ಗೋಣಿಕೊಪ್ಪ, ಅ. 13: ಪ್ರಕೃತಿ ವಿಕೋಪಕ್ಕೆ ತುತ್ತಾದ ನಿರಾಶ್ರಿತರಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಗೋಣಿಕೊಪ್ಪ ದಸರಾ ಕವಿಗೋಷ್ಟಿ ತಾ. 17ರಂದು ನಡೆಯಲಿದೆ ಎಂದು ಕವಿಗೋಷ್ಟಿ ಸಮಿತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಧೋಶ್ ಪೂವಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತಾಲ್ಲಕು ಕನ್ನಡ ಸಾಹಿತ್ಯ ಪರಿಷತ್, ಶ್ರೀ ಕಾವೇರಿ ದಸರಾ ಸಮಿತಿ, ಕವಿಗೋಷ್ಟಿ ಸಮಿತಿ ಆಶ್ರಯದಲ್ಲಿ ಗೋಷ್ಟಿ ನಡೆಯಲಿದೆ. ಈ ಬಾರಿ ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯು 40 ನೇ ವರ್ಷದ ದಸರಾ ಜನೋತ್ಸವ ಸರಳವಾಗಿ ಆಚರಿಸಲು ನಿರ್ಧರಿಸಿದೆ ಈ ಹಿನ್ನೆಲೆ ಕವಿಗೋಷ್ಟಿಯನ್ನು ಸರಳವಾಗಿ ಆಚರಿಸುವ ಮೂಲಕ ನೊಂದ ಮನಕೆ ಸಾಂತ್ವನ ಹೇಳುವ ಗೋಷ್ಟಿಯಾಗಿ 17ರಂದು ಬೆಳಿಗ್ಗೆ 10 ಗಂಟೆಗೆ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಆಹ್ವಾನಿತ ಕವಿಗೋಷ್ಟಿ ನಡೆಯಲಿದೆ ಎಂದರು

ಗೋಷ್ಟಿಯಲ್ಲಿ ತಾಲೂಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ ಚಮ್ಮಟ್ಟಿರಾ ಪ್ರವೀಣ್ ಉತ್ತಪ್ಪ, ಸಹಕಾರ್ಯದರ್ಶಿ ರೇಖಾ ಶ್ರೀದರ್, ಮಾಧ್ಯಮ ಕಾರ್ಯದರ್ಶಿ ಜಗದೀಶ್ ಜೋಡುಬೀಟಿ ಉಪಸ್ಥಿತರಿದ್ದರು.