ಮಡಿಕೇರಿ, ಅ. 12: ಮೈಸೂರು ದಸರಾ ಉತ್ಸವ ಅಂಗವಾಗಿ ನಡೆಯುತ್ತಿರುವ 5-ಎ ಸೈಡ್ ಸಿಎಂ ಕಪ್ ಹಾಕಿ ಪಂದ್ಯಾವಳಿಯಲ್ಲಿ ಹಾಕಿ ಕೂರ್ಗ್ ತಂಡಗಳು ಮುನ್ನಡೆ ಸಾಧಿಸಿವೆ. ಪುರುಷರ ವಿಭಾಗದಲ್ಲಿ ಹಾಕಿ ಕೂರ್ಗ್ ತಂಡ ಹಾಸನ ಜಿಲ್ಲಾ ತಂಡವನ್ನು 6-2 ಗೋಲುಗಳಿಂದ ಸೋಲಿಸಿತು. ಕೂರ್ಗ್ ಪರ ನಿಕ್ಕಿನ್ ತಿಮ್ಮಯ್ಯ 2, ಸಿ.ಕೆ. ಸೋಮಣ್ಣ 3, ನಿತಿನ್ ತಿಮ್ಮಯ್ಯ 1 ಗೋಲು ಬಾರಿಸಿದರು. ಮಹಿಳೆಯರ ವಿಭಾಗದಲ್ಲಿ ಹಾಕಿ ಕೂರ್ಗ್ ತಂಡ ಹಾಕಿ ಧಾರವಾಡ ತಂಡವನ್ನು 4-2 ಗೋಲುಗಳಿಂದ ಮಣಿಸಿತು. ಕೂರ್ಗ್ ಪರ ವಿದ್ಯಾ 2, ನಿಶಾ ಹಾಗೂ ಪೂಜಾ ತಲಾ ಒಂದೊಂದು ಗೋಲು ಬಾರಿಸಿದರು. ತಂಡದ ತರಬೇತುದಾರರಾಗಿ ಬುಟ್ಟಿಯಂಡ ಚಂಗಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ.