ಮಡಿಕೇರಿ, ಅ. 13: ಆಗಸ್ಟ್ ತಿಂಗಳ ಪ್ರಾಕೃತಿಕ ದುರಂತ ಮಾನವ ನಿರ್ಮಿತ ಎಂದು ಪರಿಸರವಾದಿಗಳು ಸುಳ್ಳು ಹೇಳುತ್ತಿದ್ದು, ಪ್ರಕೃತಿ ಕನಿಷ್ಟ ನೂರು ವರ್ಷಕ್ಕೊಮ್ಮೆ ಭೂಮಿಯಲ್ಲಿ ಜಲಸ್ಫೋಟ ಹಾಗೂ ಮೇಘಸ್ಫೋಟದಂತಹ ಬದಲಾವಣೆಯನ್ನು ಸಹಜವಾಗಿ ತರುತ್ತದೆ ಎಂದು ವಿದೇಶದಲ್ಲಿ ನೆಲೆಸಿರುವ ಜಿಲ್ಲೆಯ ಭೂ ವಿಜ್ಞಾನಿ ಐಚೆಟ್ಟಿರ ಮಾಚಯ್ಯ ಪ್ರತಿಪಾದಿಸಿದರು.ಸಮಾನ ಮನಸ್ಕರ ವೇದಿಕೆ ವತಿಯಿಂದ ನಗರದ ಬಾಲಭವನದಲ್ಲಿ ಆಯೋಜಿಸಲಾಗಿದ್ದ ‘ಪ್ರಾಕೃತಿಕ ವಿಕೋಪದ ವಾಸ್ತವಗಳು-ಮುಂದಿನ ಹೆಜ್ಜೆಗಳು’ ಎಂಬ ವಿಚಾರದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾಚಯ್ಯ ಮಾತನಾಡಿದರು.ಪ್ರಾಕೃತಿಕ ಬದಲಾವಣೆಯಲ್ಲಿ ಉಂಟಾಗುವ ಪರಿಣಾಮಗಳು ಸ್ಥಿರಸ್ಥಿತಿಗೆ ಬರಲು ಸಾಕಷ್ಟು ವರ್ಷಗಳು ಬೇಕಿದ್ದು, ಮುಂದಿನ ವರ್ಷಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾದಲ್ಲಿ ಮಡಿಕೇರಿ, ಅ. 13: ಆಗಸ್ಟ್ ತಿಂಗಳ ಪ್ರಾಕೃತಿಕ ದುರಂತ ಮಾನವ ನಿರ್ಮಿತ ಎಂದು ಪರಿಸರವಾದಿಗಳು ಸುಳ್ಳು ಹೇಳುತ್ತಿದ್ದು, ಪ್ರಕೃತಿ ಕನಿಷ್ಟ ನೂರು ವರ್ಷಕ್ಕೊಮ್ಮೆ ಭೂಮಿಯಲ್ಲಿ ಜಲಸ್ಫೋಟ ಹಾಗೂ ಮೇಘಸ್ಫೋಟದಂತಹ ಬದಲಾವಣೆಯನ್ನು ಸಹಜವಾಗಿ ತರುತ್ತದೆ ಎಂದು ವಿದೇಶದಲ್ಲಿ ನೆಲೆಸಿರುವ ಜಿಲ್ಲೆಯ ಭೂ ವಿಜ್ಞಾನಿ ಐಚೆಟ್ಟಿರ ಮಾಚಯ್ಯ ಪ್ರತಿಪಾದಿಸಿದರು.ಸಮಾನ ಮನಸ್ಕರ ವೇದಿಕೆ ವತಿಯಿಂದ ನಗರದ ಬಾಲಭವನದಲ್ಲಿ ಆಯೋಜಿಸಲಾಗಿದ್ದ ‘ಪ್ರಾಕೃತಿಕ ವಿಕೋಪದ ವಾಸ್ತವಗಳು-ಮುಂದಿನ ಹೆಜ್ಜೆಗಳು’ ಎಂಬ ವಿಚಾರದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾಚಯ್ಯ ಮಾತನಾಡಿದರು.
ಪ್ರಾಕೃತಿಕ ಬದಲಾವಣೆಯಲ್ಲಿ ಉಂಟಾಗುವ ಪರಿಣಾಮಗಳು ಸ್ಥಿರಸ್ಥಿತಿಗೆ ಬರಲು ಸಾಕಷ್ಟು ವರ್ಷಗಳು ಬೇಕಿದ್ದು, ಮುಂದಿನ ವರ್ಷಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾದಲ್ಲಿ ಇತ್ಯಾದಿ ಮಾನವ ನಿರ್ಮಿತ ತಪ್ಪು ಎಂದು ಪ್ರತಿಬಿಂಬಿಸುವದು ಹಾಸ್ಯಾಸ್ಪದ ಎಂದರು.
ಮರಗಳ ನಾಶದಿಂದಲೇ ಈ ದುರಂತ ಸಂಭವಿಸಿದೆ ಎಂದು ವಾದಿಸುವವರು ಮರಗಳಿಲ್ಲದ ಪ್ರದೇಶದಲ್ಲಿ ಮಳೆಯಾಗುವದನ್ನು ಗಮನಿಸುವದಿಲ್ಲವೆ ಎಂದು ಪ್ರಶ್ನಿಸಿದ ಮಾಚಯ್ಯ, ಮರಗಳೇ ಇಲ್ಲದ ಹಿಮಾಲಯದಲ್ಲಿ ಮಳೆ ಆಗುವದನ್ನು ಜ್ಞಾಪಿಸಿದರು. ಪರಿಸರದಲ್ಲಿ ಸಮುದ್ರ ಮೂಲದ ಜಲಚರಗಳಿಂದ ಶೇ. 70ರಷ್ಟು ಆಮ್ಲಜನಕ ಉತ್ಪಾದನೆ ಯಾದರೆ ಮರಗಳಿಂದ ಕೇವಲ 28 ಶೇ. ಆಕ್ಸಿಜನ್ ದೊರಕುತ್ತಿದ್ದು, ಇತರ ಮೂಲಗಳಿಂದ ಶೇ.2 ಲಭ್ಯತೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದರು. ಕೊಡಗಿನ ಬ್ರಹ್ಮಗಿರಿ ಪ್ರದೇಶದ ಮಣ್ಣು ಬಲಿಷ್ಟವಾಗಿದ್ದು, 400 ಇಂಚಿಗೂ ಹೆಚ್ಚು ಮಳೆಯ
(ಮೊದಲ ಪುಟದಿಂದ) ಸಾಂಧ್ರತೆಯನ್ನು ತಡೆದುಕೊಳ್ಳುವ ಸಾಮಥ್ರ್ಯ ಹೊಂದಿದ್ದರೆ, ಪುಷ್ಪಗಿರಿ ಶ್ರೇಣಿಯಲ್ಲಿ ಆಳವಾಗಿ ಹುದುಗಿರುವ ಮಣ್ಣು ಮಳೆಯ ತೀವ್ರತೆಯನ್ನು ತಡೆದುಕೊಳ್ಳುವಷ್ಟು ಬಲಯುತವಾಗದೆ ಇರುವದರಿಂದ ಇತ್ತೀಚಿನ ದುರಂತದಲ್ಲಿ ಜಲಪ್ರಳಯವಾಗಿ ನೀರು ಮುಂದಕ್ಕೆ ಚಲಿಸಲು ತನ್ನದೇ ಆದ ಮಾರ್ಗಗಳನ್ನು ಹುಡುಕಿಕೊಂಡಿತು ಎಂದರು. ಜುಲೈ 29ರಂದು ಜಿಲ್ಲೆಯ ವಿವಿಧೆಡೆ ಅನುಭವಕ್ಕೆ ಬಂದ ಭೂಕಂಪನಕ್ಕೂ ಆಗಸ್ಟ್ ತಿಂಗಳ ದುರಂತಕ್ಕೂ ಸಂಬಂಧ ಇರಲಾರದು ಎಂದು ಮಾಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದರಾದರೂ ಕೊಡಗಿನ ಭೂಸ್ಥಿತಿಯ ಕುರಿತು ಅಧ್ಯಯನ ನಡೆಸಲು ಹಾಗೂ ವಿಕೋಪಗಳನ್ನು ಸೂಚಿಸುವ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸರ್ಕಾರದ ವತಿಯಿಂದ ಪರಿಣಿತರ ನೇಮಕ ಅಗತ್ಯವಿದೆ ಎಂದು ಸಲಹೆ ನೀಡಿದರು. ಸಂವಾದಕ್ಕೆ ಕಾಂಗ್ರೆಸ್ ಪ್ರಮುಖ ವಿ.ಪಿ. ಶಶಿಧರ್ ಚಾಲನೆ ನೀಡಿದರು. ಚೆಯ್ಯಂಡ ಸತ್ಯ, ಅಬೂಬಕರ್, ಕೆ.ಆರ್. ವಿದ್ಯಾಧರ್, ಕುಂಞಬ್ದುಲ್ಲಾ, ಬೊಟ್ಟಂಗಡ ರಾಜು, ಜೀವನ್ ಚಿಣ್ಣಪ್ಪ, ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಮತ್ತಿತರರು ತಮ್ಮ ಅಭಿಪ್ರಾಯ ಮಂಡಿಸಿದರು. ಕೇಶವ ಕಾಮತ್ ನಿರೂಪಿಸಿ, ಮನುಶೆಣೈ ಸ್ವಾಗತಿಸಿದರು.