ಮಡಿಕೇರಿ, ಅ. 12: ಪರ್ವತಾರೋಹಣ ಕುರಿತಂತೆ ಹೆಚ್ಚಿನ ತರಬೇತಿಗಾಗಿ ರಷ್ಯಾಕ್ಕೆ ನಾಪೋಕ್ಲು ಸಮೀಪದ ಪೇರೂರು ಗ್ರಾಮದ ತೆಕ್ಕಬೊಟ್ಟೋಳಂಡ ನಂಜುಂಡ (ಶಂಭು) ಮತ್ತು ಪಾರ್ವತಿ(ದಿವ್ಯ) ದಂಪತಿಯ ಪುತ್ರಿಯಾಗಿರುವ ಭವಾನಿ (ರಚ್ಚು) ಅವರು ತಾ.13ರಂದು ತೆರಳುತ್ತಿದ್ದಾರೆ.ಇವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಶ್ರೀಮಂಗಲದ ಜೆಸಿ ಶಾಲೆಯಲ್ಲಿ, ಬಳಿಕ ಗಾಳಿಬೀಡುವಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಮುಗಿಸಿ ಮಂಗಳೂರಿನ ಸೆಂಟ್ ಅ್ಯಗ್ನೇಸ್ ಕಾಲೇಜಿನಲ್ಲಿ ಪದವಿ ಮುಗಿಸಿ ಡಾರ್ಜಲಿಂಗ್‍ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್‍ನಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.