ಮಡಿಕೇರಿ, ಅ.13: ನಗರದ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ರಾಜಾಸೀಟು ಮತ್ತು ಕೋಟೆ ಫೀಡರ್ನಲ್ಲಿ ದಸರಾ ಪೂರ್ವ ಸಿದ್ಧತೆ ಕಾರ್ಯ ನಿರ್ವಹಿಸ ಬೇಕಿರುವದರಿಂದ ತಾ. 15 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು. ಆದ್ದರಿಂದ, ಚೈನ್ಗೇಟ್, ಸುದರ್ಶನ ಸರ್ಕಲ್, ಜಯನಗರ, ಕೊಡಗು ವಿದ್ಯಾಲಯ, ಪುಟಾಣಿನಗರ, ಸಿದ್ದಾಪುರ ರಸ್ತೆ, ದೇಚೂರು, ಗಾಳಿಬೀಡು, ಕಾಲೂರು, ಕ್ಲಬ್ ಮಹೇಂದ್ರ, 1 ನೇ ಮೊಣ್ಣಂಗೇರಿ, ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹಾಗೆಯೇ ಗದ್ದಿಗೆ ಫೀಡರ್, ಬೋಯಿಕೇರಿ ಫೀಡರ್ನಲ್ಲಿ ಮತ್ತು ಕುಂಡಮೇಸ್ತ್ರಿ ಫೀಡರ್ನಲ್ಲಿ ದಸರಾ ಪೂರ್ವ ಸಿದ್ದತೆ ಕಾರ್ಯವನ್ನು ನಿರ್ವಹಿಸಬೇಕಿರುವದರಿಂದ ತಾ. 16 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು. ಆದ್ದರಿಂದ ಗೌಡ ಸಮಾಜ, ಜೂನಿಯರ್ ಕಾಲೇಜು, ಗಣಪತಿ ಬೀದಿ, ಮಹದೇವಪೇಟೆ, ರಾಣಿಪೇಟೆ, ಕಾನ್ವೆಂಟ್ ಜಂಕ್ಷನ್, ಸಂತ ಜೋಸೆಫ್ ಶಾಲೆ, ಭಗವತಿ ನಗರ ಹೆಬ್ಬೆಟ್ಟಗೇರಿ ಹಾಗೂ ಬೋಯಿಕೇರಿ, ಮಕ್ಕಂದೂರು, ಮೂರನೇ ಮೈಲು, ಕರ್ಣಂಗೇರಿ, ಮುಕ್ಕೋಡ್ಲು, ಹಮ್ಮಿಯಾಲ ಕುಂಡಮೇಸ್ತ್ರಿ, ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.