ್ಯ, ಕೆಎಸ್‍ಸಿಎ ಕ್ಲಬ್ ಕಾರ್ಯದರ್ಶಿ ಮೆಥಾನಿ ಅವರುಗಳು ಸಮಾಲೋಚನೆ ನಡೆಸಿದ್ದಾರೆ.
- ಶಶಿ ಸೋಮಯ್ಯ