ಒಡೆಯನಪುರ, ಅ. 12: ‘ನೇಕಾರ ಕುರುಹಿನ ಸಮಾಜದ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವದರ ಜೊತೆಯಲ್ಲಿ ಸಮಾಜ ಸೇವಾ ಕಾರ್ಯದಲ್ಲೂ ತೊಡಗಿಸಿಕೊಳ್ಳಿ’ ಎಂದು ಶನಿವಾರಸಂತೆ ನೇಕಾರ ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ಡಿ. ಅರವಿಂದ್ ರವಿ ಸಲಹೆ ನೀಡಿದರು. ಸ್ಥಳೀಯ ರಾಮಮಂದಿರದಲ್ಲಿ ನಡೆದ ಶನಿವಾರಸಂತೆ ನೇಕಾರ ಕುರುಹಿನ ಶೆಟ್ಟಿ ಸಮಾಜದ 64ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎ.ಜೀವನ್, ಕಾರ್ಯದರ್ಶಿಬಿ ಎಸ್. ಪ್ರಕಾಶ್, ಖಜಾಂಚಿ ಎಸ್.ಆರ್. ಮಧು, ಸಹ ಕಾರ್ಯದರ್ಶಿ ಬಿ.ಕೆ. ಮಂಜುನಾಥ್, ಮರಣ ನಿಧಿ ಅಧ್ಯಕ್ಷ ಬಿ.ಕೆ. ಚಂದ್ರಶೇಖರ್ ಪ್ರಮುಖರಾದ ಶಾಲಿನಿರಾಜ್, ಕೆಂಚಮ್ಮ, ಜಯಮ್ಮ, ಚಂದ್ರಕಲಾ ಮೋಹನ್, ಆರತಿ ಲಕ್ಷ್ಮಣ್ ಮುಂತಾದವರು ಇದ್ದರು.